ಕಾಂಗ್ರೆಸ್‌ ಗೆ ಕೈ ಕೊಡ್ತಾರ ಗುರುಪಾದಸ್ವಾಮಿ….!

ಮೈಸೂರು:

      ಸಿಎಂ ಸಿದ್ದರಾಮಯ್ಯ   ತವರು ಮೈಸೂರಿನಲ್ಲೇ ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್  ಶಾಕ್ ನೀಡಿದ್ದು, ಸಿದ್ದರಾಮಯ್ಯ ಅವರ ಆಪ್ತ ಗುರುಪಾದಸ್ವಾಮಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

     ಲೋಕಸಭಾ ಚುನಾವಣೆಯ   ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದರಾಮಯ್ಯ ಅವರ ಆಪ್ತ ಗುರುಪಾದಸ್ವಾಮಿ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉಪಸ್ಥಿತಿಯಲ್ಲಿ ಗುರುಪಾದಸ್ವಾಮಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಆ ಮೂಲಕ ವರುಣಾ ಕ್ಷೇತ್ರದ ಪ್ರಬಲ ಲಿಂಗಾಯತ ಸಮುದಾಯದ ನಾಯಕ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ.

     ಮೂಲಗಳ ಪ್ರಕಾರ ಸಿದ್ದರಾಮಯ್ಯ ಜತೆಯಲ್ಲಿ ಗುರುತಿಸಿಕೊಂಡಿದ್ದ ಗುರುಪಾದಸ್ವಾಮಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು. ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ ದೊರೆಯದ ಕಾರಣ ಕಾಂಗ್ರೆಸ್ ತೊರೆಯಲು ನಿರ್ಧಾರ ಮಾಡಿದ್ದರು. ಇದೀಗ ಕೊನೆಗೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಗುರುಪಾದ ಸ್ವಾಮಿ, ‘ಸಿದ್ದರಾಮಯ್ಯ ಗೆಲ್ಲಿಸಿದ ನಮಗೆ ಯಾವುದೇ ಹುದ್ದೆಯಿಲ್ಲ. ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದವರಿಗೆ ಸಿಎಂ ಮಾನ್ಯತೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಡೆಯ ಬಗ್ಗೆ ಬೇಸತ್ತು ಬಿಜೆಪಿ ಸೇರ್ಪಡೆ’ಯಾಗುತ್ತಿರುವುದಾಗಿ ಹೇಳಿದ್ದಾರೆ.

     ‘ಮನೆಯಲ್ಲಿ ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡಿದ್ದೇನೆ. ವರುಣಾದಲ್ಲಿ ಅವರನ್ನು ಗೆಲ್ಲಿಸಿದ ನನಗೆ ಏನು ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದರು. ಆ ಕ್ಷೇತ್ರದವರನ್ನು ಮುಡಾ ಅಧ್ಯಕ್ಷರಾಗಿ ಮಾಡಿದರು. ವರುಣಾದಲ್ಲಿ ಸತತವಾಗಿ ಗೆಲ್ಲಿಸಿ ಕೊಂಡು ಬಂದ ನಮ್ಮನ್ನು ಮಾತೂ ಆಡಿಸಿಲ್ಲ. ವೀರಶೈವ ಸಮುದಾಯಕ್ಕೆ ಸೇರಿದ ನನ್ನ ಕೊಡುಗೆ ಏನೂ ಇಲ್ಲವಾ? ಕೃಷ್ಣರಾಜ ಕ್ಷೇತ್ರಕ್ಕೆ ಎಂಎಲ್‌ಎ, ಮೈಸೂರು ಕ್ಷೇತ್ರಕ್ಕೆ ಎಂಪಿ ಟಿಕೆಟ್ ಕೇಳಿದ್ದೆ.‌ ನನ್ನನ್ನು ಅಸಡ್ಡೆ ಮಾಡಿದ್ದಕ್ಕೆ ಬೇಸರ ಇದೆ. ಚಾಮರಾಜನಗರ ಅಭ್ಯರ್ಥಿ ಬಾಲರಾಜ್ ಸಂಪರ್ಕಿಸಿದ್ದರು. ಆದರೆ ಈಗ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸೇರುತ್ತೇನೆ ಎಂದು ಗುರುಪಾದಸ್ವಾಮಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap