ಗ್ವಾದರ್‌ ಬಂದರಿನ ಮೇಲೆ ಬಲೂಚಿಸ್ತಾನದ ಉಗ್ರರ ಭಯೋತ್ಪಾದಕರ ದಾಳಿ….!

ಕರಾಚಿ: 

    ಭಾರೀ ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಇಂದು ಗ್ವಾದರ್ ಬಂದರು ಕಾಂಪ್ಲೆಕ್ಸ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಹ ಸಂಭವಿಸಿವೆ.

   ತೀವ್ರ ಗುಂಡಿನ ಚಕಮಕಿ ಹಿನ್ನಲೆ ಪೊಲೀಸ್ ಮತ್ತು ಭದ್ರತಾ ಪಡೆಗಳ ದೊಡ್ಡ ತುಕಡಿ ಸ್ಥಳಕ್ಕೆ ತಲುಪಿದೆ ಎಂದು ಮಕ್ರನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ಗ್ವಾದರ್ ಪೋರ್ಟ್ ಅಥಾರಿಟಿ (ಜಿಪಿಎ) ಸಂಕೀರ್ಣದ ಮೇಲಿನ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು ಎಂಟು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

   ಕಾಂಪ್ಲೆಕ್ಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ದ ಮಜೀದ್ ಬ್ರಿಗೇಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ.

    ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು. CPEC ಯ ಅಡಿಯಲ್ಲಿ ನಡೆಯುತ್ತಿರುವ ಅನೇಕ ಯೋಜನೆಗಳಲ್ಲಿ ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕತಾವಾದಿ BLA ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಯನ್ನು ವಿರೋಧಿಸುತ್ತದೆ ಮತ್ತು ಚೀನಾ ಮತ್ತು ಪಾಕಿಸ್ತಾನವು ಸಂಪನ್ಮೂಲ-ಸಮೃದ್ಧ ಪ್ರಾಂತ್ಯವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap