ಕೊರಟಗೆರೆ
ಕೆಎಸ್ಆರ್ಪಿ ತುಕಡಿಯ ಪೊಲೀಸ್ ಕಾನ್ಸ್ಟೇಬಲ್ ಇದ್ದಕ್ಕಿದ್ದಂತೆ ಬುಧವಾರ ಮುಂಜಾನೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಕೊನೆ ಉಸಿರಲಿರುವ ಘಟನೆಯೊಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿ ಬಳಿಯ ಕೆ ಎಸ್ ಆರ್ ಪಿ ಬೆಟಾಲಿಯನ್ ನ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ಚೌಹಾಣ್ ಬಿಜಾಪುರ ಮೂಲದವರಾಗಿದ್ದು, ಕೊರಟಗೆರೆ ಕೆಎಸ್ಆರ್ಪಿ ಬೆಟಾಲಿಯನ್ನ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೃತ ಮಲ್ಲಿಕಾರ್ಜುನ್ ಚೌಹಾಣ್ ಕಳೆದ ಹತ್ತು ವರ್ಷಗಳಿಂದ ಕೆ ಎಸ್ ಆರ್ ಪಿ ಬೆಟಾಲಿಯನ್ನ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಬುಧವಾರ ಮುಂಜಾನೆ ಅನಾರೋಗ್ಯ ಕಾಣಿಸಿಕೊಂಡು ಪಿಡಿಸ್ ಮಾದರಿಯಲ್ಲಿ ಕೈ ಕಾಲು ಹೆಚ್ಚು ಪಡೆದುಕೊಳ್ಳಲು ಪ್ರಾರಂಭಿಸಿದ ವ್ಯಕ್ತಿ ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದರಾದರೂ ಚಿಕಿತ್ಸೆಫಲಕಾರಿಯಾಗಿದೆ ಅಂತಿಮವಾಗಿ ಹೃದಯಘಾತದಿಂದ ಆಸ್ಪತ್ರೆಯಲ್ಲಿ ಕೊನೆ ಉಸಿರುಳಿದಿದ್ದಾನೆ ಎನ್ನಲಾಗಿದೆ.
ಮೃತ ದೇಹವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದ್ದು ಕೆಎಸ್ಆರ್‌ಪಿ ಬೆಟಾಲಿಯನ್ ನ್ನ ಉನ್ನತ ಅಧಿಕಾರಿಗಳು ಸೇರಿದಂತೆ ಕೊರಟಗೆರೆ ಸಿಪಿಐ ಅನಿಲ್ ಪಿ ಎಸ್ ಐ ಚೇತನ್ ಗೌಡ ಸ್ಥಳದಲ್ಲಿ ಹಾಜರಿದ್ದು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.