‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಹೈಕೋರ್ಟ್ ತಡೆ….!

ಬೆಂಗಳೂರು:

    ನಟ ಕಮಲ್‌ ಹಾಸನ್‌ ನಟಿಸಿರುವ ಥಗ್‌ ಲೈಫ್‌ ಸಿನಿಮಾವನ್ನು ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಹೈಕೋರ್ಟ್ ತಡೆ ನಿಡಿದೆ, ಅಲ್ಲದೆ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ. ಕಮಲ್ ಹಾಸನ್ ಅವರು ಕನ್ನಡಕ್ಕೆ ಮಾಡಿರುವ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

    ಜೂನ್10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ಒಂದು ವಾರದೊಳಗೆ ಇದನ್ನು ಇತ್ಯರ್ಥ ಪಡಿಸುವಂತೆ ಹೇಳಿದೆ. ವಾಣಿಜ್ಯೋದ್ಯಮ ಮಂಡಳಿ ಕ್ಷಮೆ ಕೋರಲು ಹೇಳಿತ್ತು. ಇದಕ್ಕೆ ಕಮಲ್‌ ಹಾಸನ್‌ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ. ಇದರಲ್ಲಿ ಕ್ಷಮೆ ವಿಚಾರ ಪ್ರಸ್ತಾಪವಾಗಿಲ್ಲ. ಈ ಕುರಿತು ಸಮಾಲೋಚನೆ ನಡೆಸಲು ನಿರ್ಧರಿಸಿರುವುದರಿಂದ ವಿಚಾರಣೆ ಮುಂದೂಡುವಂತೆ ಧ್ಯಾನ್‌ ಚಿನ್ನಪ್ಪ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಲಾಗಿದೆ.

Recent Articles

spot_img

Related Stories

Share via
Copy link