ಯಾರಿದು ಗೊತ್ತಾ…..?

ಬೆಂಗಳೂರು :

    ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ, ಸಿಂಗರ್ ಹಾಗೂ ನಟ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಈಗಂತು ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಇವರು ಹೊಸ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿದ್ದರು. ಅದು ಅಂತು ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಕಾಟನ್ ಕ್ಯಾಂಡಿ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲೆಲ್ಲಾ ಅದರದ್ದೇ ಹವಾ. ಇದೀಗ ಚಂದನ್ ಶೆಟ್ಟಿ ಹೊಸ ಪೋಸ್ಟ್​ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಹಾಕಿರುವ ಒಂದು ಫೋಟೋ ಭಾರಿ ವೈರಲ್ ಆಗ್ತಿದೆ. ಇದಕ್ಕೆ ಕಾರಣ ಅವರು ಮಾಡಿಕೊಂಡ ಹೊಸ ಲುಕ್..! ಮೀಸೆ, ದಾಡಿ ತೆಗೆದು, ಗಲ್ಲದ ಬಳಿ ಕುರುಚಲು ಗಡ್ಡ ಇಟ್ಟು ಫೋಟೋ ತೆಗೆದು ಚಂದನ್ ಶೆಟ್ಟಿಯವರು ತಮ್ಮ ಆಫೀಶಿಯಲ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿ ಹಲವರು ಫಿದಾ ಆಗಿದ್ದಾರೆ. ಚಂದನ್ ಶೆಟ್ಟಿಗೆ ಹೊಸ ಲುಕ್​ಗೆ ಲೈಕ್ಸ್-ಕಮೆಂಟ್​ಗಳ ಸುರಿಮಳೆಯೇ ಬಂದಿದೆ.

    ಚಂದನ್ ಶೆಟ್ಟಿ ಅವರು ಈ ಹೊಸ ಲುಕ್ ಜೊತೆಗೆ ಒಂದು ಲೈನ್ ಕೂಡ ಬರೆದುಕೊಂಡಿದ್ದಾರೆ. When life doesn’t allow you to change anything else, Get a new look ಎಂದು ಚಂದನ್ ಬರೆದಿದ್ದಾರೆ. ಅಂದರೆ “ಜೀವನದಲ್ಲಿ ಯಾವುದನ್ನೂ ಬದಲಾವಣೆ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲವೋ ಆಗ‌ ನಿಮ್ಮ ಲುಕ್ ಚೇಂಜ್ ಮಾಡಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ.

   ಚಂದನ್ ಶೆಟ್ಟಿ ಯಾವ ಕಾರಣಕ್ಕೆ ಈ ರೀತಿ ಬರೆದಿದ್ದಾರೆ ಗೊತ್ತಿಲ್ಲ. ಆದರೆ, ಇದನ್ನು ನೋಡಿದ ಫ್ಯಾನ್ಸ್ ಕಮೆಂಟ್ ಮೂಲಕ ಪ್ರೋತ್ಸಾಹ ನೀಡುತ್ತಾ ಇದ್ದಾರೆ. ಈಗಷ್ಟೇ ಕಾಲೇಜಿಗೆ ಹೊರಟಿರೋ ಹೀರೋ ಥರ ಕಾಣಿಸ್ತಾ ಇದ್ದೀರಾ ಬ್ರೋ ಎಂದು ಒಬ್ಬರು ಎಂದರೆ, ಇನ್ನೊಬ್ಬರು ಬೆಂಕಿ ಅಂತ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲವರು ಹಳೇ ಚಂದು ಈಸ್ ಬ್ಯಾಕ್ ಅಂದಿದ್ದಾರೆ.

    ಚಂದನ್ ಶೆಟ್ಟಿ ಈ ಹಿಂದೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಮಾಡಿದ್ದರು. ಹಾಗೆ ಹೀರೋ ಆಗಿಯೇ ಸೂತ್ರಧಾರಿ, ಎಲ್ರ ಕಾಲೆಳಿಯುತ್ತೆ ಕಾಲ, ಮುದ್ದು ರಾಕ್ಷಸಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. ನಿವೇದಿತಾ ಗೌಡ ಜೊತೆಗೆ ಡಿವೋರ್ಸ್ ಆದ ಮೇಲೆ ಚಂದನ್ ಶೆಟ್ಟಿ ಹೆಸರು ಅನೇಕ ಹೆಸರಿನ ಜೊತೆಗೆ ಲಿಂಕ್ ಆಗಿತ್ತು. ಕಾಟನ್ ಕ್ಯಾಂಡಿ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಸುಷ್ಮಿತಾ ಅವರ ಜೊತೆಗೂ ಕೇಳಿ ಬಂದಿತ್ತು.

Recent Articles

spot_img

Related Stories

Share via
Copy link