ಹೇಮೆ ನೀರು ಚರಂಡಿ ಪಾಲು

ತುಮಕೂರು:

ಪಾಲಿಕೆ, ನಗರ ನೀರು ಸರಬರಾಜು ಮಂಡಳಿ ನಿರ್ಲಕ್ಷ್ಯ

ನಗರಕ್ಕೆ ಹರಿಯಬೇಕಾದ ಹೇಮಾವತಿಯ ನೀರು ತ್ಯಾಜ್ಯನೀರಿನ ಚರಂಡಿಗೆ ಹರಿಯುತ್ತಿದ್ದು, ಈ ಬಗ್ಗೆ ಪಾಲಿಕೆಯವರಾಗಲೀ ನಗರ ನೀರು ಸರಬರಾಜು ಮಂಡಳಿಯವರಾಗಲೀ ಗಮನಹರಿಸದಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಗುಬ್ಬಿಗೇಟ್ ಸಮೀಪ ಬಂಡಿ ಮನೆ ಕಲ್ಯಾಣಮಂಟಪದ ಎದುರು ಈ ಘಟನೆ ನಡೆಯುತ್ತಿದ್ದು, . ಹೇಮಾವತಿಯ ನೀರಿನ ಪೈಪ್ ಒಡೆದು ಸುಮಾರು ದಿನಗಳೇ ಕಳೆದಿವೆ ಅಧಿಕಾರಿಗಳು ನೋಡಿದರೂ ಸಹ ನೋಡಿಲ್ಲದಂತೆ ಮೈಮರೆತು ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹೇಮಾವತಿಯ ನೀರಿನ ಪೈಪ್ ಒಡೆದು ಹತ್ತಿರದ ಟಿಸಿಗೆ ನೀರು ಚಿಮ್ಮುತ್ತಿದೆ. ಇದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಬಹುದು ಎಂದು ತಿಳಿಸಿದ್ದೇವೆ. ಆದರೂ ಸಹ ಅಧಿಕಾರಿಗಳು ಗಮನಹರಿಸದೇ ಹೋಗಿದ್ದಾರೆ. ಈ ಸಮಸ್ಯೆ ದಸರಾ ಹಬ್ಬದ ಮೊದಲೇ ಈ ಎದುರಾಗಿತ್ತು. ಅಧಿಕಾರಿಗಳು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿ.

ಇರುವ ಜಾಗದಲ್ಲಿ ಜೆಸಿಬಿಯಿಂದ ಗುಂಡಿ ಹೊಡೆದು ಹಾಗೆಯೇ ಬಿಟ್ಟಿದ್ದಾರೆ. ಈ ಜಾಗದಲ್ಲಿ ಪಾಚಿ ಕಟ್ಟಿ ಗಿಡಗಂಟೆಗಳು ಬೆಳೆದು ನೀರಿನ  ಜೊತೆಗೆ ಇದು ಸಹ ನಗರಕ್ಕೆ ಹೋಗುತ್ತಿದೆ. ಈ ನೀರನ್ನು ನಗರದ ಜನರು ಪ್ರತಿದಿನ ಸೇವಿಸುದ್ದಾರೆ. ಇದರಿಂದ ಸಾಕಷ್ಟು ರೋಗರುಜಿನಗಳು ಸಂಭವಿಸಬಹುದು.

ಪಾಲಿಕೆಯ ಸದಸ್ಯರು ಇದರತ್ತ ಬೇಗನೆ ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ..
ಗುಂಡಿಬಿದ್ದು ಪಾಚಿ ಕಟ್ಟಿ ಹುಳಬಿದ್ದಿದೆ. ಸ್ಥಳಿಯ ಕಾವಲುಗಾರರಾದ ಲಕ್ಷ್ಮೀನರಸಿಂಹಯ್ಯ ಅವರು ಮಾತನಾಡಿ, ಗುಬ್ಬಿ ಮುಖ್ಯ ರಸ್ತೆಯ ಪಕ್ಕದಲ್ಲಿ ಹೇಮಾವತಿ ನಾಲೆಯ ನೀರು ನಗರಕ್ಕೆ ಹೋಗುತ್ತಿದೆ.

ಬಂಡಿಮನೆ ಕಲ್ಯಾಣ ಮಂಟಪದ ಎದುರು ಇದರ ಪೈಪ್ ಲೈನ್ ಹೊಡೆದು ಸ್ಥಳದಲ್ಲಿ ಗುಂಡಿ ಬಿದ್ದು ಪಾಚಿ ಕಟ್ಟಿ ಹುಳ ಬಿದ್ದಿದೆ. ಇದೇ ನೀರನ್ನು ನಗರದ ಜನರು ಕುಡಿಯುತ್ತಿದ್ದಾರೆ. ನೀರು ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಚಿಮ್ಮುತ್ತಿತ್ತು. ಇದರಿಂದ ಕೆಇಬಿಗೆ ಲೈನ್ ಗೆ ತೊಂದರೆಯಾಗುತ್ತದೆ ಎಂದು ಎಸ್‍ಎಂಎಸ್ ಸರ್ವಿಸ್ ಸ್ಟೇಷನ್ ಅವರು ಅದರ ಮೇಲೆ ಅಲಗೆಯನ್ನು ಹಾಕಿ ಮುಚ್ಚಿದ್ದಾರೆ.

ಈ ಕುಡಿಯುವ ನೀರು ಈಗ ನಗರದ ತ್ಯಾಜ್ಯ ನೀರಿನ ಜೊತೆಗೆ ಚರಂಡಿಗೆ ಹೋಗುತ್ತಿದೆ. ಅಧಿಕಾರಿಗಳೂ ಆದಷ್ಟು ಬೇಗನೆ ಹೊಡೆದಿರುವ ಪೈಪ್ ಲೈನ್‍ಅನ್ನು ಸರಿಪಡಿಸಿ ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನು ಹರಿಸಬೇಕೆಂದು ನಗರ ಪಾಲಿಕೆಗೆ ಒತ್ತಾಯಿಸಿದರು.


ಕುಡಿಯುವ ನೀರಲ್ಲಿ ಪಾಚಿ ಸೇರಿದರೆ ಹೇಗೆ?

ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಇಂತಹ ಕುಡಿಯುವ ನೀರಿನಲ್ಲಿ ಪಾಚಿಯು ಸೇರಿದರೆ ಜನರ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗನೆ ಇದರತ್ತ ಗಮನ ಹರಿಸಿ ಈ ಪೈಪ್ ಲೈನ್‍ಅನ್ನು ಸರಿಪಡಿಸಬೇಕೆಂದು ಜನರ ಆಗ್ರಹವಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link