ಶಿವಮೊಗ್ಗ/ಹುಬ್ಬಳ್ಳಿ:
ವಿದ್ಯಾರ್ಥಿಗಳ ಪ್ರಮುಖ ಜೀವನ ಘಟ್ಟಗಳಲ್ಲಿ ಒಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಾಗಿದೆ. ರಾಜ್ಯಾಧ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ಆರಂಭಗೊಂಡಿದ್ದು, ಈ ಪರೀಕ್ಷೆಯಲ್ಲಿಯೂ ಹಿಜಾಬ್ ಸಂಘರ್ಷ ಮುಂದುವರೆದಿದೆ.
ಅನೇಕ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿಯೇ ಬಂದಂತ ವಿದ್ಯಾರ್ಥಿಗಳಿಗೆ, ಸಮವಸ್ತ್ರ ಧರಿಸಿ ಬಂದ್ರೇ ಮಾತ್ರ ಎಂಟ್ರಿ, ಇಲ್ಲವಾದಲ್ಲಿ ಇಲ್ಲವೆಂದು ಸರ್ಕಾರದ ಆದೇಶವನ್ನು ತಿಳಿಹೇಳಲಾಗಿದೆ. ಆದ್ರೇ, ಶಿಕ್ಷಕರ ಮಾತು ಕೇಳದೆ ಮನೆಗೆ ವಿದ್ಯಾರ್ಥಿಗಳು ಮರಳಿ ಹೋಗಿರುವಂತ ಘಟನೆ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಟ್ರೈಲರ್
ಇಂದಿನಿಂದ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ಆರಂಭಗೊಂಡಿದೆ. ವಿದ್ಯಾರ್ಥಿಗಳ ಪ್ರಮುಖ ಜೀವನದ ಘಟ್ಟವೆಂದೇ ಕರೆಯಲಾಗುವಂತ ಈ ಪರೀಕ್ಷೆ ವೇಳೆಯಲ್ಲಿ ಸಮವಸ್ತ್ರ ಧರಿಸಿ ಬರುವಂತೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಆದೇಶದಲ್ಲಿ ಸೂಚಿಸಿತ್ತು. ಜೊತೆಗೆ ಕರ್ನಾಟಕ ಹೈಕೋರ್ಟ್ ತೀರ್ಪಿನ ನಿಯಮವನ್ನು ಪಾಲಿಸುವಂತೆಯೂ ಸೂಚಿಸಿತ್ತು.
ಆದ್ರೇ.. ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎನ್ನುವಂತೆ ಶಿವಮೊಗ್ಗ ನಗರದ ಕಸ್ತೂರಿಬಾ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಂತ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು, ಹಿಜಾಬ್ ಧರಿಸಿಯೇ ಆಗಮಿಸಿದರು. ಆ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರ ಮೇಲ್ವಿಚಾರಕರು, ತರಗತಿಗೆ ಅವಕಾಶವಿಲ್ಲ. ಸಮವಸ್ತ್ರ ಧರಿಸಿ ಬಂದ್ರೇ ಮಾತ್ರವೇ ಅನುಮತಿ ಎಂಬುದಾಗಿ ಸೂಚಿಸಿದರು. ಹೀಗಾಗಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿ ಮನೆಗೆ ತೆರಳುವಂತಾಗಿತ್ತು. ಆದ್ರೇ.. ಆ ವಿದ್ಯಾರ್ಥಿನಿಯನ್ನು ಮತ್ತೆ ಪೋಷಕರು ಮರಳಿ ಪರೀಕ್ಷೆಗೆ ಕರೆತಂದ ಘಟನೆಗೂ ಸಾಕ್ಷಿಯಾಯಿತು.
ಈ ಇಬ್ಬರಿಂದ ಪಂದ್ಯ ಸೋತೆವು; 205 ರನ್ ಗಳಿಸಿಯೂ ಪಂಜಾಬ್ ವಿರುದ್ಧ ಸೋತಿದ್ದೇಕೆ ಎಂಬುದನ್ನು ಬಿಚ್ಚಿಟ್ಟ ಫಾಫ್
ಇನ್ನೂ ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲೂ ಇಂತದ್ದೇ ಘಟನೆ ನಡೆಯಿತು. ಆಗ ಮನೆಗೆ ತೆರಳಿದಂತ ವಿದ್ಯಾರ್ಥಿನಿಯನ್ನು ಮರಳಿ ಪೋಷಕರು, ಹಿಜಾಬ್ ತೆಗೆಸಿ, ಪರೀಕ್ಷೆ ಬರೆಯುವಂತೆ ಬಿಟ್ಟು ಹೋದದ್ದಾಗಿಯೂ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ