ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ದ್ವೇಷದ ಭಾಷಣ ನಿಯಂತ್ರಿಸಿ: ಸುಪ್ರೀಂ

ನವದೆಹಲಿ: 

   ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ದ್ವೇಷದ ಭಾಷಣ ನಿಯಂತ್ರಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ವಿರುದ್ಧದ ಪ್ರಕರಣದ ದೂರುದಾರ ವಜಾಹತ್ ಖಾನ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಕೋರ್ಟ್ ಈ ರೀತಿಯ ಸಲಹೆ ನೀಡಿದೆ.

   ದ್ವೇಷದ ಭಾಷಣವನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಹೇಳುವುದಕ್ಕೆ ವಿಷಾದ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ, ಅದನ್ನು ನಿಯಂತ್ರಿಸಲು ರಾಜ್ಯವು ಮುಂದಾಗುವುದನ್ನು ಯಾರೂ ಬಯಸುವುದಿಲ್ಲ. ಹೀಗಾಗಿ ವಾಕ್ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು. 

   ಅಂತಹ ಭಾಷಣಗಳು ಅಸಮರ್ಪಕ ಎಂದು ಜನರಿಗೆ ಯಾಕೆ ಕಾಣಿಸುತ್ತಿಲ್ಲ ಎಂದು ಕೇಳಿದ ನ್ಯಾಯಪೀಠ, ಇಂತಹ ಕೆಲವು ಭಾಷಣಗಳಿಗೆ ನಿಯಂತ್ರಣ ಇರಬೇಕು. ಜನರು ಅಂತಹ ದ್ವೇಷದ ಭಾಷಣವನ್ನು ಹಂಚಿಕೊಳ್ಳುವುದು ಮತ್ತು ಲೈಕ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಹೇಳಿತು.

   ದ್ವೇಷ ಮತ್ತು ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವಜಾಹತ್ ಖಾನ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಈಗಾಗಲೇ ಒಂದು ಎಫ್‌ಐಆರ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ಇನ್ನೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇಬ್ಬರ ವಿರುದ್ಧವೂ ಪಶ್ಚಿಮ ಬಂಗಾಳದಲ್ಲಿ ಕೇಸ್ ದಾಖಲಾಗಿದೆ.

   ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ದ್ವೇಷದ ಭಾಷಣವನ್ನು ನಿಯಂತ್ರಿಸುವ ಮಾರ್ಗಗಳನ್ನು ಸೂಚಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ವಜಾಹತ್ ಖಾನ್ ಪರ ಹಾಜರಿದ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚಿಸಿತು. 

   ಪಶ್ಚಿಮ ಬಂಗಾಳದ ಹೊರಗೆ ಅವರ ವಜಾಹತ್ ಖಾನ್ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳಲ್ಲಿ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ತಡೆ ನೀಡಿದ ಮೂರು ವಾರಗಳ ನಂತರ ಸುಪ್ರೀಂಕೋರ್ಟ್ ಸೋಮವಾರ ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿತು. ಅವರಿಗೆ ಈ ಪರಿಹಾರವನ್ನು ಮುಂದುವರೆಸಿದ ನ್ಯಾಯಾಲಯ, ಇನ್ನಷ್ಟು ಎಫ್‌ಐಆರ್‌ಗಳನ್ನು ಹಾಕಿ ವ್ಯಕ್ತಿಯನ್ನು ಜೈಲಿಗೆ ಹಾಕುವುದರಲ್ಲಿ ಏನು ಪ್ರಯೋಜನ? ಎಂದು ಪ್ರಶ್ನಿಸಿತು.ಇದಕ್ಕೆ ಉತ್ತರಿಸಿದ ಖಾನ್ ಅವರ ವಕೀಲರು, ತಮ್ಮ ಕಕ್ಷಿದಾರರು ಹಿಂದಿನ ಟ್ವೀಟ್‌ಗಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.

Recent Articles

spot_img

Related Stories

Share via
Copy link