ಗುಬ್ಬಿ:
ರಾಷ್ಟ್ರೀಯ ಹೆದ್ದಾರಿ 73 ರ ಕಾಮಗಾರಿ ಸುಮಾರು 7 ವರ್ಷಗಳಿಂದ ಮಾಡುತ್ತಿದ್ದರು ಇನ್ನು ಇದನ್ನು ಪೂರ್ಣಗೊಳಿಸಿಲ್ಲ. ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಪತ್ರೆ ಮತ್ತಿಘಟ್ಟದ ಗ್ರಾಮದ ಬಳಿ ವರ್ತುಲ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡಿದ್ದು ಇದಕ್ಕೆ ಹೊಂದಿಕೊಂಡಂತೆ ಸರ್ವಿಸ್ ರಸ್ತೆ ಇದ್ದು ಈ ರಸ್ತೆ ನೆನ್ನೆ ಸುರಿದ ಬಾರಿ ಮಳೆಯಿಂದ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷದಿಂದ ನೂರಾರು ವರ್ಷ ಗಳಿಂದ ವದಲೂರು ಕೆರೆಗೆ ಹೋಗುವ ರಾಜ ಕಾಲುವೆ ಮಾರ್ಗವನ್ನು ಮುಚ್ಚಿದ್ದು ಇದರಿಂದ ಮಳೆಯ ನೀರು ಸುಮಾರು 3 ಅಡಿಗಳಷ್ಟು ರೈತರ ತೋಟದಲ್ಲಿ ನಿಂತಿದ್ದು
ಅಡಿಕೆ ತೆಂಗಿನ ಸಸಿಗಳು ನಾಶವಾಗುವ ಹಂತದಲ್ಲಿವೆ ಎಂದು ರೈತರು ಕಂಗಾಲಾಗಿದ್ದಾರೆ.ಕೂಡಲೇ ಮುಚ್ಚಿರುವ ರಾಜ ಕಾಲುವೆಯನ್ನು ತೆರವುಗೊಳಿಸಿ ನೀರು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯ ಪತ್ರೆ ದಿನೇಶ್ ಆಗ್ರಹಪಡಿಸಿದ್ದಾರೆ.