ಬೆಂಗಳೂರು: ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್…..!

ಬೆಂಗಳೂರು

    ಮಳೆ ಬಂದರೆ ಸಾಕು ಬೆಂಗಳೂರಿನಲ್ಲಿ ಯಮರೂಪಿ ರಸ್ತೆ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ನಗರದ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್​​ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಮಳೆ ಬಂದು ಬಿಡುತ್ತಿದ್ದಂತೆಯೇ ಅನೇಕ ರಸ್ತೆಗುಂಡಿಗಳು ಪ್ರತ್ಯಕ್ಷವಾಗಿವೆ. ದಿನಕ್ಕೆ ಸಾವಿರಾರು ಬಿಎಂಟಿಸಿ ಬಸ್​​ಗಳು ಇಲ್ಲಿ ಓಡಾಡುತ್ತವೆ. ವಾಹನ ಸವಾರರು ಹಾಗೂ ಬಸ್​ನಲ್ಲಿ ಪ್ರಯಾಣಿಸುವ ಜನರಿಗೂ ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದೆ.

   ಗುಂಡಿಯಲ್ಲಿ ವಾಹನ ಚಲಾಯಿಸುವ ಕಾರಣ ಬಸ್​​​ಗಳ ಆಕ್ಸಲ್ ಕಟ್ ಆಗುತ್ತವೆ. ಜೊತೆಗೆ ವಯಸ್ಸಾದ ಸವಾರರಿಗೂ ಬೆನ್ನು ನೋವಿನಂತಹ ಸಮಸ್ಯೆಗಳು ಹೆಚ್ಚಾಗಲು ರಸ್ತೆ ಗುಂಡಿಗಳು ಕಾರಣವಾಗುತ್ತಿವೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Recent Articles

spot_img

Related Stories

Share via
Copy link
Powered by Social Snap