ಮಹಿಕಾ ಶರ್ಮಾ ಜತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ಕಿಲಾಡಿ ಪಾಂಡ್ಯ

ಮುಂಬಯಿ:

     ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ  ಮಾಜಿ ಪತ್ನಿ ನತಾಶಾ ಜತೆ ವಿಚ್ಚೇಧನ ಪಡೆದ ಬಳಿಕ ಮಹಿಕಾ ಶರ್ಮಾ ಜೊತೆ ವಿದೇಶಿ ಪ್ರವಾಸ, ಬೀಚ್‌ನಲ್ಲಿ ಸುತ್ತಾಟ ಹೀಗೆ ಹಲವು ಬಾರಿ ಕಾಣಿಸಿಕೊಂಡಿದ್ದರು. ಇದೀಗ ಮಹಿಕಾ ಶರ್ಮಾ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಹೌದು, ಪಾಂಡ್ಯ ತಮ್ಮ ಪುತ್ರ ಅಗಸ್ತ್ಯ, ಸಾಕು ಪ್ರಾಣಿ, ಕ್ರಿಕೆಟ್‌ ಅಭ್ಯಾಸದ ಫೋಟೊಗಳ ಜತೆಗೆ ಮಹಿಕಾ ಶರ್ಮಾ ಜತೆಗಿರುವ ರೊಮ್ಯಾಂಟಿಕ್ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಇದರಲ್ಲೊಂದು ವಿಡಿಯೊ ಕೂಡ ಇದ್ದು ವಿಡಿಯೊದಲ್ಲಿ ಪಾಂಡ್ಯ ಮತ್ತು ಮಹಿಕಾ ಭಜನೆ ಮೂಲಕ ದೇವರನ್ನು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಜತೆಗೆ ಮಹಿಕಾ ಅವರ ಕೆನ್ನೆಗೆ ಮುತ್ತು ನೀಡುತ್ತಿರುವುದು ಕಂಡುಬಂದಿದೆ.

   ಮತ್ತೊಂದು ಚಿತ್ರಗಳಲ್ಲಿ, ತಮ್ಮ ವ್ಯಾಯಾಮದ ಸಮಯದಲ್ಲಿ ರೊಮ್ಯಾಂಟಿಕ್ ಆಗಿ ಹಾರ್ದಿಕ್ ಅವರು ಮಹಿಕಾರನ್ನು ಎತ್ತಿಕೊಂಡಿರುವುದನ್ನು ಕಾಣಬಹುದು. ಒಟ್ಟಾರೆ ಇವರಿಬ್ಬರು ಅಧಿಕೃತವಾಗಿ ಡೇಟಿಂಗ್‌ ನಡೆಸುತ್ತಿದ್ದು ಶೀಘ್ರದಲ್ಲೇ ಹಸೆಮಣೆ ಏರುವ ಸಾಧ್ಯತೆ ಇದೆ. ಮಹಿಕಾ ಶರ್ಮಾ ಮಾಡೆಲ್ ಮತ್ತು ಯೋಗ ಟ್ರೈನರ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಕೂಡ ಆಗಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. 

   ಹಾರ್ದಿಕ್‌ ಪಾಂಡ್ಯ ತನ್ನ ಎಲ್ಲ ಆಸ್ತಿಗಳನ್ನು ತಾಯಿಯ ಹೆಸರಿನಲ್ಲಿ ಮಾಡಿದ್ದಾರೆ. ಈ ವಿಚಾರವನ್ನು ಅವರು ಸಂದರ್ಶನದ ವೇಳೆ ತಿಳಿಸಿದ್ದರು. ಇದೇ ಕಾರಣಕ್ಕೆ ಪಾಂಡ್ಯ ಅವರು ಮಾಜಿ ಪತ್ನಿ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದ ನೀಡುವ ವೇಳೆ ಯಾವುದೇ ಜೀವನಾಂಶ ನೀಡುವ ಪ್ರಮೇಯವೇ ಬರಲಿಲ್ಲ. 

   ಸದ್ಯ ಗಾಯದಿಂದ ಚೇತರಿಕೆ ಕಂಡಿರುವ ಹಾರ್ದಿಕ್‌ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮೂಲಕ ಮತ್ತೆ ಟೀಮ್‌ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣದಿಂದ ಅವರು ಮುಂಬೈನಲ್ಲಿ ಕಠಿಣ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಅಭ್ಯಾಸ ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 30 ರಿಂದ ಆರಂಭಗೊಳ್ಳಲಿದೆ. ಮೊಲ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಉಳಿದ ಎರಡು ಪಂದ್ಯಗಳು ಕ್ರಮವಾಗಿ ಡಿಸೆಂಬರ್ 3 ರಂದು ರಾಯ್‌ಪುರದಲ್ಲಿ ಮತ್ತು ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿವೆ.

Recent Articles

spot_img

Related Stories

Share via
Copy link