ತುಮಕೂರು
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಷರತ್ತು ಬದ್ದ ಬೆಂಬಲ ನೀಡಲಿದೆ ಎಂದು ಸಮಿತಿಯ ಮುಖಂಡ ಗುರುಪ್ರಸಾದ್ ಕೆರಗೋಡು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೪ ರಲ್ಲಿ ಆರ್.ಎಸ್.ಎಸ್-ಬಿಜೆಪಿ ಕೃತಕವಾಗಿ ಸೃಷ್ಟಿಸಿದ್ದ ಕೋಮುದ್ವೇಷದ ‘ಗುಜರಾತ್ ಮಾಡಲ್’ ಭಾಗವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೆಹಲಿಯ ಗದ್ದುಗೆ ಏರಿತು. ಅಲ್ಲಿಂದ ಸತತವಾಗಿ ಭಾರತದ ಜನಸಾಮಾನ್ಯರ ರಕ್ತ ಹೀರುತ್ತಲೇ ಬಂದಿದೆ.
ನೋಟು ರದ್ದತಿ, ಜಿ.ಎಸ್.ಟಿ, ಕೋವಿಡ್ ಲಾಕ್‌ಡೌನ್, ಶ್ರೀಮಂತರ ತೆರಿಗೆ ಕಡಿತ, ಖಾಸಗೀಕರಣದ ಭರಾಟೆ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಬೆಲೆ ಏರಿಕೆ, ಕೋಮುದಳ್ಳುರಿ, ವಿಪರೀತ ಜಾತಿದೌರ್ಜನ್ಯಗಳು ಒಂದೇ ಎರಡೇ, ಕಳೆದ ೯ ವರ್ಷಗಳಲ್ಲಿ ಭಾರತದ ಜನಸಾಮಾನ್ಯರು ನರಕ ನೋಡಿದ್ದಾರೆ. ಅದರಲ್ಲಿ ದಲಿತರು ರೌರವ ನರಕ ಅನುಭವಿಸಿದ್ದಾರೆ. ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದು ನೈತಿಕ ಪೊಲೀಸ್ ಗಿರಿ ರಾರಾಜಿಸುತ್ತಿದೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತ ಬಿಜೆಪಿ ಸರ್ಕಾರದ ಅಣತಿಯಂತೆ ವರ್ತಿಸುತ್ತಿವೆ. ಇನ್ನೂ ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಇದೇ ಹಾದಿಯಲ್ಲಿ ಸಾಗಿ ಭ್ರಷ್ಟಾಚಾರದ ಕೆಸರು ಮೆತ್ತುಕೊಂಡಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿಯೇ ವಿವಿಧ ಗುಂಪುಗಳಾಗಿ ಹಂಚಿಹೋಗಿದ್ದ ಸಮಾನ ಮನಸ್ಕ ದಲಿತ ಸಂಘರ್ಷ ಸಮಿತಿಗಳ ಹತ್ತು ಬಣಗಳನ್ನ ಒಂದುಗೂಡಿಸಿ ಐಕ್ಯ ಸಮಿತಿ ರಚಿಸಿದ್ದು, ಸಂವಿಧಾನದ ಆಶಯ, ಸಾಮಾಜಿಕ ನ್ಯಾಯಕ್ಕೆ ಹತ್ತಿರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಷರತ್ತುಬದ್ದ ಬೆಂಬಲ ನೀಡಲು ನಿರ್ಧರಿಸಿದ್ದು, ಪರಿಶಿಷ್ಟರಿಗೆ ಶೇ.೨೪.೧೦ರಷ್ಟು ಅನುದಾನ, ಇಡಬ್ಲೂö್ಯಎಸ್‌ಗೆವಿರೋಧಿಸಬೇಕು. ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು. ಬ್ಲಾಕ್‌ಲಾಗ್ ಹುದ್ದೆ ಭರ್ತಿ, ಪಿಟಿಸಿಎಲ್ ಕಾಯ್ದೆಗೆ ಬಲ, ಜನಸಂಖ್ಯೆಗನುಸಾರ ಒಳಮೀಸಲು ಕೋಮುಸಾಮರಸ್ಯ ಸೇರಿ ವಿವಿಧ ಷರತ್ತುಗಳನ್ನು ಮುಂದಿಟ್ಟು ಬೆಂಬಲಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಮುರಳೀಧರ ಬೆಲ್ಲದಮಡು, ನರಸೀಯಪ್ಪಮ ಎನ್.ವೆಂಕಟೇಶ್, ಮಾವಳ್ಳಿಶಂಕರ್, ವಿನಾಗರಾಜ ಅಣ್ಣಯ್ಯ, ಇತರರಿದ್ದರು.