ಬೆಂಗಳೂರು:
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೆಲವು ನಟ, ನಟಿಯರು ಸಿಕ್ಕಿ ಬಿದಿದ್ದರು.
ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಸ್ಯಾಂಪಲ್ ಪಡೆಯಲಾಗಿತ್ತು. ಈ ಕುರಿತಾದ ವೈದ್ಯಕೀಯ ರಿಪೋರ್ಟ್ ಬಂದಿದೆ. ಪಾರ್ಟಿಗೆ ಬಂದೆ ಇಲ್ಲ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ನಟಿ ರಕ್ತದ ಪರೀಕ್ಷೆಯಲ್ಲೂ ಡ್ರಗ್ಸ್ ಪತ್ತೆಯಾಗಿದೆ.
ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಆಯೋಜನೆ ಮಾಡಿದ್ದ ಬರ್ತಡೇ ಪಾರ್ಟಿಗೆ ‘ಸನ್ ಸೆಟ್ ಟು ಸನ್ ರೈಸ್’ ಥೀಮ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿಯಾದರೂ ಸುಮಾರು 100ಕ್ಕೂ ಅಧಿಕ ಜನರು ಜೋರಾಗಿ ಡಿಜೆ ಹಾಕಿಕೊಂಡು ಫಾರ್ಮ್‌ಹೌಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಸಿದ ಸಿಸಿಬಿ ಪೊಲೀಸರು ರಾತ್ರೋ ರಾತ್ರಿ ಫಾರ್ಮ್‌ಹೌಸ್ ಮೇಲೆ ದಾಳಿ ಮಾಡಿದ್ದರು. ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಗಾಂಜಾ ಪಾರ್ಟಿ ಇದಾಗಿತ್ತು. ಮಾದಕ ವಸ್ತುಗಳಾದ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ.
ರೇವ್‌ಪಾರ್ಟಿಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿ ವಿವಿಧೆಡೆಯಿಂದ ಸೆಲೆಬ್ರಿಟಿಗಳು, ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು, ಟೆಕ್ಕಿಗಳು ಸೇರಿದಂತೆ ಎಲ್ಲರೂ ಆಗಮಿಸಿದ್ದರು. ವೈದ್ಯಕೀಯ ಸಿಬ್ಬಂದಿ ಫಾರ್ಮ್‌ಹೌದ್ ಒಳಗೆ ತೆರಳಿ ರಕ್ತದ ಮಾದರಿ ಸಂಗ್ರಹ ಮಾಡಿಕೊಂಡು ಬೆಂಗಳೂರು ಸಿಸಿಬಿ ಪೊಲೀಸರು 101 ಜನರನ್ನು ಸಂಜೆ ವೇಳೆಗೆ ರಿಲೀಸ್ ಮಾಡಿ ಕಳುಹಿಸಿದ್ದರು.
ತೆಲುಗು ನಟಿ ಹೇಮಾ ಬೆಂಗಳೂರು ರೇವ್ ಪಾರ್ಟಿಗೆ ಬಂದು ಡ್ರಗ್ಸ್ ಸೇವನೆ ಮಾಡಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದ್ದಳು. ಆದರೆ, ಇದು ಡ್ರಗ್ಸ್ ಪಾರ್ಟಿ ಎಂದು ಖಚಿತಪಡಿಸಿಕೊಂಡ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುತ್ತಿದ್ದಂತೆಯೇ, ತಾನು ರೇವ್ ಪಾರ್ಟಿಯಲ್ಲಿಲ್ಲ ಎಂದು ವಿಡಿಯೋ ಮಾಡಿ ಪೊಲೀಸರನ್ನು ಹಾಗೂ ಮಾಧ್ಯಮದವರನ್ನು ಯಾಮಾರಿಸಿದ್ದಳು. ಆದರೆ, ಪೊಲೀಸರು ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಈಗ ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರುವುದು ಕನ್ಫರ್ಮ್ ಆಗಿದೆ. ನಾನು ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲವೆಂದು ಪೊಲೀಸರು ಹಾಗೂ ಮಾಧ್ಯಮಗಳನ್ನು ಯಾಮಾರಿಸಿದ್ದ ತೆಲುಗು ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಮೂಲಕ ಹೇಮಾಳ ರಂಗಿನಾಟ ಬಟಾ ಬಯಲಾಗಿದೆ.