ಮಧುಗಿರಿ : ದನಗಳ ಜಾತ್ರೆಯಲ್ಲಿ ಪ್ರಾಬಲ್ಯ ಮೆರೆದ ಹಳ್ಳಿಕಾರ್ ಹೋರಿಗಳು

ಮಧುಗಿರಿ :

    ಕಳೆದ ಮೂರು ದಿನಗಳಿಂದ ಆರಂಭವಾದ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಹೋರಿಗಳು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿವೆ.ಇತಿಹಾಸ ಪ್ರಸಿದ್ಧ ಶ್ರೀದಂಡಿನ ಮಾರಮ್ಮನ ಜಾತ್ರ ಮಹೋತ್ಸವದ ಹಿನ್ನೆಲೆಯಲ್ಲಿ ಶಿವರಾತ್ರಿ ಹಬ್ಬ ದಿನದಿಂದ ದನ ಜಾತ್ರೆಗಳನ್ನು ತಾಲೂಕು ಆಡಳಿತ ಆಯೋಜಿಸಿದೆ. 

 ಜಾತ್ರೆಯಲ್ಲಿ ವಿವಿಧ ತಳಿಗಳ ಸುಮಾರು 5000 ಜೋಡಿ ಹೋರಿ , ಹಸುಗಳನ್ನು ಮಾರಾಟ ಮತ್ತು ಕೊಳ್ಳಲು ವಿವಿಧ ಜಿಲ್ಲೆಗಳಾದ ಹಾಸನ , ಚಿಕ್ಕಬಳ್ಳಾಪುರ , ಕೆ.ಆರ್ ನಗರ , ಬೆಳ್ಳೂರು ಕ್ರಾಸ್ , ನಾಗಮಂಗಲ , ಚಿತ್ರದುರ್ಗ , ಹಾವೇರಿ ಹೂವಿನಹಡಗಲಿ , ಬಳ್ಳಾರಿ , ಚಳ್ಳಕೆರೆ ಸೇರಿದಂತೆ ನೆರೆಯ ತಮಿಳು ನಾಡು ಆಂಧ್ರಪ್ರದೇಶಗಳಿಂದ ಹೋರಿಗಳನ್ನು ಕೊಳ್ಳವವರು ಆಗಮಿಸಿದ್ದಾರೆ.

    ಬರಗಾಲದ ಸಮಯದಲ್ಲಿಯೂ ತಾಲೂಕು ಆಡಳಿತವು ದನಗಳ ಜಾತ್ರೆಗಾಗಿ ನೀರು , ಬೆಳಕು , ಪಶು ಆಸ್ಪತ್ರೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಧಿಕಾರಿಗಳು ಸಿಬ್ಬಂದಿಗಳು ನಿರ್ವಹಿಸಿದ್ದಾರೆ.ಜಾತ್ರೆಗೆ ಆಗಮಿಸುವಂತಹ ಜಾನುವಾರು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಯಾವುದೇ ಜಕಾತಿ ( ಸುಂಕ)ಗಳನ್ನು ವಿಧಿಸದೆ ಸಂಪೂರ್ಣ ವಾದ ಉಚಿತ ವ್ಯವಸ್ಥೆಗಳನ್ನು ಕಲ್ಪಿಸಲಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಸಚಿವರಾದ ಕೆ.ಎನ್ ರಾಜಣ್ಣನವರ ಕಾರ್ಯಕ್ಕೆ ರೈತರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

   ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಕಬ್ಬರೂ ಗ್ರಾಮದ ರೈತರಾದ ಬೋರೆಗೌಡ , ಮುದ್ದಲಿಂಗಪ್ಪ , ಪವನ್ ಎನ್ನುವವರು ಸುಮಾರು 3 ಲಕ್ಷದ 20 ಸಾವಿರ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಹೋರಿಗಳನ್ನು ಮಾರಾಟ ಮಾಡಲು ಜಾತ್ರೆಯಲ್ಲಿ ಭಾಗವಹಿಸಿದ್ದು ಜಾತ್ರಾ ವ್ಯವಸ್ಥೆಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ಬನ್ನೂರು ತಳಿಯ ಕುರಿಮರಿಗಳನ್ನು ಮಾರಾಟ ಮಾಡಲು ಆಗಮಿಸಿರುವುದು ವಿಶೇಷವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link