ತುಮಕೂರು :
ರಾಜ್ಯದ ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹರಿದು ಬಂದ ನೀರು ಗುರುವಾರ ಮಧ್ಯರಾತ್ರಿ ವೇಳೆಗೆ ತುಮಕೂರಿನ ಬುಗುಡನಹಳ್ಳಿಗೆ ತಲುಪಿದೆ. ಈ ಮೂಲಕ ತುಮಕೂರು ನಗರ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ.
ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಯಡಿ ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹೇಮಾವತಿ ಕಾಲುವೆಗೆ ನೀರನ್ನು ಹರಿಸಲಾಗಿತ್ತು.
ನೀರು ಹರಿಸಿದ ಕೆಲವೇ ದಿನಗಳಲ್ಲಿ ಹೇಮಾವತಿ ನೀರು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಗುರುವಾರ ಮಧ್ಯರಾತ್ರಿ ಬಂದು ತಲುಪಿದೆ. ಈ ಮೂಲಕ ತುಮಕೂರು ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ. ಇನ್ನು ಪ್ರಸ್ತುತ ನೀರಿನ ಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ಸ್‌ಗೂ ಅಧಿಕವಾಗಿದೆ. ಇನ್ನು ನಾಲೆಯ ಒಳ ಹರಿವಿನ ಪ್ರಮಾಣ 500 ಕ್ಯೂಸೆಕ್ಸ್ ಇದೆ ಎಂದು ತಿಳಿದುಬಂದಿದೆ.