ವಿದ್ಯುತ್‌ ಬಿಲ್‌ ನೆಪದಲ್ಲಿ ಆನ್‌ ಲೈನ್‌ ವಂಚನೆಗೆ ಯತ್ನ….!

ಬೆಂಗಳೂರು: 

    ನಾವು ಬೆಸ್ಕಾಂನವರು ನಿಮ್ಮ ವಿದ್ಯುತ್‌ ಬಿಲ್ಲ ಕಟ್ಟಾಲಾಗಿಲ್ಲ ಅದನ್ನು ತಕ್ಷಣ ಪಾವತಿ ಮಾಡದಿದ್ದಲ್ಲಿ ನಿಮ್ಮ ಸಂಪರ್ಕ ಕಡಿತಗೊಳಿಸಲಾಗುವುದು ಹಾಗಾಗಬಾರದೆಂದರೆ ಈಗಲೆ ಈ ಲಿಂಕ್‌ ನ ಮೇಲೆ ಕ್ಲಿಕ್‌ ಮಾಡಿ ಎಂದು ಮೆಸೇಜ ಬಂದರೆ ಯಾರೇ ಆಗಲಿ ಮೊದಲು ಹಿಂದೆ ಮುಂದೆ ನೋಡದೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಪೇಮೆಂಟ್‌ ಮಾಡುತ್ತಾರೆ ಮತ್ತು ಮೋಸ ಹೋಗುತ್ತಾರೆ .

    ಇಂಥಹುದ್ದೇ ಪ್ರಕರಣ ರೆಸ್ಟೋರೆಂಟ್  ಮಾಲೀಕ ಮತ್ತು ಅವರ ಪತ್ನಿಗೆ ರೂ.  3.7 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚಕರು ಯೆಸ್ ಬ್ಯಾಂಕ್‌ನಲ್ಲಿರುವ ತಮ್ಮ ಜಂಟಿ ಖಾತೆಯಿಂದ ಹಣ ತೆಗೆದಿದ್ದಾರೆ. ಆಕ್ಸಿಸ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಲೂ ಪ್ರಯತ್ನಿಸಿ ವಿಫಲರಾಗಿದ್ದಾರೆ   ಎಂದು ಬ್ಲೇಸ್ ಡಿಸೋಜಾ ಅವರ ಪತ್ನಿ ಡಯಾನಾ ಡಿಸೋಜಾ ಹೇಳಿದ್ದಾರೆ. 

     ವಂಚಕರು ಫೆಬ್ರವರಿ 28 ರಂದು ಬೆಸ್ಕಾಂ ಬಿಲ್ ಪಾವತಿ ಅಪ್ ಡೇಟ್ ಆಗಿಲ್ಲ  ಎಂಬ ಮೇಸೆಜ್ ಕಳುಹಿಸಿದ್ದಾರೆ.  ಆತ್ಮೀಯ ಗ್ರಾಹಕರೇ, ಹಿಂದಿನ ತಿಂಗಳ ಬಿಲ್ ನವೀಕರಿಸದ ಕಾರಣ ಇಂದು ರಾತ್ರಿ 9.30 ಕ್ಕೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ” ಎಂದು ಸಂದೇಶ ಕಳುಹಿಸಲಾಗಿದೆ.  ಆಗ ಡಯಾನಾಗೆ ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಕರೆ ಬಂದಿದ್ದು, ಬೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ಮೊದಲಿಗೆ ನಂಬರ್ ಕೇಳಿದ್ದಾರೆ.

     ಆತ ಬಿಲ್ ನ ಸರಿಯಾದ ಆರ್ ಆರ್ ಸಂಖ್ಯೆ ಮತ್ತು ಬ್ಯಾಂಕ್ ವಿವರ ನೀಡಿದ್ದಾರೆ. ನಂತರ ಆತ ಯೆಸ್ ಬ್ಯಾಂಕ್ ನಲ್ಲಿರುವ ಜಂಟಿ ಖಾತೆಯನ್ನು ಹ್ಯಾಕ್ ಮಾಡಿ ಹಣ ವಿತ್ ಡ್ರಾ ಮಾಡಿರುವುದಾಗಿ ಡಯಾನಾ ಹೇಳಿದರು. 

    ಬ್ಲೇಸ್ ಅವರ ಆಕ್ಸಿಸ್ ಬ್ಯಾಂಕ್ ಖಾತೆ ಹ್ಯಾಕ್ ಮಾಡಲು ಪ್ರಯತ್ನಿಸಿದ್ದು, ರೂ. 111 ವಿತ್ ಡ್ರಾ ಮಾಡಿದ್ದಾರೆ. ಬಳಿಕ ರೂ 20,000 ಮತ್ತು ರೂ 40,000 ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆಲರ್ಟ್ ಮ್ಯಾನೇಜರ್  ವಹಿವಾಟುಗಳನ್ನು ನಿರ್ಬಂಧಿಸಿದ್ದರಿಂದ ಹಣ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap