ರಷ್ಯಾ:
ರಷ್ಯಾದಲ್ಲಿ ಫೇಸ್ಬುಕ್ ಮತ್ತು ಟ್ವಿಟರ್ ಗಳನ್ನು ಪುಟಿನ್ ಬ್ಲಾಕ್ ಮಾಡಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾರ್ನಿಂಗ್ ಮಾಡಿದ್ದಾರೆ.
ರಷ್ಯಾದಲ್ಲಿ ಫೇಸ್ಬುಕ್ ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ಜನರಿಗೆ ಮಾಹಿತಿ ಸಿಗದಂತೆ ಆಗುತ್ತದೆ.
ಲಕ್ಷಾಂತರ ಜನರಿಗೆ ವಿಶ್ವಾಸಾರ್ಹವಾದ ಮಾಹಿತಿ ಸಿಗುವುದಿಲ್ಲ ಎಂದು ಫೇಸ್ಬುಕ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ರಷ್ಯಾಗೆ ಆಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಕೂಡ ಗುನ್ನಾ ನೀಡಿವೆ. ಯಾವುದೇ ಹೊಸ ಸೇವೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲವೆಂದು ಮೈಕ್ರೋಸಾಫ್ಟ್ ಕಂಪನಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಹೊಸ ಉತ್ಪನ್ನ ಮಾರಾಟ ಮಾಡುವುದಿಲ್ಲ, ಸೇವೆ ನೀಡುವುದಿಲ್ಲವೆಂದು ಮೈಕ್ರೋಸಾಫ್ಟ್ ಕಂಪನಿ ಅಧಿಕೃತವಾಗಿ ಘೋಷಣೆ ಮಾಡಿದೆ.
ರಷ್ಯಾದಲ್ಲಿ ಮಾಧ್ಯಮ ನೀತಿ ಬದಲಾಗಿರುವ ಹಿನ್ನೆಲೆಯಲ್ಲಿ ಪುಟಿನ್ ನಡೆಯನ್ನು ದೈತ್ಯ ಸುದ್ದಿ ಸಂಸ್ಥೆಗಳು ಖಂಡಿಸಿವೆ. ಜಾಗತಿಕ ಮಟ್ಟದ ಸುದ್ದಿವಾಹಿನಿಗಳು ರಷ್ಯಾದಿಂದ ಹೊರಗೆ ನಡೆದಿವೆ. ಜಾಗತಿಕ ಮಟ್ಟದ ಸುದ್ದಿವಾಹಿನಿ ಸಂಸ್ಥೆಗಳಾದ ಸಿಎನ್‌ಎನ್, ಬಿಬಿಸಿ, ಬ್ಲೂಂಬರ್ಗ್ ಸಂಸ್ಥೆಗಳು ರಷ್ಯಾದಿಂದ ಹೊರಗೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ