ಚಿಕ್ಕನಾಯಕನಹಳ್ಳಿ :
ಮುರಳೀಧರ ಹಾಲಪ್ಪನವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡುವುದಾಗಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ಎಸ್.ಕಿರಣಕುಮಾರ್ ಹೇಳಿದ್ದಾರೆ.
ಪಟ್ಟಣ ಎಸ್.ಎಸ್.ಪಾರ್ಟಿಹಾಲ್‍ನಲ್ಲಿ ಬ್ಲಾಕ್ ಕಾಂಗ್ರೆಸ್ ಸಮತಿ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮುರಳೀಧರ ಹಾಲಪ್ಪನವರು ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವವರಿದ್ದಾರೆ, ಆದ್ದರಿಂದ ವರಿಷ್ಠರು ಮುರಳೀಧರ ಹಾಲಪ್ಪನವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಮುರಳೀಧರ ಹಾಲಪ್ಪನವರು ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಸಮಾಜದ ಸೇವೆಯಲ್ಲಿ ಕೆಲಸ ಮಾಡುತ್ತಿದ್ದು ಅಂತಹವರು ಜಿಲ್ಲೆಯ ಸಂಸದರಾದಲ್ಲಿ ಒಳ್ಳೆಯ ಕೆಲಸವಾಗಲಿದೆ ಎಂದು ಹೇಳಿದರು.
ಹಾಲಪ್ಪನವರು ಗೆದ್ದು, ಕೇಂದ್ರದಲ್ಲೂ ಕಾಂಗ್ರಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಡಬಲ್ ಇಂಜಿನ್ ಸರಕಾರವಾಗಲಿದ್ದು, ಒಳ್ಳೆಯ ಕೆಲಸ ಮಾಡಬಹುದು, ನಾನು ಸೋತಿದ್ದರೂ ನಮ್ಮದೇ ಸರಕಾರ ಇರುವುದರಿಂದ ನಮ್ಮ ಕಾರ್ಯಕರ್ತರ ಕೆಲಸಕಾರ್ಯ ಮಾಡಲು ಸಹಕಾರಿಯಾಗಿದೆ.ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಮಾಡಿಕೊಡಲು ಸಹಕಾರ ಆಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಮುರಳೀಧರ ಹಾಲಪ್ಪನವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ