ಭಾರತದ ಮೇಲೆ ಪ್ರಯೋಗಿಸಲು ಪಾಕ್ ಬಳಿ 125-250 ಗ್ರಾಂ ಚಿಕ್ಕ ಅಣುಬಾಂಬ್​!!?

ಇಸ್ಲಾಮಾಬಾದ್ :

      ನಮ್ಮ ಬಳಿ 125-250 ಗ್ರಾಂ ತೂಕದ ಅಣುಬಾಂಬ್​ಗಳಿವೆ. ಗುರಿ ಇಟ್ಟಿರುವ ಪ್ರದೇಶಗಳ ಮೇಲೆ ಇವನ್ನು ಪ್ರಯೋಗಿಸುವ ಮೂಲಕ ಹಾನಿಯನ್ನುಂಟು ಮಾಡಬಲ್ಲೆವು ಎಂದು ಪಾಕ್​ ರೈಲ್ವೆ ಸಚಿವ ಶೇಖ್​ ರಶೀದ್​ ಅಹ್ಮದ್​ ಹೇಳಿದ್ದಾರೆ.

      ಪಾಕ್​ನ ಪಂಜಾಬ್​ ಪ್ರಾಂತ್ಯದ ನಾನಾಖಾನಾ ಸಾಹೀಬ್​ನಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ರಶೀದ್, ಪಾಕ್​ ಮೇಲೆ ಭಾರತ ದಾಳಿ ಮಾಡುವ ದುಸ್ಸಾಹಸ ಮಾಡಿದರೆ, ಇಂತಹ ಅನಾಹುತಗಳನ್ನು ಎದುರಿಸುವ ಅನಿವಾರ್ಯತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಿಲುಕಿಕೊಳ್ಳುತ್ತಾರೆ ಎಂದಿದ್ದಾರೆ.

      ಸದಾ ವಿವಾದಾತ್ಮಾಕ ಹೇಳಿಕೆಯಿಂದಾಗಿ ಹೆಸರಾಗಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲಾ, ಈ ಹಿಂದೆ ಅನೇಕ ಬಾರಿ ವಿವಾದಾತ್ಮಾಕ ಹೇಳಿಕೆ ನೀಡಿದ್ದಾನೆ. ಇತ್ತೀಚಿಗೆ ನರೇಂದ್ರ ಮೋದಿ ವಿರುದ್ಧ ಮಾತನಾಡುವಾಗ ವಿದ್ಯುತ್ ಶಾಕ್ ತಗುಲಿ ಸುದ್ದಿಯಾಗಿದ್ದ.

      ಪಾಕಿಸ್ತಾನ ತಂತ್ರಜ್ಞಾನದಲ್ಲಿ ಅಭಿವೃದ್ದಿ ಹೊಂದಿದ್ದೆ ಎಂಬುದನ್ನು ತೋರ್ಪಡಿಸಿಕೊಳ್ಳುವ ಸಲುವಾಗಿ ಶೇಕ್ ರಶೀದ್ ಅಹ್ಮದ್ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆ ರಾಷ್ಟ್ರದ ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link