ಹುಂಡಿ ಹಣದ ಜೊತೆ ಸಿಸಿ ಕೆಮರಾ ಹಾರ್ಡಿಸ್ಕ್ ಹೊತ್ತೊಯ್ದ ಕಳ್ಳರು!

  ಗುಬ್ಬಿ   : 

     ಗುಬ್ಬಿ ದೇವಾಲಯದ ಕಿಟಿಕಿ ಸರಳು ಮುರಿದು ಒಳಹೊಕ್ಕ ಕಳ್ಳರು ಹುಂಡಿ ಹಣ ದೋಚುವ ಜತೆಗೆ ಸಿಸಿ ಕೆಮರಾ ಹಾರ್ಡಿಸ್ಕ್ ಹೊತ್ತೊಯ್ದ ಘಟನೆ ಗೌರಿ ಹಬ್ಬದ ಮುಂಜಾನೆ ತಾಲ್ಲೂಕಿನ ಕಡಬ ಗ್ರಾಮಸ್ಥರಿಗೆ ಶಾಕ್ ನೀಡಿದೆ.

      ಕಡಬ ಗ್ರಾಮದ ಆರಾಧ್ಯ ದೈವ ದಂಡಿನ ಮಾರಮ್ಮ ದೇವಾಲಯಕ್ಕೆ ಮುಂಜಾನೆ ಬೆಳಕಿಗೆ ಬಂದ ಈ ದೃಶ್ಯ ಹಬ್ಬದ ದಿನ ದೇವಾಲಯಕ್ಕೆ ಬಂದ ನೂರಾರು ಭಕ್ತರಲ್ಲಿ ಆತಂಕ ಮೂಡಿಸಿದೆ. ಕಿಟಿಕಿ ಸರಳುಗಳನ್ನು ಅಚ್ಚಕಟ್ಟಾಗಿ ವೆಲ್ಡಿಂಗ್ ಮೂಲಕ ಕತ್ತರಿಸಿದ ಖದೀಮರು ಹುಂಡಿಯಲ್ಲಿದ್ದ ಸುಮಾರು ಒಂದು ಲಕ್ಷ ರೂಗಳಿಗೆ ಅಧಿಕ ಹಣ ದೋಚಿರುವ ಅಂದಾಜು ಮಾಡಲಾಗಿದೆ. ಜತೆಗೆ ನಿಂಬೆಹಣ್ಣು ವಾಮಾಚಾರ ಮಾಡಲಾಗಿದೆ. ಈ ಹಿಂದೆ ಎರಡು ಬಾರಿ ಹುಂಡಿ ಕಳವು ಯತ್ನ ನಡೆದಿತ್ತು ಎಂದು ಭಕ್ತರು ಆರೋಪಿಸುತ್ತಿದ್ದಾರೆ.

      ಶ್ರಾವಣ ಮಾಸದಲ್ಲಿ ಮಾರಮ್ಮದೇವಿಗೆ ಸಾಕಷ್ಟು ಭಕ್ತರು ಕಾಣ ಕೆ ನೀಡುವ ಸಂಪ್ರದಾಯವಿದೆ. ಈ ನಿಟ್ಟಿನಲ್ಲಿ ದೇವಾಲಯ ಸಮಿತಿಯು ಅಂದಾಜು ಎರಡು ಲಕ್ಷದವರೆಗೆ ಹಣ ಕಳವು ಆಗಿರುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸಿಸಿ ಕೆಮರಾ ಹಾರ್ಡಿಸ್ಕ್ ಕೂಡಾ ತೆಗೆದುಕೊಂಡು ಹೋದ ಕಳ್ಳರು ವ್ಯವಸ್ಥಿತ ಜಾಲ ಹೊಂದಿದ್ದಾರೆ. ತುರುವೇಕೆರೆ ಗಡಿ ಭಾಗದಲ್ಲೂ ಸಣ್ಣಪುಟ್ಟ ದೇವಾಲಯಗಳ ಸರಣ ಕಳ್ಳತನದ ಬಗ್ಗೆ ಸಾರ್ವಜನಿಕರು ಚರ್ಚಿಸಿದರು. ದೇವಾಲಯದ ಸಮೀಪದಲ್ಲೇ ಪೊಲೀಸ್ ಉಪಠಾಣೆ ಇದ್ದರೂ ಈ ಕಳ್ಳತನ ಪ್ರಕರಣ ನಡೆದಿರುವುದು ಅಚ್ಚರಿ ತಂದಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

     ಕಳ್ಳತನ ಪ್ರಕರಣದಿಂದ ಹಬ್ಬದ ಪೂಜೆಗೆ ಬಂದ ಭಕ್ತರಿಗೆ ಬಾಗಿಲು ಮುಚ್ಚಿದ ದೇವಾಲಯದ ಹೊರಭಾಗದಲ್ಲೇ ಪೂಜೆ ಸಲ್ಲಿಸುವಂತಾಯಿತು. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link