ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದವರನ್ನ ಮೊದಲು ಗಡಿಪಾರು ಮಾಡಲಿ: ಹಕೀಂ‌ ಕೂರ್ನಡ್ಕ

ಪುತ್ತೂರು:

  ಕಾಂಗ್ರೆಸ್ ಕಾರ್ಯಕರ್ತ ಹಕೀಂ‌ ಕೂರ್ನಡ್ಕಗೆ ಗಡಿಪಾರು ಆದೇಶ ನೋಟೀಸ್ ನೀಡುತ್ತಿದಂತೆ ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದ ಶಾಸಕ ಅಶೋಕ್ ರೈಯನ್ನು ಮೊದಲು ಗಡಿಪಾರು ಮಾಡಲಿ ಎಂದು ಕಿಡಿಕಾರಿದ್ದಾರೆ.

   ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪುತ್ತೂರು ಪೊಲೀಸರು ಸಹಾಯಕ ಆಯುಕ್ತರಿಗೆ ನನ್ನ ಮೇಲೆ ಇರುವ ಸುಳ್ಳು ದೂರುಗಳ ಮಾಹಿತಿ ನೀಡಿದ್ದಾರೆ. ಅಶೋಕ್ ರೈ ವಿರುದ್ಧ ಮಾತನಾಡಿದ್ರೆ ನಿಮ್ಮನ್ನ ಗಡಿಪಾರು ಮಾಡುತ್ತೇವೆಂದು ಪುತ್ತೂರು ನಗರ ಠಾಣೆಯ ಇನ್ಸ್ ಪೆಕ್ಟರ್ ಈ ಹಿಂದೆ ಹೇಳಿದ್ರು, ಇದೀಗ ಯಾವುದೇ ಗುಂಪು ಗಲಭೆ, ಕೋಮುಗಲಭೆ, ಹಲ್ಲೆ, ಹತ್ಯೆ, ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಗಳಲ್ಲಿ ಇಲ್ಲದ ನನ್ನನ್ನು ಯಾಕೆ ಗಡಿಪಾರು ಮಾಡಬಾರದೆಂಬ ನೋಟೀಸ್ ನೀಡಿದ್ದಾರೆ.

   ಇದರ ಹಿಂದೆ ಶಾಸಕ ಅಶೋಕ್‌ರೈ ಅವರ ಕೈವಾಡವಿದೆ, ಮುಸಲ್ಮಾನರ ಮತ ಪಡೆದು ಗೆದ್ದಿರುವ ಅಶೋಕ್ ರೈ ಮುಸಲ್ಮಾನರಿಗೆಯೇ ಅನ್ಯಾಯ ಮಾಡ್ತಾ ಇದ್ದಾರೆ, ಇತ್ತೀಚೆಗೆ ಹತ್ಯೆಯಾದ ರಹೀಂ ಮನೆಗೆ ಸಾಂತ್ವನ ಹೇಳಲು ಅಶೋಕ್ ರೈ ಯಾಕೆ ಹೋಗಿಲ್ಲ? ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಬಂದಿರುವಾಗ ಅಶೋಕ್ ರೈ ಗೈರಾಗಿದ್ದರು, ಯಾಕಂದ್ರೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ರಹೀಂ ಮನೆಗೆ ಸಾಂತ್ವನ ಹೇಳಲು ಹೋಗಬೇಕಾಗಬಹುದು ಎಂದು, ಸಾಂತ್ವನ ಹೇಳಲು ಹೋದ್ರೆ ನನಗೆ ಹಿಂದೂಗಳ ಮತ ಸಿಗಲ್ಲ ಎಂಬುದು ಅವರ ಮನಸ್ಸಲ್ಲಿದೆ, ಅಶೋಕ್ ರೈಗಳೇ ನೀವು ನನ್ನ ಬೆವರಿನಿಂದ ಶಾಸಕರಾಗಿದ್ದೀರಿ, ಮುಂದಿನ ಬಾರಿ ನಿಮ್ಮನ್ನ ನಾನು ಮಾಜಿ ಶಾಸಕನಾಗಿ ಮಾಡುತ್ತೇನೆ, ನೀವು ಒಂದು ಗ್ರಾಮ ಪಂಚಾಯತ್ ಚುನವಣೆಯಲ್ಲೂ ನಿಂತ್ರೂ ಸೋಲಿಸುತ್ತೇನೆ, ನಿಜವಾಗಿ ಹಕೀಂ ಕೂರ್ನಡ್ಕನನ್ನ ಗಡಿಪಾರು ಮಾಡುವ ಮೊದಲು ಅಶೋಕ್ ರೈ ಅವರನ್ನ ಗಡಿಪಾರು ಮಾಡಬೇಕು ಎಂದರು.

Recent Articles

spot_img

Related Stories

Share via
Copy link