ಗೈಡ್ ಲೈನ್ ಅಳವಡಿಕೆಗೆ ಪಿಜಿಗಳಿಗೆ ಡೆಡ್ ಲೈನ್ ಕೊಟ್ಟ ಪಾಲಿಕೆ

ಬೆಂಗಳೂರು

   ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆಯಾದ ಬಳಿಕ ಬಿಬಿಎಂಪಿ ಒಂದಷ್ಟು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿತ್ತು. ಬೆಂಗಳೂರಿನ  ಪಿಜಿಗಳಲ್ಲಿ ಆ ಗೈಡ್ ಲೈನ್ ಅಳವಡಿಸಲು ಸೂಚನೆ ಕೂಡ ನೀಡಿತ್ತು. ಸೂಚನೆ ಕೊಟ್ಟರೂ ಗೈಡ್ ಲೈನ್ ಪಾಲಿಸದ ಪಿಜಿಗಳಿಗೆ ಇದೀಗ ಪಾಲಿಕೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ. ಗೈಡ್ ಲೈನ್ ಅಳವಡಿಕೆಗೆ ಸೆಪ್ಟೆಂಬರ್ 15ರ ತನಕ ಗೈಡ್ ಲೈನ್ ನೀಡಿರೋ ಪಾಲಿಕೆ, ನಿಯಮ ಪಾಲಿಸದಿದ್ರೆ ಪಿಜಿ ಬಂದ್ ಮಾಡೋಕೆ ಸಜ್ಜಾಗಿದೆ. ಪಾಲಿಕೆ ನೀಡಿದ್ದ ಗೈಡ್​​ ಲೈನ್ಸ್​ ಪಾಲನೆಗೆ ಪಿಜಿ ಮಾಲೀಕರು ಅಸಡ್ಡೆ ತೋರಿದ್ದಾರೆ. ಈ ಹಿನ್ನೆಲೆ ಸೆಪ್ಟೆಂಬರ್​​​ 15 ಗಡುವು ನೀಡಿರೋ ಪಾಲಿಕೆ ಖಡಕ್ ಎಚ್ಚರಿಕೆ ನೀಡಿದೆ.

   ಸದ್ಯ ಅನಧಿಕೃತ ಪಿಜಿಗಳಿಗೂ ಕಡಿವಾಣ ಹಾಕಲು ಪ್ಲಾನ್ ಮಾಡಿರೋ ಪಾಲಿಕೆ, ಗೈಡ್ ಲೈನ್ ಜೊತೆಗೆ ಲೈಸನ್ಸ್​ ಹಾಗೂ ಭದ್ರತೆ ಇಲ್ಲದೆ ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ ಅಂತಾ ಪಾಲಿಕೆ ಪತ್ತೆ ಹಚ್ಚಿದೆ. ಇದರಲ್ಲಿ ಬೊಮ್ಮನಹಳ್ಳಿ, ಮಹಾದೇವಪುರ ಭಾಗದಲ್ಲೇ ಅತಿ ಹೆಚ್ಚಿದ್ದು, ಪಾಲಿಕೆಯಿಂದ ಪರವಾನಗಿ ಪಡೆದು ಕಾರ್ಯಾಚರಣೆ ಮಾಡುತ್ತಿರುವ ಪಿಜಿಗಳ ಸಂಖ್ಯೆ ಕೇವಲ 2 ಸಾವಿರ ಮಾತ್ರ ಇದೆ. ಇತ್ತ ಪಾಲಿಕೆ ನಡೆ ಬಗ್ಗೆ ಪ್ರತಿಕ್ರಿಯಿಸಿರೋ ಪಿಜಿ ಮಾಲೀಕರ ಸಂಘ, ಎಲ್ಲಾ ನಿಯಮಗಳನ್ನೂ ಈಗಾಗಲೇ ಅಧಿಕೃತ ಪಿಜಿ ಮಾಲೀಕರು ಅಳವಡಿಸಿದ್ದಾರೆ. ಆದ್ರೆ 70 ಚದರ ಅಡಿಯನ್ನ ಒಬ್ಬ ವ್ಯಕ್ತಿಗೆ ಮೀಸಲಿಡಬೇಕು ಎನ್ನುವುದು ಅವೈಜ್ಞಾನಿಕ ಎಂದಿದ್ದಾರೆ.ಇನ್ನು ಪಿಜಿಗಳಲ್ಲಿ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಪಾಲಿಕೆ ಈಗಾಗಲೇ ಕೆಲ ಗೈಡ್ ಲೈನ್ ಹೊರಡಿಸಿದೆ.

Recent Articles

spot_img

Related Stories

Share via
Copy link
Powered by Social Snap