ನಾಯಕನಹಟ್ಟಿ
ಪಟ್ಟಣದ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಗ್ರಾಮಸ್ಥರ ಮನೆಯನ್ನು ಆಲಿಸಿ ಜೂಜಾಟ ಬೆಟ್ಟಿಂಗ್ ಅಕ್ರಮ ಮಧ್ಯ ಮಾರಾಟ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಸ್ ಶಿರೇಹಳ್ಳಿ ಎಚ್ಚರಿಸಿದರು.
ನಂತರ ಮಾತನಾಡಿದ ಅವರು ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿ ದರು.ಗ್ರಾಮದಲ್ಲಿ ಇನ್ನು ಯಾರು ಅಕ್ರಮ ಮಧ್ಯ ಮಾರಾಟ ಮಾಡುತ್ತಾರೆ, ಎಂಬ ಮಾಹಿತಿ ನೀಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ವಾಹನಸವರು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ ಹಾಗೂ ವಾಹನಗಳಿಗೆ ಇನ್ಸೂರೆನ್ಸ್ ಮಾಡಿಸಿ ಮತ್ತು ವಾಹನಸವರು ಚಾಲನಾ ಪರವಾನಿ ಪಡೆಯಬೇಕು.ಅಪ್ಪ ಮಕ್ಕಳಿಗೆ ವಾಹನವನ್ನು ಚಾಲನೆಗೆ ನೀಡಬಾರದು.ಎಂದು ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.ನಂತರ ಮುಖಂಡ ಓಬಳೇಶ್ ಮಾತನಾಡಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಹಾವಳಿ ಹೆಚ್ಚಾಗಿದ್ದು, ಅದನ್ನು ತೊಡೆಯಬೇಕಿದೆ.
ಇತ್ತೀಚಿನ ಯುವಕರು ಚಿಕ್ಕ ವಯಸ್ಸಿಗೆ ಮಧ್ಯ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಹದಗಿಡುತ್ತಿವೆ,ಅಕ್ರಮ ಮಧ್ಯ ಮಾರಾಟಗಾರರು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಅಂತವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಂಡರು.
ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣ ಕೊಡದೆ ಇದ್ದರೆ ನಮ್ಮ ಮೇಲೆ ನಮ್ಮ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ.ಮಾಂಗಲ್ಯ ಮತ್ತು ಕಿವಿ ಓಲೆ ಕುಡಿತ ಚಟಕ್ಕಾಗಿ ಮನೆ ಸಾಮಾನುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಎನ್ ಉಪ್ಪಾರಹಟ್ಟಿ ಗ್ರಾಮದ ಮುಖಂಡರು,ಮಹಿಳೆಯರು, ಯುವಕರು ಇನ್ನು ಮುಂತಾದವರು ಹಾಜರಿದ್ದರು.
ನೊಂದ ಮಹಿಳೆ ಮಾತನಾಡಿ ಕುಡಿದು ಬಂದು ನಮ್ಮ ಮನೆಯಲ್ಲಿ ಪ್ರತಿದಿನ ಜಗಳ ಮಾಡುತ್ತಾರೆ ಸ್ವಾಮಿ.ಹಾಗೂ ನಮ್ಮ ಮಕ್ಕಳು ಯುವಕರು ಕುಡಿತಕ್ಕೆ ದಾಸರಾಗಿದ್ದಾರೆ.ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ನನ್ನ ಗಂಡ ದುಡಿದ ಹಣವೆಲ್ಲ ಕುಡಿತಕ್ಕೆ ಹಾಕುತ್ತಿದ್ದಾರೆ.ಸಾರಾಯಿ ಮಾರುವವರನ್ನು ಗಡಿಪಾರು ಮಾಡಬೇಕು ಎಂದು ಮಹಿಳೆಯರು ಊರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.








