ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯಕ್ಕೆ ಖಂಡನೆ

ಧಾರವಾಡ:

      ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಹತ್ಯೆ ಪ್ರಕರಣಗಳನ್ನು ಖಂಡಿಸಿ ಎಐಎಂಎಸ್ ಎಸ್ ಮತ್ತಿ ಎಐಡಿವೈಓ ಸಂಘಟನೆಗಳಿಂದ ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಧಾರವಾಡದ ಸುಭಾಸ್ ರಸ್ತೆಯ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಧುಲತಾ ಗೌಡರ್, ಉನ್ನತ ನೀತಿ, ನೈತಿಕತೆ, ಸಂಸ್ಕೃತಿ, ನೈಜ ಪ್ರೀತಿ ಭಾವನೆಯ ಪರಿಕಲ್ಪನೆಗಳ ಜ್ಞಾನದ ಕೊರತೆ ಇಂದಿನ ಯುವಸಮುದಾಯವನ್ನು ಬಲವಾಗಿ ಕಾಡುತ್ತಿದೆ. ಆಳುವ ಸರ್ಕಾರಗಳ ಕುಮ್ಮಕ್ಕಿನೊಂದಿಗೆ ಇವತ್ತಿನ ಸಿನೆಮಾ – ಸಾಹಿತ್ಯ – ಇಂಟರ್ನೆಟ್ ಗಳಲ್ಲಿ ವ್ಯಾಪಾಕವಾಗಿ ಭಿತ್ತರವಾಗುತ್ತಿರುವ ಹಿಂಸೆ, ಕ್ರೌರ್ಯ , ಅಶ್ಲೀಲತೆ ಹಾಗೂ ಮದ್ಯ- ಮಾದಕ ದ್ರವ್ಯಗಳ ಹಾವಳಿ 

     ವಿದ್ಯಾರ್ಥಿ- ಯುವಜನರ ಮನಸ್ಥಿತಿಯನ್ನು ಕಲುಷಿತ ಮಾಡುತ್ತಿದೆ. ಹಾಗಾಗಿ ಅತ್ಯಾಚಾರ, ಗುಂಪು ಅತ್ಯಾಚಾರ, ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಮೃಗಿಯ ಹತ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ನಡೆದ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ, ಹುಬ್ಬಳ್ಳಿಯಲ್ಲಿ ನಡೆದ ನೇಹಾ – ಅಂಜಲಿ ಹತ್ಯೆ ಪ್ರಕರಣಗಳು, ಕೊಡಗಿನ ಮೀನಾಳ ರುಂಡ ಕತ್ತರಿಸಿದ ಹೇಯ ಕೃತ್ಯ ಜೊತೆಗೆ ಅಂಜಲಿ ಕೊಲೆ ಸಮಾಜದಲ್ಲಿ ತೀವ್ರ ಅಘಾತದ ಅಲೆಯೆಬ್ಬಿಸಿವೆ.

     ಈ ಘಟನೆಗಳು ಜಿಲ್ಲೆ, ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಇದರಿಂದ ಆಘಾತಕ್ಕೋಳಗಾದ ಸಾಮಾನ್ಯ ಜನ, ಗ್ರಾಮೀಣ ಭಾಗದ ತಂದೆ-ತಾಯಂದಿರು ಹೆಣ್ಣುಮಕ್ಕಳನ್ನು ಶಾಲೆ- ಕಾಲೇಜುಗಳಿಗೆ ಕಳಿಸುವ ಬಗ್ಗೆ ಯೋಚಿಸುವಂತಾಗಿದೆ. ಇಂತಹ ಘಟನೆಗಳನ್ನು ರಾಜಕೀಯ ಪಕ್ಷಗಳು ತಮ್ಮ ವೈಯುಕ್ತಿಕ ಹಿತಾಸಕ್ತಿ, ಚುನಾವಣಾ ರಾಜಕೀಯಕ್ಕೆ ಜಾತಿ- ಧರ್ಮದ ಲೇಪನ ಹಚ್ಚಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಇನ್ನೂ ಹೇಯವೆನಿಸುತ್ತಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಭವಾನಿ ಶಂಕರ ಗಂಗೂಬಾಯಿ ಕೋಕರೆ – ಬಡಾವಣೆ,ಕೊಳಗೇರಿ, ರಣಜಿತ್ ದೂಪದ್, ಪ್ರೀತಿ ಸಿಂಗಾಡೆ, ಪವಿತ್ರಾ, ಲಕ್ಷ್ಮೀ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap