ಗುಬ್ಬಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ

ಗುಬ್ಬಿ:

ವಿಶೇಷ ವರದಿ :ರಾಜೇಶ್ ಗುಬ್ಬಿ,

    ಗುಬ್ಬಿ ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು ಈ ಬಗ್ಗೆ ಸಂಬಂಧಪಟ್ಟಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ,ಸುಮಾರು ಇಪ್ಪತ್ತೆರಡು ಸಾವಿರ ಜನಸಂಖ್ಯೆಯುಳ್ಳ ಗುಬ್ಬಿ ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು ತುಮಕೂರಿಗೆ ಉಪನಗರವಾಗಿ ಬೆಳೆಯುತ್ತಿದೆ ನಿತ್ಯ ಸಾವಿರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಸಂಚರಿಸುತ್ತಿದ್ದು ಆಗಾಗ ಅಪಘಾತ ಗಳು ಸಂಭವಿಸುತ್ತಿರುತ್ತವೆ ಹೆಚ್ಚಿನದಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದು ಇವರಲ್ಲಿ ಹೆಚ್ಚಿನವರು ಕೈ ಹಾಗೂ ಕಾಲು ಮೂಳೆ ಮುರಿದುಕೊಳ್ಳುತ್ತಿದ್ದಾರೆ ಹೀಗಾದವರೆಲ್ಲರಿಗೆ ಗುಬ್ಬಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಕಾರಣ ತಜ್ಞ ವೈದ್ಯರ ಕೊರತೆ ಸುಮಾರು ಆರು ತಿಂಗಳ ಹಿಂದೆ ಇದ್ದ ಮೂಳೆ ತಜ್ಞರು ನಿವೃತ್ತಿ ಹೊಂದಿದಮೇಲೆ ಇಲ್ಲಿ ಮೂಳೆ ತಜ್ಞರ ಹುದ್ದೆ ಕಾಲಿ ಇದೆ ಅಪಘಾತವಾದವರು ಖಾಸಗಿ ವೈದ್ಯರ ಮೊರೆ ಹೋಗಬೇಕಾಗಿದೆ ಅಲ್ಲಿ ನೂರೈವತ್ತು ರೂ ಖರ್ಚಾಗುವ ಚಿಕಿತ್ಸೆಗೆ ಮೂರು ನಾಲ್ಕು ಸಾವಿರ ತೆಗೆದುಕೊಳ್ಳುತ್ತಾರೆ

    ಬಡವರಿಗೆ ಕೂಲಿ ಕಾರ್ಮಿಕರಿಗೆ ರೈತರಿಗೆ ಅಪಘಾತ ಸಂಭವಿಸಿದಲ್ಲಿ ದೇವರೇ ಗತಿ ಅವರು ಸಾಲ ಸೋಲ ಮಾಡಿ ತಮ್ಮ ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ ಈ ಬಗ್ಗೆ ಯಾರೂ ಹೆಚ್ಚಿನ ಕಾಳಜಿ ವಹಿಸಿಲ್ಲ .ಇಲ್ಲಿ ತುರ್ತು ಸೇವೆಗೆಂದೇ ವಿಶೇಷ ಸೌಲಭ್ಯ ಒದಗಿಸಿದ್ದಾರಾದರು ಇಲ್ಲಿಯೂ ವೈದ್ಯರ ಕೊರತೆಯಿದೆ ಸುಮಾರು 3 ರಿಂದ 4 ಜನ ವೈದ್ಯರು ತುರ್ತು ನಿಗಾ ಘಟಕ ದಲ್ಲಿ ಕೆಲಸ ನಿರ್ವಹಿಸಬೇಕು ಆದರೆ ಇಲ್ಲಿ ಯಾರೂ ಇಲ್ಲಯಾವುದಾದರೂ ರೋಗಿ ತುರ್ತು ಸೇವೆಗೆ ಬಂದರೆ ಅಸ್ಪತ್ರೆಯಲ್ಲಿರುವ ಕರ್ತವ್ಯ ನಿರತ ವ್ಯದ್ಯರೇ ಇವರನ್ನ ನೋಡಬೇಕು.ಇಲ್ಲವಾದರೆ ತುಮಕೂರಿನ ಜಿಲ್ಲಾಸ್ಪತ್ರೆಗೆ ಕಳಿಸಬೇಕು ಹೀಗಿದೆ ಗುಬ್ಬಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸ್ಥಿತಿ.

    ಕಳೆದ ಐದು ವರ್ಷಗಳಿಂದ ಇಲ್ಲಿ ಡಿಜಿಟಲ್ ಎಕ್ಸ್ ರೆ ಯಂತ್ರಕ್ಕಾಗಿ ಹಲವಾರು ಮನವಿಗಳು ಹೋದರು ಇನ್ನು ಇದಕ್ಕೆ ಕಾಲ ಕೂಡಿಬಂದಿಲ್ಲ ಇದನ್ನು ಗಮನಿಸಿದರೆ ಖಾಸಗಿ ಲ್ಯಾಬ್ ನವರ ಜೊತೆ ಜಿಲ್ಲಾ ವೈದ್ಯಾಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿರುವ ಅನುಮಾನಗಳು ಕಾಣುತ್ತಿವೆ, ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಗೆ ಡಿಜಿಟಲ್ ಎಕ್ಸ್ ರೆ ಯಂತ್ರವಿಲ್ಲವೆಂದರೆ ಇನ್ನು ಹಳ್ಳಿಗಳಲ್ಲಿನ ಆಸ್ಪತ್ರೆಗಳ ಸ್ಥಿತಿ ನೀವೇ ಊಹಿಸಬಹುದು ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಜೀಪಿಗೆ ಅಡ್ಡ ಕೂತು ಮುಷ್ಕರ ಮಾಡಿದ ಘಟನೆ ಕೂಡ ನೆಡೆದಿದೆ ಆದರೂ ಇದು ಅಶ್ವಾಸನೆಯಾಗಿಯೇ ಉಳಿದಿದೆ

ನಮ್ಮ ಆಸ್ಪತ್ರೆಯಲ್ಲಿ ಮೂಳೆ ತಜ್ಞರು ಮತ್ತು ತುರ್ತು ಚಿಕೆತ್ಸೆಗೆ ಇರುವ ತಜ್ಞರ ಕೊರತೆಯಿದೆ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದು ಇತ್ತೀಚೆಗೆ ಪಿ ಜಿ ಓದುತ್ತಿರುವ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು, ತುರ್ತು ಚಿಕಿತ್ಸೆಗೆ ವೈದ್ಯರು ಬೇಕಾಗಿದ್ದಾರೆ ಎಂದರು- ಡಾ ಕೇಶವರಾಜು ಮುಖ್ಯ ವೈದ್ಯಾಧಿಕಾರಿಗಳು ಗುಬ್ಬಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಗುಬ್ಬಿಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇರುವುದು ನಿಜ ಈ ಬಗ್ಗೆ ಕಳೆದ ವಾರ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರಿಗೆ ಮನವಿ ಸಲ್ಲಿಸಿದ್ದೇವೆ ಅವರು ಆರೋಗ್ಯ ಮಂತ್ರಿಗಳ ಜೊತೆಯಲ್ಲಿ ಮಾತನಾಡಿ ವೈದ್ಯರ ಕೊರತೆ ತುಂಬುವುದಾಗಿ ತಿಳಿಸಿದ್ದಾರೆ,-ಡಾ ಬಿಂದು ಮಾಧವ್, ತಾಲೂಕು ವೈದ್ಯಾಧಿಕಾರಿಗಳು ಗುಬ್ಬಿ,

Recent Articles

spot_img

Related Stories

Share via
Copy link