ಆದಿಪುರುಷ್‌ ನಂತೆ ನಿರೀಕ್ಷೆ ಹುಟ್ಟಿಸಿದ ಹನುಮಾನ್‌ ….!

ತುಮಕೂರು:

    ಪೌರಾಣಿಕ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಹಾಗಾಗಿ ಮಹಾಭಾರತ, ರಾಮಾಯಣ ಮುಂತಾದ ಕಥೆಗಳನ್ನು ಆಧರಿಸಿ ಹಲವು ಸಿನಿಮಾ ಮತ್ತು ಧಾರಾವಾಹಿಗಳು ಮೂಡಿಬರುತ್ತಲೇ ಇವೆ.

   ಇತ್ತೀಚೆಗಷ್ಟೇ ‘ಆದಿಪುರುಷ್​’  ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ ಕಾಣಿಸಿಕೊಂಡಿದ್ದಾರೆ. ಓಮ್‌ ರಾವತ್​ ನಿರ್ದೇಶನದ ಈ ಚಿತ್ರಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಸರಿಯಾದ ರೀತಿಯಲ್ಲಿ ರಾಮಾಯಣದ ‌ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಿಲ್ಲ ಎಂದು ಹಲವರು ತಕರಾರು ತೆಗೆದಿದ್ದಾರೆ. ಇದರ ಬೆನ್ನಲ್ಲೇ ಬೇರೆ ಸಿನಿಮಾಗಳ ಬಗ್ಗೆಯೂ ಚರ್ಚೆ ಆಗುತ್ತಿದೆ.

    ರಾಮಾಯಣದ ಕಥೆಯನ್ನು ಆಧರಿಸಿ ಇನ್ನೂ ಕೆಲವು ಚಿತ್ರಗಳು ಸಿದ್ಧ ಆಗುತ್ತಿವೆ. ಆ ಪೈಕಿ ಹೆಚ್ಚು ನಿರೀಕ್ಷೆ ಮೂಡಿಸಿರುವುದು ‘ಹನುಮಾನ್​’ ಸಿನಿಮಾ. ಈ ಚಿತ್ರ ಕೂಡ ‘ಆದಿಪುರುಷ್​’ ರೀತಿಯೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. ಹೆಸರೇ ಸೂಚಿಸುವಂತೆ ಇದರಲ್ಲಿ ಆಂಜನೇಯನ ಕಥೆ ಪ್ರಮುಖವಾಗಿ ಇರಲಿದೆ.

    ‘ಹನುಮಾನ್​’ ಚಿತ್ರಕ್ಕೆ ಪ್ರಶಾಂತ್​ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೇಜ ಸಜ್ಜಾ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಅಮೃತಾ ಅಯ್ಯರ್​, ವರಲಕ್ಷ್ಮಿ ಶರತ್​ಕುಮಾರ್​, ವಿನಯ್ ರೈ, ರಾಜ್​ ದೀಪಕ್​ ಶೆಟ್ಟಿ, ವೆನ್ನೆಲಾ ಕಿಶೋರ್​ ಮುಂತಾದವರು ಕೂಡ ‘ಹನುಮಾನ್​’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 2022ರ ನವೆಂಬರ್​ ತಿಂಗಳಲ್ಲಿ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿತ್ತು. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಲಿದೆ.

    ಪೌರಾಣಿಕ ಕಥಾಹಂದರ ಇಟ್ಟುಕೊಂಡು ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ‘ಆದಿಪುರುಷ್​’ ರೀತಿ ಟೀಕೆಗೆ ಒಳಗಾಗಬೇಕಾಗುತ್ತದೆ. ಈಗ ‘ಹನುಮಾನ್​’ ಸಿನಿಮಾ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವಿಶೇಷ ಏನೆಂದರೆ ಇದು ಸಂಪೂರ್ಣ ಪೌರಾಣಿಕ ಕಥೆಯನ್ನು ಹೊಂದಿರುವ ಸಿನಿಮಾ ಅಲ್ಲ. ಹನುಮಂತನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಬೇರೆಯದೇ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುವುದು ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಆ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಪ್​ಡೇಟ್​ ಸಿಗಬೇಕಿದೆ.

    ‘ಹನುಮಾನ್​’ ಸಿನಿಮಾದ ಕೆಲಸಗಳು ತಡವಾಗುತ್ತಿವೆ. ಇದರಲ್ಲಿ ಸಾಕಷ್ಟು ಗ್ರಾಫಿಕ್ಸ್​ ಬಳಕೆ ಆಗುತ್ತಿದೆ. ಮೂಲಗಳ ಪ್ರಕಾರ 1600 ಶಾಟ್​ಗಳಲ್ಲಿ ವಿಎಫ್​​ಎಕ್ಸ್​ ಇರಲಿದೆ. ಅದಕ್ಕಾಗಿ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಬಜೆಟ್​ ಹೆಚ್ಚಾಗುತ್ತಿದೆ. ಸಿನಿಮಾದ ಬಿಸ್ನೆಸ್​ ಮಾತುಕತೆ ಕೂಡ ಅಂತಿಮವಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap