SSLC EXAM -2 : ಮಾರ್ಗಸೂಚಿ ಪ್ರಕಟ…..!

ಬೆಂಗಳೂರು :

    2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳವ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಾರ್ಗಸೂಚಿ ಪ್ರಕಟಿಸಿದೆ.

    2024 ರ ಎಸ್ ಎಸ್ ಎಲ್ ಸಿ ಪರೀಕ್ಷೆ-1 ಕ್ಕೆ ನೋಂದಾಯಿಕೊಂಡು ಪರೀಕ್ಷೆಗೆ ಗೈರು ಹಾಜರಾದ / ಪೂರ್ಣಗೊಳಿಸಲಾಗಿಲ್ಲದ [Not Completed] / ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳಿಗೆ 2024ರ ಜೂನ್ ಮಾಹೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-2ನ್ನು ನಡೆಸಲಾಗುವುದು.

  2002-03 ರಿಂದ 2023-24ರ ಎಸ್.ಎಸ್.ಎಲ್.ಸಿ ಪರೀಕ್ಷೆವರೆಗೆ ಪೂರ್ಣಗೊಳಿಸಲಾಗಿಲ್ಲದ [Not Completed)/ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಗೈರು ಹಾಜರಾಗಿರುವ ಅರ್ಹ ಅಭ್ಯರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳನ್ನು ಮುಖ್ಯೋಪಾಧ್ಯಾಯರು ಮಂಡಳಿಯ https://kseab.karnataka.gov.in ಮಾಡುವುದು.

   ಶಾಲಾ ಲಾಗಿನ್ನಲ್ಲಿ Registration for 2024 Exam-2ನ್ನು ಕ್ಲಿಕ್ ಮಾಡಿದಾಗ ENTER REGISTER NUMBER ಎನ್ನುವ ಆಯ್ಕೆ ದೊರಕುತ್ತದೆ. ಈ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನೋಂದಣೆ ಸಂಖ್ಯೆಯನ್ನು ನಮೂದು ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಯ ನೋಂದಣೆ ಸಂಖ್ಯೆಯನ್ನು ನಮೂದು ಮಾಡಿ Submit ಕೊಟ್ಟಾಗ ಆ ವಿದ್ಯಾರ್ಥಿಯ ವಿವರಗಳು, ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮಾಧ್ಯಮ, ದೈಹಿಕ ಸ್ಥಿತಿ, ಜನ್ಮ ದಿನಾಂಕ, ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿಷಯಗಳು ತೆರೆದುಕೊಳ್ಳುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

    2021-22 ಮತ್ತು 2022-23 ನೇ ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಹಾಗೂ ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಕ್ಕೆ ನೋಂದಾಯಿಸಿಕೊಂಡು ಪೂರ್ಣಗೊಳಿಸಲಾಗಿಲ್ಲದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಸಹಿಗಳು ಮಂಡಳಿಯಲ್ಲಿ ಲಭ್ಯವಿದ್ದು, ಸದರಿ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಲ್ಲಿ ಪುನ: ಇವರುಗಳ ಭಾವಚಿತ್ರ ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.

   2002ರ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಲು ಈ ಹಿಂದೆ ಇದ್ದಂತೆ MSA ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಮೂಲಕ ಸಲ್ಲಿಸಬಹುದಾಗಿದೆ. ಈ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿರುವುದಿಲ್ಲ.

   ಇಂತಹ ಅಭ್ಯರ್ಥಿಗಳ ಎಂ.ಎಸ್.ಎ. ಫಾರಂನಲ್ಲಿ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಫೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಅಂಟಿಸಿ ಧೃಡೀಕರಿಸಿ ಸಲ್ಲಿಸಬೇಕು. ಎಂ.ಎಸ್.ಎ ಅರ್ಜಿಗಳನ್ನು ಪರಿಶೀಲಿಸುವಾಗ ಎಂ.ಎಸ್.ಎ ನಲ್ಲಿರುವ ಶಾಲಾ ಸಂಕೇತವು ತಮ್ಮ ಶಾಲೆಯದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಈ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ನಿಗದಿತ ಬ್ಯಾಂಕ್ NEFT ಚಲನ್ ಮೂಲಕ ಪಾವತಿಸಿ ಎಂ.ಎಸ್.ಎ ಅರ್ಜಿ, ಭಾವಚಿತ್ರ, ಶುಲ್ಕ ಪಾವತಿಯ ಚಲನ್‌ನೊಂದಿಗೆ ಮಂಡಳಿಗೆ ಸಲ್ಲಿಸುವುದು. ಈ ಮೂರು ಮಾಹಿತಿಗಳಿದ್ದಲ್ಲಿ ಮಾತ್ರ ಅರ್ಜಿಗಳನ್ನು ಪರಿಗಣಿಸಲಾಗುವುದು.

   ಇಲ್ಲವಾದಲ್ಲಿ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಒಂದು ವೇಳೆ ಈ ವಿದ್ಯಾರ್ಥಿಗಳ ಎಂ.ಎಸ್.ಎ ಗಳು ಶಾಲೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಮಂಡಳಿಯ ವಿಭಾಗೀಯ ಕಛೇರಿಗಳಿಂದ ನಿಗಧಿತ ಶುಲ್ಕ ಪಾವತಿಸಿ ಪಡೆದು ಸಲ್ಲಿಸುವುದು ಕಡ್ಡಾಯ.

  2003ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಎಂ.ಎಸ್.ಎ ಮೂಲಕ ಸಲ್ಲಿಸುವ ಪ್ರಸ್ತಾವನೆಯ ಲಕೋಟೆಯ ಮೇಲೆ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಕ್ಕೆ ಅರ್ಜಿಗಳು ಎಂದು ಬರೆಯುವುದು ಹಾಗೂ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಮಂಡಳಿಯ ಅಧಿಕಾರಿಗಳ ಹೆಸರು ಮತ್ತು ಶಾಖೆಯನ್ನು ಲಕೋಟೆಯ ಮೇಲೆ ತಪ್ಪದೇ ಬರೆಯುವುದು.

   ಮಂಡಳಿ ನಿಗದಿಪಡಿಸಿರುವ ಅಂತಿಮ ದಿನಾಂಕ “ಸಾರ್ವತ್ರಿಕ ರಜಾ ದಿನ” ಎಂಬುದಾಗಿ ಘೋಷಿಸಿದ್ದಲ್ಲಿ ಮಾರನೇ ಕೆಲಸದ ದಿನವನ್ನು ಕೊನೆಯ ದಿನಾಂಕವೆಂದು ಪರಿಗಣಿಸುವುದು. ಈ ಕೆಳಗೆ ನಮೂದಿಸಿರುವ ಮಂಡಳಿಯ ಅಧಿಕಾರಿಗಳು ಮತ್ತು ಉಸ್ತುವಾರಿ ನಿರ್ವಹಿಸುವ ಜಿಲ್ಲೆಗಳ ವಿವರಗಳನ್ನು ನೀಡಿದೆ. ಸಂಬಂಧಿಸಿದ ಶಾಲಾ ಮುಖ್ಯಸ್ಥರು ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳ ಹೆಸರನ್ನು ಲಕೋಟೆಯ ಮೇಲೆ ತಪ್ಪದೇ ಬರೆಯಬೇಕು.

     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಾಗೂ ವಿಭಿನ್ನಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಪರೀಕೆ-2ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap