ಗುಬ್ಬಿ :
ಪಟ್ಟಣದಲ್ಲಿ ಹಲವು ಮೂಲಭೂತ ಸಮಸ್ಯೆಗಳಿದ್ದು, ಪಪಂ ಅಧ್ಯಕ್ಷರು ದಿನ ನಿತ್ಯ ಓಡಾಡುವ ಗಟ್ಟಿ ಬಡಾವಣೆಯ ರಸ್ತೆಯು ಗುಂಡಿಗಳಿಂದ ಕೂಡಿದೆ. ಈ ಬಗ್ಗೆ ಸಾರ್ವಜನಿಕರು ವರ್ಷಗಳಿಂದ ದೂರು ಕೊಟ್ಟರೂ ಪಪಂ ಸಿಬ್ಬಂದಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪಟ್ಟಣದ ನಾಗರಿಕರು ದೂರಿದ್ದಾರೆ.
ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಪಂಚಾಯಿತಿ ಖರ್ಚಿನಲ್ಲಿ ತುಂಬಿಸುವುದರ ಮೂಲಕ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ ಆದರೇ ಪಟ್ಟಣದೊಳಗಿನ ರಸ್ತೆ ಸರಿಪಡಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ರಸ್ತೆಯು ರಾಜ್ಯ ಹೆದ್ದಾರಿ 84ಕ್ಕೆ ಸೇರುತ್ತದೆ. ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದು ರಸ್ತೆ ರಿಪೇರಿ ಮಾಡಿಸಬಹುದಿತ್ತು ಆದರೆ ಈ ಕಾರ್ಯ ಆಗಿಲ್ಲ. ಇದಕ್ಕೆ ಸೂಕ್ತ ಕಾರಣ ತಿಳಿಯುತ್ತಿಲ್ಲ.
ಗುಬ್ಬಿ ಪಟ್ಟಣದಲ್ಲಿನ ವಿವಿಧ ಬಡಾವಣೆಗಳಲ್ಲಿ 30 ಅಡಿಗೂ ಕಡಿಮೆ ಇರುವ ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಕೆಲಸ ಈಗ್ಗೆ 3 ದಿನಗಳಿಂದ ಭರದಿಂದ ಸಾಗಿದೆ. ಈ ತ್ವರಿತ ಕಾಮಗಾರಿಯ ವೇಗ ಎಷ್ಟಿದೆಯೆಂದರೆ 4ನೇ ವಾರ್ಡ್‍ನ ಸದಸ್ಯರಾದ ಜಿ.ಕೃಷ್ಣಮೂರ್ತಿಯವರು ಸ್ವತಃ ತಾವೇ ಖುದ್ದಾಗಿ ಈ ರಸ್ತೆಗೆ ನೀರು ಸಿಂಪಡಿಸುವುದರ ಮೂಲಕ ಕ್ಯೂರಿಂಗ್ ಮಾಡುತ್ತಿದ್ದಾರೆ. ಎಲ್ಲಾ ಗುತ್ತಿಗೆದಾರರಿಗೆ ಬಿಟ್ಟು, ಕಾಮಗಾರಿಯನ್ನು ವೀಕ್ಷಿಸಿ ಫೋಟೋಗೆ ಪೋಸ್ ಕೊಡುವ ಸದಸ್ಯರ ನಡುವೆ ಇಂತಹ ಸದಸ್ಯರಿರುವುದು ಅಭಿನಂದನಾರ್ಹ ಎಂದು ವಾರ್ಡ್‍ನ ಜನ ಹೇಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
