ಜಾರ್ಖಂಡ್ :
ಕಾಡಿನಲ್ಲಿ ಸಾಗುತ್ತಿರುವ ವೇಳೆ ಆನೆಯೊಂದು ತನ್ನ ಮರಿಗೆ ಹಳಿ ಮೇಲೆ ಜನ್ಮ ನೀಡುತ್ತಿದ್ದಾಗ ಅದಕ್ಕೆ ತೊಂದರೆಯಾಗಬಾರದು ಎಂದು ರೈಲು ತಾಳ್ಮೆಯಿಂದ ಎರಡು ಗಂಟೆಗಳ ಕಾಲ ಕಾದ ಹೃದಯಸ್ಪರ್ಶಿ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಇದು ಮಾನವ- ಪ್ರಾಣಿಗಳ “ಸಾಮರಸ್ಯದ” ಸಹಬಾಳ್ವೆಯನ್ನು ಸಂಕೇತಿಸುತ್ತದೆ.
ಪರಿಸರ ಸಚಿವ ಭೂಪೇಂದ್ರ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ರೈಲ್ವೆ ಚಾಲಕ ಮತ್ತು ರೈಲ್ವೆ ಅಧಿಕಾರಿಗಳನ್ನು ಶ್ಲಾಘಿಸಿದರು. ರೈಲು ನಿರ್ವಾಹಕರು ಎರಡು ಗಂಟೆಗಳ ಕಾಲ ತಾಳ್ಮೆಯಿಂದ ಕಾದು ಆನೆ ತನ್ನ ಕರುವಿಗೆ ಜನ್ಮ ನೀಡಿದ ನಂತರ ಮುಂದಕ್ಕೆ ಸಾಗಿತ್ತು ಮಾನವ-ಪ್ರಾಣಿ ನಡುವಿನ ಸಾಮರಸ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ದೇಶದಲ್ಲಿ 3,500 ಕಿ.ಮೀ. ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ ರೈಲ್ವೆ ಮತ್ತು ಪರಿಸರ ಸಚಿವಾಲಯವು 110 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿದೆ ಇಂತಹ ಹೃದಯಸ್ಪರ್ಶಿ ಸಂದರ್ಭಗಳಿಗೆ ಸಾಕ್ಷಿಯಾಗುವುದನ್ನು ನೋಡುವುದು ಸಂತಸವಾಗಿದೆ ಎಂದಿದ್ದಾರೆ. ಜಾರ್ಖಂಡ್ ಅರಣ್ಯ ಇಲಾಖೆಯು ಪ್ರಾಣಿಯ ಬಗ್ಗೆ ಸೂಕ್ಷ್ಮತೆಯನ್ನು ತೋರಿಸಿ ಆನೆಯು ತನ್ನ ಮರಿಗೆ ಜನ್ಮ ನೀಡಲು ಅವಕಾಶ ನೀಡಿದ್ದಕ್ಕಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಭಾರೀ ಮೆಚ್ಚುಗೆ ಪಡೆದಿದೆ ಇಂದು ನಾನು ನೋಡಿದ ಅತ್ಯುತ್ತಮ ಸುದ್ದಿಗಳಲ್ಲಿ ಒಂದು. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್, ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆನೆ ಮತ್ತು ಅದರ ಮರಿ ಸುರಕ್ಷಿತವಾಗಿವೆ. ರೈಲ್ವೆ ಸಿಬ್ಬಂದಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
