ಗುಬ್ಬಿ:
ಪಟ್ಟಣದ ಎಂ ಜಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನ ಸವಾರರನ್ನು ಯಾರು ಕೇಳುವವರೇ ಇಲ್ಲದಂತಾಗಿದೆ ಜೊತೆಗೆ ಪಾದಚಾರಿ ಮಾರ್ಗಕ್ಕೆ ಅಂಟಿಕೊಂಡಂತೆ ಕೆಲವರು ಅಂಗಡಿಗಳ ಸಾಮಗ್ರಿಗಳನ್ನು ಇಟ್ಟುಕೊಂಡಿರುವುದು ಕಂಡು ಬರುತ್ತದೆ
ಪ್ರತಿ ಸೋಮವಾರ ತಾಲೂಕಿನ ಪ್ರತಿ ಹಳ್ಳಿಗಳಿಂದ ಕಚೇರಿ ಕೆಲಸಗಳಿಗೆಂದು ಬರುವ ರೈತರು ನಾಗರೀಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಲ್ಪಿಸುವ ಅಗತ್ಯವಿದೆ ಈ ಹಿಂದೆ ಗುಬ್ಬಿ ಪೋಲಿಸ್ ಇಲಾಖೆಯಿಂದ ಒಂದೊಂದು ದಿನ ಒಂದೊಂದು ಬದಿಯಲ್ಲಿ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು ಆಗ ಈ ಕಿರಿ ಕಿರಿ ಇರಲಿಲ್ಲ ಹಲವು ವರ್ಷಗಳಷ್ಟೇ ಈ ಕಾನೂನು ಜಾರಿಯಲ್ಲಿತ್ತು ಆದರೆ ಈಗ ಇದು ಇರುವುದಿಲ್ಲ
ಗುಬ್ಬಿ ಪೊಲೀಸ್ ಇಲಾಖೆಯ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಬೇಕು ಎಂಬುದೇ ಗುಬ್ಬಿ ಜನರ ಆಶಯವಾಗಿದೆ ಈ ಬಗ್ಗೆ ಹಲವಾರು ಅರ್ಜಿಗಳನ್ನು ಕೊಟ್ಟರು ಪೊಲೀಸ್ ಇಲಾಖೆ ಗಮನ ಹರಿಸಿಲ್ಲ ಎಂದು ಗುಬ್ಬಿ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಎಚ್ ಡಿ ಎಲ್ಲಪ್ಪ ಬೇಸರ ವ್ಯಕ್ತಪಡಿಸಿದರು,

 


