ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ :ಎಸ್ ವಿ ಶಿವರುದ್ರಯ್ಯ

ಕೊರಟಗೆರೆ:-

    ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಎಸ್ ವಿ ಶಿವರುದ್ರಯ್ಯ ಪ್ರತಿಕ್ರಿಯಿಸಿದರು.

    ಅವರು ಭಾನುವಾರ ಕೊರಟಗೆರೆ ತಾಲೂಕಿನ ಕೋಳಾಲ ಶ್ರೀ ಬಸವೇಶ್ವರ ಕೇಂದ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜು ನಲ್ಲಿ ಆಯೋಜಿಸಲಾಗಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಪಾಠ ಕಲಿಸಿದ ಗುರುಹಿರಿಯರನ್ನು,‌‌ ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು ಅದೇ ಮುಂದಿನ ಪೀಳಿಗೆಗೆ ನೀವು ಕೊಡುವ ಉಡುಗೊರೆ ಎಂದರು.

    ಶಿಕ್ಷಕರಾದ ಬಿ. ಕೃಷ್ಣಯ್ಯ ಮಾತನಾಡಿ ಒಳ್ಳೆಯ ಮನಸ್ಸಿದ್ದರೆ ಏನನ್ನಾದರೂ ಸಾಧನೆ ಮಾಡಬಹುದು, ಆತ್ಮಸುಖ ಲೋಕ ಹಿತದಲ್ಲಿ ಅಡಗಿದೆ, ಎಲ್ಲರನ್ನೂ ನಮ್ಮಂತೆ ಕಾಣುವ ಮನಸ್ಸು ನಮ್ಮದಾಗಬೇಕು, ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿಯ ಹಾದಿಯಲ್ಲಿ ನಡೆದಾಗ ನಮ್ಮ ಬದುಕು ಸದೃಢವಾಗಲು ಸಾಧ್ಯ, ವ್ಯಕ್ತಿ ವಿಕಾಸವೇ ದೇಶ ವಿಕಾಸದ ಮಂತ್ರ, ಕಷ್ಟದ ಪರಿಚಯವಾದಾಗ ಸುಖದ ಅನುಭವವಾಗುತ್ತದೆ ಇದನ್ನು ಅರಿತು ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

   ಮತ್ತೋರ್ವ ಶಿಕ್ಷಕ ಎ ಚಂದ್ರಯ್ಯ ಮಾತನಾಡಿ ನಾವು ಅಕ್ಷರ ಕಲಿಸಿದ ಅನೇಕ ವಿದ್ಯಾರ್ಥಿಗಳು ಈಗ ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಂಡಿದ್ದು ಉತ್ತಮ ಪ್ರಜೆಗಳಾಗಿ ಬದುಕುತ್ತಿದ್ದಾರೆ ಎನ್ನುವುದು ಸಂತಸದ ವಿಷಯ, ಸಾಧನೆಯೊಂದೇ ಜೀವನವಲ್ಲ, ವಿವೇಕಿಗಳಾಗಿ‌, ಸಮಾಜಮುಖಿಯಾಗಿ, ಸಮಾಜದಲ್ಲಿ ಸಭ್ಯಸ್ಥರಾಗಿ ಬದುಕಬೇಕು ಪಾಠ ಕಲಿಸಿದ ಗುರುಹಿರಿಯರನ್ನು,‌‌ ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು ಅದೇ ಮುಂದಿನ ಪೀಳಿಗೆಗೆ ನೀವು ಕೊಡುವ ಉಡುಗೊರೆ ಎಂದರು .

   ಶಿಕ್ಷಕರಾದ ಲಕ್ಷ್ಮೀನಾರಾಯಣ ಮಾತನಾಡಿ ಗುರುವಿಗೆ ಗೌರವ ಸಲ್ಲಿಸುವುದರಿಂದ ಪೂರ್ವಜನ್ಮದ ಪುಣ್ಯ ಲಭಿಸುತ್ತದೆ ಎಂದು ಭಾವಿಸಿ, ಎಲ್ಲರೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕಿವಿ ಮಾತು ಹೇಳಿದರು,ಮತ್ತೋರ್ವ ಶಿಕ್ಷಕ ಕೆ ಎಂ ಸಿದ್ದಬಸವಯ್ಯ ಮಾತನಾಡಿ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ, ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಇದನ್ನ ಅರಿತು ಆರೋಗ್ಯಕರ ಸಮಾಜದ ಸೃಷ್ಟಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಪ್ರತಿಕ್ರಿಸಿದರು .

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ ಎಂ ಗಿರೀಶ್ ಮಾತನಾಡಿ
ಶಿಕ್ಷಕರ ಮಹತ್ವವನ್ನು ಸಾರುವ, ಗುರು-ಶಿಷ್ಯ ಬಾಂಧವ್ಯವನ್ನು ನೆನಪಿಸುವ ಮತ್ತು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರುವಿನ ಮಾರ್ಗದರ್ಶನದಿಂದ ಪಡೆಯುವ ಯಶಸ್ಸನ್ನು ಕುರಿತು ಹೇಳುವ ಒಂದು ಮನೋಜ್ಞವಾದ ಬೆಸುಗೆ ಇದಾಗಿದ್ದು ಆರೋಗ್ಯಕರ ಸಮಾಜದ ಸೃಷ್ಟಿಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮವಹಿಸಬೇಕು ಎಂದರು. 

   ಶ್ರೀ ಬಸವೇಶ್ವರ ಕೇಂದ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರು ವಂದನೆ ಕಾರ್ಯಕ್ರಮ 40 ವರ್ಷಗಳ ಹಿಂದೆ ಅಂದರೆ 1985 ರಲ್ಲಿ ಈ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಏರ್ಪಡಿಸಲಾದ ಗುರುವಂದನ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಯಶಸ್ವಿಯಾಗಿ ಆಯೋಜನೆಗೊಂಡಿತು 40 ವರ್ಷಗಳ ನಂತರ ಭೇಟಿಯಾದ ಶಾಲೆಯ ಹಳೆಯ ವಿದ್ಯಾರ್ಥಿಗಳು ಚಿಕ್ಕ ಮಕ್ಕಳಂತೆ ಹಾಡಿ ಕುಣಿದರು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಖುಷಿ ಅನುಭವಿಸಿದರು.

Recent Articles

spot_img

Related Stories

Share via
Copy link