ರೈತನನ್ನು ಅಡ್ಡಗಟ್ಟಿ ಸುಲಿಗೆ ; ಹಣ-ಮೊಬೈಲ್ ಕಸಿದು ಪರಾರಿ

ಗುಬ್ಬಿ :

      ರೈತನೊರ್ವನ ಕಾರು ಅಡ್ಡಗಟ್ಟಿ 15 ಸಾವಿರ ರೂ.ನಗದು ಮತ್ತು ಎರಡು ಮೊಬೈಲ್ ಫೋನ್‍ಗಳನ್ನು ಕಸಿದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

     ಸಿ.ಎಸ್.ಪುರ ಠಾಣಾ ವ್ಯಾಪ್ತಿಯ ಬಿಟ್ಟಗೊಂಡನಹಳ್ಳಿ ಬಳಿಯ ಕೇಶಿಪ್ ರಸ್ತೆಯಲ್ಲಿ ತುಮಕೂರು ಮಾರುಕಟ್ಟೆಯಿಂದ ತರಕಾರಿ ಮಾರಿದ್ದ 15 ಸಾವಿರ ರೂ.ಗಳೊಂದಿಗೆ ಸ್ವಗ್ರಾಮ ಬೆನಕನಗುಂದಿಗೆ ಮರಳುತ್ತಿದ್ದ ರೈತ ರಾಮಚಂದ್ರ ಅವರ ಓಮಿನಿ ವ್ಯಾನ್‍ನನ್ನು ತಡೆದು ತಮ್ಮ ವಾಹನ ಕೆಟ್ಟಿದ್ದು ರಿಪೇರಿಗಾಗಿ ಜಾಕ್ ನೀಡುವಂತೆ ನಾಟಕವಾಡಿ ನಂತರ ಮಾರಕಾಸ್ತ್ರ ತೋರಿಸಿ ಹಣ ಮತ್ತು ಎರಡು ಮೊಬೈಲ್‍ಗಳನ್ನು ಕಸಿದು ಪರಾರಿಯಾಗಿದ್ದಾರೆ.

ಪೆÇಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ : ಕಪ್ಪು ಬಣ್ಣದ ಸ್ಯಾಂಟ್ರೋ ಕಾರಿನಲ್ಲಿ ಬಂದಿದ್ದ ನಾಲ್ಕು ಮಂದಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು, ಕೇಶಿಪ್ ರಸ್ತೆ ಕೂಡಾ ಸುರಕ್ಷತೆ ಇಲ್ಲ ಎಂಬುದು ರುಜುವಾತಾಗಿದೆ. ಕಲ್ಲೂರು ಕೆರೆ ಏರಿ ಮೇಲೆ ರೈತನನ್ನು ಹಿಂಬಾಲಿಸಿದ ಸುಲಿಗೆ ಮಾಡಿದ ದುಷ್ಕರ್ಮಿಗಳ ಎಡೆಮುರಿ ಕಟ್ಟಬೇಕಿದ್ದು, ಇಂತಹ ದರೋಡೆಗಳು ಸಾಕಷ್ಟು ನಡೆಯುವ ಮುನ್ನಾ ಪೆÇಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೋರ್ಟ್ ಆದೇಶವಿದೆ ಮಾಹಿತಿ ನೀಡಲ್ಲ : ಜಿಲ್ಲೆಯಲ್ಲಿ ಕ್ರೈಂ ಹೆಚ್ಚಾಗಿರುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದು, ಜಿಲ್ಲೆಯಲ್ಲಿ ಪೆÇಲೀಸ್ ವೈಫಲ್ಯ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಈಚೆಗೆ ನೀಡಿದ ಹೇಳಿಕೆಗೆ ಪುಷ್ಠಿ ನೀಡಿದಂತೆ ಈ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ತಂದಿದೆ. ಈ ಘಟನೆ ಸಾರ್ವಜನಿಕರಲ್ಲಿ ಹಲವು ಚರ್ಚೆಗೆ ಗ್ರಾಸವಾಗಿ, ಭಯ ಹುಟ್ಟಿಸಿದೆ. ಮಾಧ್ಯಮದವರು ಪೆÇಲೀಸ್ ಠಾಣೆಯಲ್ಲಿ ಮಾಹಿತಿ ಕೇಳಿದರೆ ನ್ಯಾಯಾಲಯದ ಆದೇಶವಿದೆ ಮಾಹಿತಿ ನೀಡುವುದಿಲ್ಲ ಎಂಬ ಉತ್ತರ ಮಾಮೂಲಿಯಾಗುತ್ತಿದೆ. ಜನರಿಗೆ ಅಪರಾಧ ಕೃತ್ಯಗಳ ಬಗ್ಗೆ ತಿಳಿಸುವ ಅಗತ್ಯತೆ ಬೇಡವೆಂಬ ಮನಸ್ಥಿತಿ ಇಲಾಖೆಗೆ ಬಂದಿರುವುದೇ ವಿಪರ್ಯಾಸ ಎಂದು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.

ಶಾಸಕರು ಜವಬ್ದಾರಿ ಅರಿಯಲಿ :

       ತಾಲ್ಲೂಕಿನ ಮೂಲೆ ಮೂಲೆಗಳಲ್ಲಿ ಭಯ ಭೀತಿ ಇಲ್ಲದೆ ಜೂಜು ನಡೆಯುತ್ತಿದ್ದು, ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ಹರಿಸಿಲ್ಲ, ಗುಬ್ಬಿ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ತಾನೇ ಪಿಕಪ್ ಜೀಪಿನಲ್ಲಿ ಹೆಣ ಸಾಗಿಸಲಿಲ್ಲ ಎಂಬ ಕಾರಣಕ್ಕೆ ಚಾಲಕನ ಬಳಿ 7000 ಸಾವಿರ ರೂ. ಗೂಗಲ್ ಪೇ ಮಾಡಿಸಿಕೊಂಡ ಘಟನೆ ಹಸಿಯಾಗಿರುವಾಗಲೇ ಈ ರೀತಿ ಕೃತ್ಯವಾಗಿದ್ದರೂ, ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಜಾಣ ಮೌನ ಅರ್ಥವಾಗುತ್ತಿಲ್ಲ. ಇಂತಹ ಪ್ರಕರಣಗಳಾದಾಗ ಕ್ಷೇತ್ರದ ಶಾಸಕರು ಸಂಸದರ ಮೇಲೆ ದೂರುತ್ತಾ ಕೈ ಚೆಲ್ಲಿ ಕೂರುತ್ತಾರೆ. ನಾಲ್ಕು ಬಾರಿ ಗೆದ್ದವರು, ಮಂತ್ರಿಯಾಗಿದ್ದವರು ಈ ರೀತಿ ಹೇಳಿದರೆ ಹೇಗೆ, ಇದು ಎಷ್ಟು ಸಮಂಜಸ ಎಂದು ಜನ ಅಲ್ಲಲ್ಲಿ ಮಾತನಾಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link