ಬೆಂಗಳೂರು:
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಮಹದಾಸೆ ಎಲ್ಲಾ ಪಕ್ಷ ಅಭ್ಯರ್ಥಿ ಗೂ ಇರುವುದು ಸಾಮಾನ್ಯ ಆದರೆ ಅವಕಾಶದ ಸದ್ಬಳಕೆ ಮತ್ತು ಸದುಪಯೋಗ ಮಾಡಿ ಅದೃಷ್ಠ ಕೈಹಿಡಿದರೆ ಮಾತ್ರ ವಿಜಯ ಮಾಲೆ ಈ ರಾಜಕೀಯ ತಂತ್ರದ ಭಾಗವಾಗಿ ಪಂಚರತ್ನ ಯಾತ್ರೆಯ ಮೂಲಕ ಮತದಾರರನ್ನು ತಲುಪುತ್ತಿರುವ ಹೆಚ್ಡಿ ಕುಮಾರಸ್ವಾಮಿ ರೈತರನ್ನುದ್ದೇಶಿಸಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ ಬಗ್ಗೆ, ಪಂಚರತ್ನ ರಥಯಾತ್ರೆ ಬಗ್ಗೆ ಹಾಗೂ ವಿಪಕ್ಷಗಳನ್ನು ಟೀಕೆ ಮಾಡಿ ಬರೆದಿದ್ದಾರೆ. ರಾಜ್ಯದೆಲ್ಲೆಡೆ ಈ ಪತ್ರ ಹಂಚಿ ಪ್ರಚಾರ ನಡೆಸಲು ಹೆಚ್ಡಿ ಕುಮಾರಸ್ವಾಮಿ ಪ್ಲಾನ್ ಮಾಡಿಕೊಂಡಿದ್ದಾರೆ.