ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಿರಬೇಕು : ಡಾ.ಶ್ರೀ ಶಿವಾನಂದ ಶಿವಾಚಾರ್ಯ

ತುಮಕೂರು:

   ಮನೆ ಚಿಕ್ಕದಾಗಿದ್ದರೂ ಮನಸ್ಸು ದೊಡ್ಡದಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಹೋರಿ ಮುದ್ದಪ್ಪ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಚಿಕ್ಕ ಗಣೇಶಮೂರ್ತಿ ದೇವಾಲಯ ಇಡೀ ಬಡಾವಣೆಯ ನಾಗರಿಕರಿಗೆ ಬೆಳಕು ನೀಡಬಲ್ಲದು. ಇಂತಹ ಸತ್ಕಾರ್ಯ ಮಾಡಿರುವ ಬಡಾವಣೆಯ ನಾಗರಿಕರು ನಿಜಕ್ಕೂ ಅಭಿನಂದನಾರ್ಹರು ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.

   ಅವರು ನಗರದ ಆರ್.ಟಿ.ನಗರದ 2ನೇ ಕ್ರಾಸ್‌ನ ಹೋರಿ ಮುದ್ದಪ್ಪ ಕಾಂಪೌAಡ್‌ನಲ್ಲಿ ಹಮ್ಮಿಕೊಂಡಿದ್ದ ಓಂ ಶ್ರೀ ಸಿದ್ಧಿ ಗಣಪತಿ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧಭಾವಿಲ್ಲದೆ ಎಲ್ಲರೂ ಒಂದೆಡೆ ಸೇರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿರುವುದು ಸಂತಸದ ವಿಷಯ. ಹಣವಿದ್ದರೂ ಇಂತಹ ಕಾರ್ಯ ಮಾಡಲಿಕ್ಕೆ ಸಾಧ್ಯವಿಲ್ಲ. ಒಳ್ಳೆಯ ಕಾರ್ಯ ಮಾಡಲಿಕ್ಕೆ ಒಳ್ಳೆಯ ಮನಸ್ಸಿರ ಬೇಕು ಆಗಲೇ ನಾವುಗಳು ಅಂದುಕೊಂಡಹ ಕಾರ್ಯ ಸಿದ್ಧಿಸುತ್ತದೆ ಎಂದು ನುಡಿದರು.

    ಬೆಳ್ಳಾವಿ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ ಗಣಪತಿ ಹಾಗೂ ಷಣ್ಮುಖ ಇಬ್ಬರನ್ನೂ ಲೋಕ ಸುತ್ತಲು ತಿಳಿಸಿ ಯಾರು ಬೇಗ ಬಂದು ನನ್ನ ಸನ್ನಿಧಿಯನ್ನು ಸೇರುತ್ತಾರೋ ಅವರಿಗೆ ಪ್ರಥಮ ಪೂಜೆ ಎಂದು ತಿಳಿಸಿದಾಗ ಗಣಪತಿ ಲೋಕವನ್ನು ಸುತ್ತಲು ಹೋಗದೆ ತನ್ನ ಬಳಿಯಲ್ಲೇ ಇದ್ದ ತಂದೆ ತಾಯಿ ಇಬ್ಬರನ್ನು ಮೂರು ಪ್ರದಕ್ಷಿಣೆ ಹಾಕಿದಾಗ ಮಗನ ಈ ಸಾಧನೆಯನ್ನು ಕಂಡ ಪರಶಿವನು ಗಣೇಶನಿಗೆ ಅಘ್ರಪೂಜೆ ಎಂಬುದಾಗಿ ಘೋಷಿಸಿದ ಪ್ರಸಂಗದ ಕಥೆಯ ಸಾರಾಂಶವನ್ನು ಸಭಿಕರಿಗೆ ಮನಮುಟ್ಟುವಂತೆ ತಿಳಿಸಿದರು.

   ಬಿಜೆಪಿ ಮುಖಂಡ ಅರಕೆರೆ ರವೀಶ್ ಮಾತನಾಡಿ ನಮ್ಮ ತಾತ ಮುತ್ತಾನ ಕಾಲದಿಂದಲೂ ಹೋರಿಗಳನ್ನು ಸಾಕುವ ರೂಢಿಯಿತ್ತು. ಅವರುಗಳು ಸಾಕುತ್ತಿದ್ದ ಹೋರಿಗಳನ್ನು ಮೈಸೂರಿನ ಮಹಾರಾಜರು ಪ್ರಶಂಶಿಸಿದ್ದರು. ಇಂದು ನಾವುಗಳ ಅವರುಗಳು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿದ್ದೇವೆ. ನಾನು ಹುಟ್ಟಿ ಬೆಳೆದ ಸ್ಥಳದಲ್ಲಿ ಈಗ ಸಿದ್ಧಿ ಗಣಪತಿ ದೇವಾಲಯ ಪ್ರತಿಷ್ಠಾಪಿಸಿರುವುದು ನನಗೆ ತುಂಬ ಸಂತಸವನ್ನುಂಟು ಮಾಡಿದೆ. ದೇವರ ಆಶೀರ್ವಾದ ಬಡಾವಣೆಯ ಎಲ್ಲ ನಾಗರಿಕರಿಗೂ ಇರಲಿ ಎಂದರು

   ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ ಇದೊಂದು ಜಾತ್ಯಾತೀತ ಸಮಾರಂಭ. ಏಕೆಂದರೆ ಇಲ್ಲಿ ಎಲ್ಲ ಮತಬಾಂಧವರೂ ಸೇರಿದ್ದಾರೆ. ಇಂತಹ ಒಳ್ಳೆಯ ಕಾರ್ಯಕ್ರಮ ನೋಡಿ ನನಗೆ ಆನಂದವನ್ನುಂಟು ಮಾಡಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

   ಪಾಲಿಕೆ ಸದಸ್ಯರಾದ ಇನಾಯತ್ ಉಲ್ಲಾಖಾನ್ ಮಾತನಾಡಿ ಯಾವ ವಾರ್ಡ್ಗಳಲ್ಲೂ ಇಂತಹ ಉತ್ತಮ ಕಾರ್ಯ ನಡೆದದ್ದು ಕಂಡುಬಂದಿಲ್ಲ. ಆದರೆ ಈ ಬಡಾವಣೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿರುವುದು ನಿಜಕ್ಕೂ ಸಂತಸವನ್ನುಂಟು ಮಾಡಿದೆ. ದೇವಾಲಯವನ್ನು ಸುಂದರವಾಗಿಟ್ಟು ಕೊಳ್ಳಲು ನಾವು ನೀವುಗಳೆಲ್ಲರೂ ಶ್ರಮಿಸೋಣ. ದಿನಂಪ್ರತಿ ಸ್ವಚ್ಛಗೊಳಿಸಿ ರಂಗೋಲಿ ಹಾಕಬೇಕು. ಇಂತಹ ಕಾರ್ಯವನ್ನು ನಾವುಗಳೆಲ್ಲರೂ ಸೇರಿ ಮಾಡೋಣ ಎಂದರು.

     ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಮೇಯರ್ ಪ್ರಭಾವತಿ ಸುದೀಶ್ವರ್, ಅಟ್ಟಿಕಾ ಗೋಲ್ಡ್ನ ಬೊಮ್ಮನಹಳ್ಳಿ ಬಾಬು, ಸ್ಪೂರ್ತಿ ಡೆವಲರ‍್ಸ್ನ ಎಸ್.ಪಿ.ಚಿದನಂದ್, ಉಪ ಮೇಯರ ಟಿ.ಕೆ.ನರಸಿಂಹಮೂರ್ತಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮನೋಹರಗೌಡ, ಆರ್.ಎಲ್.ರಮೇಶ್‌ಬಾಬು, ಚಿ.ನೀ. ಪುರುಷೋತ್ತಮ್, ಮಾಜಿ ಪಾಲಿಕೆ ಸದಸ್ಯ ಟಿ.ಎಚ್.ಬಾಲಕೃಷ್ಣ, ಎನ್.ಮಹೇಶ್, ಪ್ರೆಸ್ ರಾಜಣ್ಣ, ಹೋರಿ ಮುದ್ದಪ್ಪ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷ ಟಿ.ಆರ್.ಬಸವರಾಜು, ಕಾರ್ಯದರ್ಶಿ ರೇಣುಕಾಪ್ರಸಾದ್, ಸಹ ಕಾರ್ಯದರ್ಶಿ ಟಿ.ಎಸ್.ನಾಗರಾಜು, ಸಂಘಟನಾ ಕಾರ್ಯದರ್ಶಿ ಟಿ.ಎಂ.ಮಹೇಶ್, ಖಜಾಂಚಿ ಟಿ.ಆರ್.ಶಿವಾನಂದ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಂದ ಭಕ್ತಾದಿಗವಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link