ಆಸ್ಟ್ರೇಲಿಯಾ ಕ್ರಿಕೆಟಿಗರ ಟ್ರೋಲ್‌ : ಗರಂ ಆದ ಹರಬಜನ್‌

ನವದೆಹಲಿ:

     ಐಸಿಸಿ ವಿಶ್ವಕಪ್ 2023 ಫೈನಲ್ ನಲ್ಲಿ ಭಾರತ ಸೋತ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುತ್ತಿರುವ ಭಾರತೀಯ ಅಭಿಮಾನಿಗಳ ವರ್ತನೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ. 

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಜ್ಜಿ,  ವಿಶ್ವಕಪ್ ವಿಜೇತರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುವುದು ಸಂಪೂರ್ಣವಾಗಿ ಕೆಟ್ಟ ಅಭಿರುಚಿಯಿಂದ ಕೂಡಿದೆ ಎಂದು ಬರೆದಿದ್ದಾರೆ. ಫೈನಲ್‌ನಲ್ಲಿ ಉತ್ತಮ ತಂಡಕ್ಕೆ ಸೋಲಾಗಿದೆ. ಆದರೆ ಕ್ರಿಕೆಟ್ ಅಭಿಮಾನಿಗಳು ಇತರರನ್ನು ಟ್ರೋಲ್ ಮಾಡಬಾರದು. ವಿವೇಕ ಮತ್ತು ಘನತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು ಅವರು ಹೇಳಿದ್ದಾರೆ. 

    ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಕೂಡ ಈ ವಿಷಯವನ್ನು ಹೈಲೈಟ್ ಮಾಡಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ ಆದರೆ ನೀವು ಭಾರತೀಯರಾಗಬಹುದು, ನೀವು ಬೆಳೆದ ದೇಶವನ್ನು ಬೆಂಬಲಿಸಬಹುದು ಅಲ್ಲದೇ ಮುಖ್ಯವಾಗಿ ನಿಮ್ಮ ಪತಿ, ನಿಮ್ಮ ಮಗು ಆಡುವ ತಂಡವನ್ನು ಬೆಂಬಲಿಸಬಹುದು. ಚಿಲ್ ಮಾತ್ರೆ ತೆಗೆದುಕೊಳ್ಳಿ, ಹೆಚ್ಚಿನ ಮುಖ್ಯವಾದ ವಿಷಯದ ಕಡೆಗೆ ಆ ಆಕ್ರೋಶವಿರಲಿ ಎಂದು  ಇನ್ಸ್ಟಾಗ್ರಾಮ್ ನಲ್ಲಿ ವಿನಿ ರಾಮನ್ ಫೋಸ್ಟ್ ಮಾಡಿದ್ದಾರೆ. 

   ಮತ್ತೊಂದೆಡೆ ಸಂಭ್ರಮಾಚರಣೆಯಲ್ಲಿ ಬಿಯರ್ ಬಾಟಲಿ ಹಿಡಿದು ವಿಶ್ವಕಪ್ ಮೇಲೆ ಕಾಲು ಹಾಕಿ ಕುಳಿತ ಆಸ್ಟ್ರೇಲಿಯಾದ ಆಟಗಾರ ಮಿಚ್ಚೆಲ್ ಮಾರ್ಷ್ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap