ರಾಯಚೂರು:
ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀಗುರುರಾಯರ ಹುಂಡಿಗೆ ಭಕ್ತರು ಹಾಕಿದ ಕಾಣಿಕೆ 3.92 ಕೋಟಿ ಹಣ ಸಂಗ್ರಹವಾಗಿದೆ.ಕಳೆದ 31 ದಿನಗಳಕಾಲ ಶ್ರೀರಾಘವೇಂದ್ರ ಸ್ವಾಮಿಗಳವರ ಹುಂಡಿಯಲ್ಲಿ ಭಕ್ತರು ಹಾಕಿರುವ ಕಾಣಿಕೆ ಹಣವನ್ನು ಎಣಿಕೆ ಕಾರ್ಯವು ಗುರುವಾರ ಬೆಳಿಗ್ಗೆಯಿಂದಲೇ ಶ್ರೀಮಠದ ಸಿಬ್ಬಂದಿ ಹಾಗೂ ಭಕ್ತರು, ಸೇವಾಕರ್ತರು ನಡೆಸಿದರು.
3.83,9376 ರೂಗಳ ಮೌಲ್ಯದ ನೋಟುಗಳು, 8,65,180 ರೂಗಳ ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3.92,58,940 ರೂಗಳು ಹುಂಡಿಯಲ್ಲಿ ಸಂಗ್ರಹವಾಗಿವೆ. ಅಲ್ಲದೇ 174 ಗ್ರಾಂಗಳಷ್ಟು ಚಿನ್ನಾ(ಬಂಗಾರ), 1270 ಗ್ರಾಂಗಳಷ್ಟು ಪ್ರಮಾಣದಲ್ಲಿ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.