ನವರಾತ್ರಿ ಹಬ್ಬಕ್ಕೆ ಹೋಗುವವರಿಗಾಗಿ ಇಲ್ಲಿದೆ ಮಹತ್ವದ ಅಪ್‌ ಡೇಟ್‌

ಹುಬ್ಬಳ್ಳಿ

     ನವರಾತ್ರಿ  ಹಬ್ಬದ ಸಡಗರ ಮನೆ ಮಾಡಿದೆ. ನಾಡಹಬ್ಬ ದಸರಾ ಅನ್ನು ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮೈಸೂರು ದಸರಾ ನೋಡಲು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಪ್ರಯಾಣ ಮಾಡುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ.

  1. ರೈಲು ಸಂಖ್ಯೆ 07305: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅ.10 ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 11:30ಕ್ಕೆ ಹೊರಟು ಅದೇ ದಿನ ರಾತ್ರಿ 7:40ಕ್ಕೆ ಯಶವಂತಪುರ ತಲುಪಲಿದೆ.
  2. ರೈಲು ಸಂಖ್ಯೆ 07306: ಯಶವಂತಪುರ-ಬೆಳಗಾವಿ ವಿಶೇಷ ರೈಲು ಅ.10 ರಂದು ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 8:55ಕ್ಕೆ ಹೊರಟು ಮರುದಿನ ಬೆಳಗ್ಗೆ 8:15ಕ್ಕೆ ಬೆಳಗಾವಿ ತಲುಪಲಿದೆ.
  3. ರೈಲು ಸಂಖ್ಯೆ 07307: ಬೆಳಗಾವಿ-ಮೈಸೂರು ವಿಶೇಷ ಎಕ್ಸಪ್ರೆಸ್​​​ ರೈಲು ಅ.11 ರಂದು ಬೆಳಗಾವಿಯಿಂದ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಗ್ಗೆ 6:25ಕ್ಕೆ ಮೈಸೂರು ತಲುಪಲಿದೆ.
  4. ರೈಲು ಸಂಖ್ಯೆ 07308: ಮೈಸೂರು-ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ಎಕ್ಸಪ್ರೆಸ್​ ರೈಲು ಅ.12 ರಂದು ರಾತ್ರಿ 10:30ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಗ್ಗೆ 7:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
  5. ರೈಲು ಸಂಖ್ಯೆ 06279: ಮೈಸೂರು-ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲು ಅ.9, 10, 11, 12 ಮತ್ತು 13 ರಂದು ಮೈಸೂರಿನಿಂದ ರಾತ್ರಿ 11:15ಕ್ಕೆ ಹೊರಟು ತಡರಾತ್ರಿ 2:30ಕ್ಕೆ ಕೆಎಸ್​​ಆರ್​ ಬೆಂಗಳೂರು ತಲುಪಲಿದೆ.
  6. ರೈಲು ಸಂಖ್ಯೆ 06280: ಕೆಎಸ್​ಆರ್​ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 10, 11, 12, 13 ಮತ್ತು 14 ರಂದು ಕೆಎಸ್​ಆರ್​ ಬೆಂಗಳೂರಿನಿಂದ ನಸುಕಿನ ಜಾವ 3 ಗಂಟೆಗೆ ಹೊರಟು ಅದೇ ದಿನ ಬೆಳಗ್ಗೆ 6:15ಕ್ಕೆ ಮೈಸೂರು ತಲುಪಲಿದೆ.
  7. ರೈಲು ಸಂಖ್ಯೆ 06281: ಮೈಸೂರು-ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ಅ.9, 10, 11, 12 ಮತ್ತು 13 ರಂದು ಮೈಸೂರಿನಿಂದ ರಾತ್ರಿ 11:30ಕ್ಕೆ ಹೊರಟು ಚಾಮರಾಜನಗರವನ್ನು ಮಧ್ಯರಾತ್ರಿ 1:30ಕ್ಕೆ ತಲುಪಲಿದೆ.
  8. ರೈಲು ಸಂಖ್ಯೆ 06282: ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 10, 11, 12, 13 ಮತ್ತು 14 ರಂದು ಚಾಮರಾಜನಗರದಿಂದ ನಸುಕಿನ ಜಾವ 4:15ಕ್ಕೆ ಹೊರಟು ಅದೇ ದಿನ ಬೆಳಗ್ಗೆ 6 ಗಂಟೆಗೆ ಮೈಸೂರು ತಲುಪಲಿದೆ.
  9. ರೈಲು ಸಂಖ್ಯೆ 06283: ಮೈಸೂರು-ಚಾಮರಾಜನಗರ ವಿಶೇಷ ರೈಲು ಅ.12 ರಂದು ಮೈಸೂರಿನಿಂದ ರಾತ್ರಿ 9:45ಕ್ಕೆ ಮೈಸೂರಿನಿಂದ ಹೊರಟು ಮಧ್ಯರಾತ್ರಿ 12:40ಕ್ಕೆ ಚಾಮರಾಜನಗರ ತಲುಪಲಿದೆ.
  10. ರೈಲು ಸಂಖ್ಯೆ 06284: ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ.13 ರಂದು ಮಧ್ಯರಾತ್ರಿ 1:50ಕ್ಕೆ ಚಾಮರಾಜನಗರದಿಂದ ಹೊರಟು ಅದೇ ದಿನ ನಸುಕಿನ ಜಾವ 3:50ಕ್ಕೆ ಮೈಸೂರು ತಲುಪಲಿದೆ.
  11. ರೈಲು ಸಂಖ್ಯೆ 06285: ಕೆಎಸ್‌ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 9, 10, 11, 12 ಮತ್ತು 13, 2024 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12:15 ಗಂಟೆಗೆ ಹೊರಟು, ಅದೇ ದಿನ ಸಂಜೆ 3:20ಕ್ಕೆ ಮೈಸೂರು ತಲುಪಲಿದೆ.
  12. ರೈಲು ಸಂಖ್ಯೆ 06286: ಮೈಸೂರು-ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ಅ. 9, 10, 11, 12 ಮತ್ತು 13, 2024 ರಂದು ಮೈಸೂರಿನಿಂದ 3:30ಕ್ಕೆ ಹೊರಟು ಅದೇ ದಿನ ರಾತ್ರಿ 7 ಗಂಟೆಗೆ ಮೈಸೂರು ತಲುಪಲಿದೆ.

Recent Articles

spot_img

Related Stories

Share via
Copy link