ಹೆಚ್.ಎ.ಎಲ್ ಯು.ಪಿ.ಎ ಅವಧಿಯಲ್ಲಿ ಮಾಡಿದ್ದು : ಸಿದ್ದರಾಮಯ್ಯ

ಬೆಂಗಳೂರು;

    ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದ ಕೆಲಸಗಳನ್ನೇ ರಾಜ್ಯಕ್ಕೆ ಬಂದು ಉದ್ಘಾಟಿಸಿದ್ದಾರೆ. ಹೆಚ್.ಎ.ಎಲ್ ಅನ್ನು ಯು.ಪಿ.ಎ ಅವಧಿಯಲ್ಲಿ ಮಾಡಿದ್ದು, ಅದನ್ನು ಮೋದಿ ಉದ್ಘಾಟಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ಜನರಿಗೆ ಮೋದಿಯವರು ಹಕ್ಕುಪತ್ರ ನೀಡಿದರು, ಆ ಕಾನೂನನ್ನು ಮಾಡಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ವಾಸಿಸುವನೆ ಮನೆಯೊಡೆಯ ಎಂಬ ಕಾಯ್ದೆ ತಂದಿದ್ದರು. ನಾನು ಒಂದು ಸಮಿತಿ ಮಾಡಿ, ಅಧಿಕಾರಿಯನ್ನು ನೇಮಿಸಿ, ಅವರಿಂದ ವರದಿ ಪಡೆದು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ನಾವು ಅಡುಗೆ ಮಾಡಿದ್ವಿ, ಮೋದಿ ಅವರು ಬಂದು ಬಡಿಸಿದ್ದಾರೆ ಎಂದರು.

    ಬಿಜೆಪಿಯವರಿಗೆ ನರೇಂದ್ರ ಮೋದಿ ಅವರೇ ಬಂಡವಾಳ. ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಹಗರಣದಲ್ಲಿ ಮುಳುಗಿದೆ, ಏನೂ ಕೆಲಸ ಮಾಡಿಲ್ಲ. ವಚನ ಭ್ರಷ್ಟತೆಯಿಂದ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋದರೆ ತಮಗೆ ಲಾಭವಾಗುತ್ತೆ ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ತಪುö್ಪ ಕಲ್ಪನೆ. ಈಗಾಗಲೇ ರಾಜ್ಯದ ಜನ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದರು.

    ಬಿಜೆಪಿ ಪಕ್ಷಕ್ಕೆ ಬಹುಮತ ಬಂದರೆ ತಾನೆ ಆ ನಂತರ ಆರ್.ಎಸ್.ಎಸ್ ನವರು ತೀರ್ಮಾನ ಮಾಡೋದು? ಯಾವಾಗ ಅವರಿಗೆ ಬಹುಮತ ಬಂದಿತ್ತು ಹೇಳಿ? 2008 ರಲ್ಲಿ 110 ಸ್ಥಾನ, 2018 ರಲ್ಲಿ 104 ಸ್ಥಾನ, 2013ರಲ್ಲಿ 40 ಸ್ಥಾನ ಬಂದಿತ್ತು. ಈಗ 2023 ರಲ್ಲಿ 50 ರಿಂದ 60 ಸ್ಥಾನ ಬರಬಹುದು. ಬಿಜೆಪಿ ಸರ್ಕಾರದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಅವರು ಸತ್ಯ ಹೇಳಿದ್ದಾರೆ. ಬಿಜೆಪಿಯವರು ಕಳ್ಳರು. ವಜ್ಜಲ್ ಅವರು ನಾರಾಯಣಪುರ ಎಡದಂಡೆ ಕಾಲುವೆಯ ಕೆಲಸವನ್ನೇ ಮಾಡದೆ ದುಡ್ಡು ತಗೊಂಡಿದ್ದಾರೆ. 40% ಕಮಿಷನ್ ಹೊಡೆದಿದ್ದಕ್ಕೆ ಕೆಲಸ ಮಾಡದಿದ್ರೂ ಬಿಲ್ ಕೊಡುತ್ತಾರೆ ಎಂದರು.

     ನಾನು ಆರ್.ಅಶೋಕ್‌ಗಿಂತ ಮೊದಲು ರಾಜಕೀಯಕ್ಕೆ ಬಂದಿದ್ದು, 1978 ರಿಂದ ರಾಜಕಾರಣದಲ್ಲಿದ್ದೀನಿ. ಈಗ 45 ವರ್ಷ ಆಯ್ತು. ನನಗಿದು ಕೊನೆ ಚುನಾವಣೆ ಎಂದು ಹೇಳಲು ಅಶೋಕ್‌ಗೆ ಯಾವ ನೈತಿಕತೆ ಇದೆ? ನಾನು ಅಶೋಕ್‌ನಿಂದ ಪಾಠ ಹೇಳಿಸಿಕೊಳ್ಳಬೇಕೆÀ? ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ಮನೆಗೆ ಕಳಿಸಿದ್ರು. ಬಸವರಾಜ ಬೊಮ್ಮಾಯಿಗೂ ಮತ್ತು ಯಡಿಯೂರಪ್ಪ ಅವರಿಗೂ ಈಗ ಆಗಲ್ಲ. ಯಡಿಯೂರಪ್ಪ ಅವರ ಮಗನ್ನ ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಿಲ್ಲ. ಲಂಚ ಜಾಸ್ತಿ ಸಿಗುತ್ತೆ ಅಂತಲೇ ಒಂದೂವರೆ ವರ್ಷದಿಂದ ಸಂಪುಟ ವಿಸ್ತರಣೆ ಮಾಡದೆ ಸುಮಾರು ಇಲಾಖೆಗಳನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

     ಈ ತಿಂಗಳ ಕೊನೆಯ ಹೊತ್ತಿಗೆ 120 ರಿಂದ 150 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರುವವರು ಸಾಕಷ್ಟು ಜನ ಇದ್ದಾರೆ. ಮುಂದೆ ನೋಡೋಣ ಎಂದರು.

Recent Articles

spot_img

Related Stories

Share via
Copy link
Powered by Social Snap