ಬೆಂಗಳೂರು
ಬಿಟ್ಕಾಯಿನ್ ಹಗರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ನನ್ನು ಬಂಧಿಸಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಇಂಟರ್ ನ್ಯಾಷನಲ್ ಹ್ಯಾಕರ್ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ ನಲ್ಲಿ ಕೈಚಳಕ ತೋರಿ ಭೂಗತವಾಗಿದ್ದ ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರಸಿಂಗ್ ನನ್ನು ಎಸ್ಐಟಿ ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆಗಳಿವೆ.
ಈ ಹ್ಯಾಕರ್ ರಾಜೇಂದ್ರಸಿಂಗ್ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಈ ಹ್ಯಾಕರ್ಗಾಗಿ ಹುಡುಕಾಟ ಮಾಡುತ್ತಿದ್ದವು. ಇದೀಗ ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂಡ ಬಂಧಿಸಿದ್ದು, ಸದ್ಯ ಮುಂದಿನ ತನಿಖಾ ದೃಷ್ಟಿಯಿಂದ ಎಸ್ಐಟಿ, ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೇಳಿದೆ.