ಹೃದಯಾಘಾತ: ಧಾರವಾಡದಲ್ಲಿ ಕೆಎಎಸ್‌ ವಿದ್ಯಾರ್ಥಿನಿ ಸಾವು…..!

ದಾವಣಗೆರೆ:

   ರಾಜ್ಯದಲ್ಲಿ ಯುವಜನತೆಯ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಧಾರವಾಡ  ಜಿಲ್ಲೆಯಲ್ಲಿ ಪದವಿ ವಿಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ದಾವಣಗೆರೆಯಲ್ಲಿ ಹೃದಯಸ್ತಂಭನದಿಂದ  22 ವರ್ಷದ ಯುವಕ ಮೃತಪಟ್ಟಿದ್ದಾನೆ. ಇನ್ನೊಂದೆಡೆಯಲ್ಲಿ, ಸರಣಿ ಹೃದಯಾಘಾತ ಸುದ್ದಿಗಳಿಂದ ಆತಂಕಗೊಂಡಿರುವ ಜನತೆ ಜಯದೇವ ಸೇರಿದಂತೆ ಹೃದಯ ಆಸ್ಪತ್ರೆಗಳಿಗೆ ಆರೋಗ್ಯ ಪರಿಶೀಲನೆಗಾಗಿ ದೌಡಾಯಿಸುತ್ತಿದ್ದಾರೆ. 

    ಧಾರವಾಡ ಪುರೋಹಿತನಗರದಲ್ಲಿರುವ ಪ್ರಭಾಕರ ಕುಸುಗೂರ ಅವರ ಮಗಳು ಜೀವಿತಾ ಕುಸುಗೂರ (26) ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಅವರು ಇತ್ತೀಚಿಗಷ್ಟೇ ಎಂಎಸ್ಸಿ ಅಗ್ರಿ ಪದವಿ ಮುಗಿಸಿ ಯುಪಿಎಸ್ಸಿ- ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸಿದ್ದರು. ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ತಲೆ ಸುತ್ತು ಬಂದು ಬಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

    ದಾವಣಗೆರೆಯ ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ (22) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಸಂಭವಿಸುವ ಹಠಾತ್ ಸಾವುಗಳನ್ನು ಇನ್ನು ಮುಂದೆ ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸಲು ಹಾಗೂ ಆಸ್ಪತ್ರೆಯಿಂದ ಹೊರಗೆ ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Recent Articles

spot_img

Related Stories

Share via
Copy link