ಜೀರ್ಣಕ್ರಿಯೆ ಸಮಸ್ಯೆಯೇ : ಈರೀತಿ ಮಾಡಿದರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ

ಬೆಂಗಳೂರು : 

    ಆರೋಗ್ಯಕರ ಜೀವನದಲ್ಲಿ ಕರುಳಿನ ಆರೋಗ್ಯ ಚೆನ್ನಾಗಿರುವುದು ಬಹಳ ಮುಖ್ಯ. ಜೀರ್ಣಕ್ರಿಯೆ ಸುಗಮವಾಗಿದ್ದರೆ ದೇಹಾರೋಗ್ಯವೂ ಚೆನ್ನಾಗಿರುತ್ತದೆ. ಆದರೆ ಇತ್ತೀಚಿನ ಜೀವನಶೈಲಿ ಹಾಗೂ ಆಹಾರಗಳ ಕಾರಣದಿಂದ ಜೀರ್ಣಕ್ರಿಯೆಯಲ್ಲಿನ ತೊಂದರೆಗಳು ಸಾಮಾನ್ಯವಾಗಿದೆ. ಇದರಿಂದ ಅಜೀರ್ಣ, ಗ್ಯಾಸ್ಟ್ರಿಕ್‌, ಆಸಿಡಿಟಿ, ಮಲಬದ್ಧತೆಯಂತಹ ಹಲವು ಸಮಸ್ಯೆಗಳು ಎದುರಾಗುತ್ತಿವೆ.

   ಆ ಕಾರಣಕ್ಕೆ ಕರುಳಿನ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಉತ್ತಮ ಕರುಳಿನ ಆರೋಗ್ಯ ಎಂದರೆ ಜೀರ್ಣಾಂಗದಲ್ಲಿ ಸರಿಯಾದ ಪ್ರಮಾಣದ ಉತ್ತಮ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳನ್ನು ಹೊಂದಿರುವುದು. ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ, ಮನಸ್ಥಿತಿ, ಕರುಳಿನ ಆರೋಗ್ಯ ಎಲ್ಲವೂ ಚೆನ್ನಾಗಿರುತ್ತದೆ.

    ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ನಮ್ಮ ದಿನಚರಿಯ ಶಿಸ್ತು ಈ ವಿಚಾರದಲ್ಲಿ ಮುಖ್ಯವಾಗುತ್ತದೆ. ಹಾಗಾದರೆ ಜೀರ್ಣಕ್ರಿಯೆ ಸುಧಾರಿಸಲು ನಮ್ಮ ಬೆಳಗಿನ ದಿನಚರಿ ಹೇಗಿರಬೇಕು ನೋಡಿ.

ಒಂದು ಲೋಟ ನೀರಿನಿಂದ ಆರಂಭಿಸಿ: ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ದಿನವನ್ನು ಆರಂಭಿಸಿ. ಬಿಸಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಇದು ಜೀರ್ಣಕ್ರಿಯೆಯನ್ನ ಸುಗಮಗೊಳಿಸುವುದು ಮಾತ್ರವಲ್ಲ, ನಿರ್ಜಲೀಕರಣ ತಪ್ಪಿಸಲು ಕೂಡ ಸಹಕಾರಿ.

ಪೂರಕಗಳನ್ನು ಪರಿಗಣಿಸಿ: 

ಪ್ರೊಬಯೋಟಿಕ್‌ಗಳು ಜೀರ್ಣಕ್ರಿಯೆ ಸುಧಾರಿಸಲು ಬಹಳ ಮುಖ್ಯ. ಇದು ಕರುಳಿನ ಆರೋಗ್ಯ ಸುಧಾರಿಸುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಸೇಬುಗಳು, ಪಲ್ಲೆಹೂವುಗಳು, ಬಾಳೆಹಣ್ಣುಗಳು, ಬಾರ್ಲಿ, ಓಟ್ಸ್, ಚಿಯಾ ಮತ್ತು ಅಗಸೆ ಬೀಜಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿ, ಬೀನ್ಸ್‌, ದ್ವಿದಳ ಧಾನ್ಯದಂತಹ ಆಹಾರಗಳನ್ನು ಹೆಚ್ಚು ಸೇವಿಸಿ. ಇವುಗಳಲ್ಲಿ ಪ್ರೊಬಯೋಟಿಕ್‌ ಅಂಶಗಳಿರುತ್ತವೆ.

ನಾರಿನಾಂಶ ಇರುವ ಆಹಾರ ಸೇವನೆ: 

ಜೀರ್ಣಕ್ರಿಯೆಗೆ ಸಾಕಷ್ಟು ನಾರಿನಾಂಶ ಇರುವ ಫೈಬರ್ ಆಹಾರಗಳು ಬಹಳ ಅವಶ್ಯ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಆಹಾರದಲ್ಲಿ ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳು, ಬೀಜಗಳನ್ನು ಸೇರಿಸಿ.

ವ್ಯಾಯಾಮ ಮಾಡಿ:

 ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲು ಬೆಳಗಿನ ದಿನಚರಿಯಲ್ಲಿ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ಚಯಾಪಚಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಉತ್ತಮ ಚಯಾಪಚಯ ಎಂದರೆ ಉತ್ತಮ ಜೀರ್ಣಕ್ರಿಯೆ ಕೂಡ. ಹಾಗಾಗಿ ಕರುಳಿನ ಆರೋಗ್ಯ ಸುಧಾರಣೆಗೆ ನೆರವಾಗುವ ವ್ಯಾಯಾಮಗಳ ಮೇಲೆ ಹೆಚ್ಚು ಗಮನ ಹರಿಸಿ.

ಧ್ಯಾನ: ಸಾವಧಾನತೆಯನ್ನು ಅಭ್ಯಾಸ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಕರುಳಿನ ಒತ್ತಡವನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ.

  ಸಂಸ್ಕರಿಸಿದ ಹಾಗೂ ಸಕ್ಕರೆ ಅಂಶ ಇರುವ ಆಹಾರಗಳು ಕರುಳಿನ ಸೂಕ್ಷ್ಮಾಣುಜೀವಿಗಳಿಗೆ ಕಿರಿಕಿರಿ ಉಂಟು ಮಾಡಬಹುದು. ಸಂಸ್ಕರಿತ ಆಹಾರಗಳು ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರವು ನಿಮ್ಮ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಲ್ಬಣವಾಗುತ್ತದೆ. ಹಾಗಾಗಿ ಈ ಆಹಾರಗಳ ಸೇವನೆಗೆ ಕಡಿವಾಣ ಹಾಕಿ.

ಈ ಮೇಲೆ ತಿಳಿಸಿದ ಕ್ರಮಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಅನುಸರಿಸುವ ಮೂಲಕ ಆರೋಗ್ಯವನ್ನು ಕರುಳಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ನೀವು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದರೆ ಇಂದಿನಿಂದಲೇ ನಿಮ್ಮ ದಿನಚರಿಯನ್ನ ಹೀಗೆ ಬದಲಿಸಿ.

Recent Articles

spot_img

Related Stories

Share via
Copy link
Powered by Social Snap