ಅಧಿವೇಶನದಲ್ಲಿ 10 ಪ್ರಮುಖ ಬಿಲ್ ಗಳ ಮಂಡನೆ : ಎಚ್ ಕೆ ಪಾಟೀಲ್

ಹುಬ್ಬಳ್ಳಿ:

     ಕುಂದಾನಗರಿ ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ 14 ವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ 10 ಮಹತ್ವದ ಬಿಲ್ ಮಂಡನೆ ಮಾಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

     ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಡಿಸೆಂಬರ್ 4 ರಂದು ನಮ್ಮ ಬಿಸಿನೆಸ್ ಅಡ್ವಸರಿ ಸಮಿತಿ ಸಭೆ ನಡೆಯಲಿದ್ದು 10 ಪ್ರಮುಖ ಬಿಲ್ ಗಳ ಮಂಡನೆ ಮಾಡಲಾಗುವ ಕುರಿತು ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಜೊತೆಗೆಆ ಸಭೆಯಲ್ಲಿ ಯಾವ ಬಿಲ್ ಮಂಡನೆ ಆಗಬೇಕು ಎಂಬ ಸುದೀರ್ಘವಾದ ಚರ್ಚೆ ನಡೆಸುತ್ತೇವೆ

      ಅಧಿವೇಶನದಲ್ಲಿ ಬರಗಾಲ ಕುರಿತು ಹೆಚ್ಚು ಚರ್ಚೆ ಆಗಲಿದ್ದು ಪ್ರಮುಖ ಸಮಸ್ಯೆ, ಅಭಿವೃದ್ಧಿ ವಿಚಾರಗಳು ಸಹ ಚರ್ಚೆ ನಡೆಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಸಮಸ್ಯೆಗಳು ಬಗ್ಗೆ ಚರ್ಚೆಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದರು. ಐದು ರಾಜ್ಯ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ದೇಶದ ಐದು ರಾಜ್ಯಗಳಲ್ಲಿ ನಡೆದ ಮತದಾನ ನಂತರಈಗಾಗಲೇ ಮತದಾನೋತ್ತರ ಫಲಿತಾಂಶ ಬಂದಿದೆ. ಬಹುತೇಕ ಸಮೀಕ್ಷೆಗಳು ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತಾ ಫಲಿತಾಂಶ ನೀಡಿವೆ

       ಇದರಲ್ಲಿ ತೆಲಂಗಾಣ, ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭರವಸೆ ಇದ್ದು
ರಾಜಸ್ಥಾನದಲ್ಲಿ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಹಿಂದೆ ಇದೆ ಈ ಎಲ್ಲ ಬೆಳವಣಿಗೆ ಫಲಿತಾಂಶ ನೋಡಿದರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಕಾಂಗ್ರೆಸ್ ಪಕ್ಷದತ್ತ ಜನರ ಒಲವು ಹೆಚ್ಚಾಗಿದೆಜನರ ಆರ್ಶೀವಾದ ಕಾಂಗ್ರೆಸ್ ಮೇಲೆ ಇದೆ ಆದ್ದರಿಂದಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅಂತ್ಯ ಆಗಲಿದೆ ಎಂದು ಭವಿಷ್ಯ ನುಡಿದ ಅವರು ಭಾರತೀಯ ಜನತಾ ಪಕ್ಷದವರು ಮನೆಗೆ ಹೋಗುವ ಕಾಲ ಬಂದಿದೆ ಎಂದರು‌. ಇನ್ನು ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನ ರೆಸಾರ್ಟ್ ಗೆ ಕರೆ ತರುವ ವಿಚಾರ ಕುರಿತು ಸಹ ಮಾತನಾಡಿದ ಅವರುಈ ಎಲ್ಲ ದಂಧೆಗಳು ಭಾರತೀಯ ಜನತಾ ಪಕ್ಷದವರು ಮನೆಗೆ ಹೋಗುವ ಮುಂದೆ ಮಾಡಿದರೆ ನಡೆಯುವುದಿಲ್ಲ

        ಭಾರತೀಯ ಜನತಾ ಪಕ್ಷದವರಿಗೆ ಕೆಟ್ಟ ವಿಚಾರ ಇದು ಇದು ಕರ್ನಾಟಕ ದಲ್ಲಿ 17 ಶಾಸಕರನ್ನ ತೆಗೆದುಕೊಂಡ ಹೋಗಿ ಸರಕಾರ ಮಾಡಿದರು ಅದು ಪ್ರಜಾಪ್ರಭುತ್ವ ಕೊಟ್ಟ ಕೊಡಲೇ ಪೆಟ್ಟು ಮರೆಯಕ್ಕೆ ಆಗಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆದುಕೊಂಡ ಕಾರಣ ಇಂದು ಈ ವ್ಯವಸ್ಥೆಗೆ ಅವರನ್ನು ತಂದು ನಿಲ್ಲಿಸಿತು ಎಂದರು.

     ಇನ್ನು ಇದೇ ಸಮಯದಲ್ಲಿ ಪ್ರವಾಸೋದ್ಯಮ ಹೊಸ ನೀತಿ ಡಿಸೆಂಬರ್ ಅಂತ್ಯ, ಜನವರಿ ತಿಂಗಳ ಒಳಗೆ ಜಾರಿ ಮಾಡಲಾಗುವುದು ಎಂದ ಅವರುನಾನು ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಸ ಮಾಡಿದ್ದೇನೆಪ್ರವಾಸದ ಅನುಭವ ಜೊತೆಗೆ ಹೊಸ ಪ್ರವಾಸೋದ್ಯಮ ನೀತಿ ಜಾರಿ ಆಗಲಿದೆ ಎಂದು ತಿಳಿಸಿದರು. ಉಪ ಮುಖ್ಯಮಂತ್ರಿ ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣ ವಾಪಾದ್ ಪಡೆಯುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಈ ವಿಚಾರ ಕೋರ್ಟ್ ನಲ್ಲಿಇರುವ ಕಾರಣ ಪ್ರತಿಕ್ರಿಯೆ ಕೊಡಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap