ಗುಬ್ಬಿ;
ಗುಬ್ಬಿತಾಲೂಕಿನ ಹಳ್ಳಿಗಳಲ್ಲಿ ಯತೇಚ್ಛವಾಗಿ ಮದ್ಯಮಾರಾಟ ಹಳ್ಳಿಗಳಲ್ಲಿನ ಪೆಟ್ಟಿಗೆ ಅಂಗಡಿಗಳಲ್ಲಿ ಆಗುತ್ತಿದೆ ಗುಬ್ಬಿ ಹೊಸಹಳ್ಳಿ ಕ್ರಾಸ್ ನ ಪೆಟ್ಟಿಗೆ ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ದಲಿತರ ಕುಂದು ಕೊರತೆ ಸಭೆಯಲ್ಲಿ ತಮ್ಮ ಅಹವಾಲು ತೋಡಿಕೊಂಡ ದಲಿತ ಮುಖಂಡರುಗಳು, ಇಂದು ಗುಬ್ಬಿಯ ಸರ್ಕಲ್ ಇನ್ಸ್ ಪೆಕ್ಟ್ ರ್ ಕಚೇರಿಯಲ್ಲಿ ಗುಬ್ಬಿ ತಾಲೂಕು ದಲಿತರ ಕುಂದು ಕೊರತೆ ಸಭೆ ನೆಡೆಯಿತು ಈ ಸಭೆಯಲ್ಲಿ ಹತ್ತು ಹಲವಾರು ವಿಷಯಗಳು ಚರ್ಚೆಯಾಯಿತು ಇದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಗುಬ್ಬಿ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಭರವಸೆ ನೀಡಿದರು,
ಈ ಸಭೆಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷಿದ್ಧ ಇನ್ನು ಕೆಲವು ಕಡೆ ಇದೆ ಎನ್ನುವುದು ಚರ್ಚೆಯಾಯಿತು,ಗುಬ್ಬಿ ಹೊಸಹಳ್ಳಿ ಬಸ್ ನಿಲ್ದಾಣದಲ್ಲೇ ಸರ್ಕಾರಿ ಶಾಲೆ ಇದ್ದು, ಇಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ ಆದ್ದರಿಂದ ಅಲ್ಲಿ ರಸ್ತೆ ಉಬ್ಬುಗಳನ್ನು ಹಾಕಿಸಿ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಕುನ್ನಾ ಲದಲ್ಲಿ ನಿವೇಶನ ವಿವಾದಕ್ಕೆ ನ್ಯಾಯ ಕೊಡಿಸಲು ಹೋದ ದಲಿತ ಮುಖಂಡನ ಮೇಲೆ ಕೇಸ್ ಹಾಕಲಾಗಿದೆ, ಎಂಬ ವಿಚಾರಗಳು ಚರ್ಚೆಯಾಯಿತು, ಈ ಸಭೆಯಲ್ಲಿ ಕಡಬ ಶಂಕರ್,ಬಸವರಾಜು, ಬಿ ಲೋಕೇಶ್, ಕಿಟ್ಟದಕುಪ್ಪೆಯ ನಾಗರಾಜು, ಅರಿವೆಸಂದ್ರದ ಕೃಷ್ಣಪ್ಪ, ಮದು, ಕೆ, ಹೊಸಹಳ್ಳಿ ರವೀಶ್, ಎನ್ ಎ,ನಾಗರಾಜು, ಭಾಗವಹಿಸಿದ್ದರು,
