ಗುಬ್ಬಿ :
ರಾಜ್ಯದ ರಂಗಭೂಮಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿ ಕಲಾವಿದರನ್ನು ಸೃಷ್ಟಿಸಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲುತ್ತದೆ. ಜೀವಂತ ಆನೆ, ಕುದುರೆ ಹಾಗೂ ಇತರ ಪ್ರಾಣಿಗಳನ್ನು ಒಂದು ಪ್ರತ್ಯೇಕ ರೈಲಿನಲ್ಲಿ ಒಯ್ದು ನೂರಾರು ಕುಟುಂಬಗಳಿಗೆ ಆಸರೆಯಾಗಿ, 100 ವರ್ಷಗಳ ಕಾಲಮಾನವನ್ನು ಕಂಡ ಕೀರ್ತಿ ಈ ಕಂಪೆನಿಯದ್ದು, ಇಂತಹ ಕೀರ್ತಿ ಪತಾಕೆ ಹಾರಿಸಿದ ಊರಲ್ಲಿ ರಸ್ತೆಗಳದ್ದೆ ಸಮಸ್ಯೆ ಎಂದುಕೊಂಡಿದ್ದರೆ ಇಲ್ಲೊಂದು ಮರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದು, ಇನ್ನೇನೂ ರಸ್ತೆಗೆ ಬೀಳಲು ಸಿದ್ಧವಾಗಿ ನಿಂತಿದೆ.
ಗುಬ್ಬಿಯ ಪಶು ಆಹಾರ ಘಟಕದ ಸಮೀಪ ಹಳೆಯ ಆಲದಮರವೊಂದು ಒಣಗಿದ್ದು, ಯಾವಾಗ ಯಾರ ಮೇಲೆ ಬೀಳುತ್ತದೋ ತಿಳಿಯದಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ತಿರುಗಾಡುತ್ತವೆ. ಸಾರ್ವಜನಿಕರು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಮುಖಂಡ ಡಿ.ಕೆ.ರಘು ಅವರು ದೂರಿದ್ದಾರೆ. ಇದೇ ರೀತಿ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಇನ್ನೂ 2 ಮರಗಳು ಶಿಥಿಲವಾಗಿದ್ದು, ಅಧಿಕಾರಿಗಳು ಗಮನ ಹರಿಸಬೇಕೆಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ