ಎನ್‍ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ

ತುಮಕೂರು:


    ತಪ್ಪು ಕೀ ಉತ್ತರ ಪ್ರಕಟಿಸಿದ ಎನ್‍ಟಿಎ : ಆತಂಕದಲ್ಲಿ ಪರೀಕ್ಷಾರ್ಥಿಗಳು

ಕನ್ನಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ) ಗೊಂದಲದ ಗೂಡಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಕಾಣಿಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ನಂತರದಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮರು ಪರೀಕ್ಷೆ ನಡೆಸುವುದಾಗಿಯೂ ಹೇಳಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ಕೀ ಉತ್ತರಗಳು ಪರೀಕ್ಷೆ ಬರೆದವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

2021 ರ ಡಿಸೆಂಬರ್ 26 ರಂದು ಆನ್‍ಲೈನ್‍ನಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ (100 ಅಂಕಗಳು) ಸರಿಯಾಗಿತ್ತು. ಆದರೆ ಕನ್ನಡ ಪ್ರಶ್ನೆಪತ್ರಿಕೆ (200 ಅಂಕ) ಗೊಂದಲವನ್ನು ಉಂಟುಮಾಡಿತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು ನೂರು ಪ್ರಶ್ನೆಗಳು ಇರುತ್ತವೆ. ತಾಂತ್ರಿಕ ದೋಷದಿಂದಾಗಿ ಮೊದಲ ಹತ್ತು ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ ಪ್ರಶ್ನೆಗಳೆಲ್ಲ ಹಿಂದಿ ಭಾಷೆಯದ್ದಾಗಿದ್ದವು. ಹೀಗಾಗಿ ಪರೀಕ್ಷಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು.

ಎನ್‍ಟಿಎ ವಿರುದ್ಧ ದೂರುಗಳ ಸರಮಾಲೆ :

ಪರೀಕ್ಷಾ ಅಭ್ಯರ್ಥಿಗಳ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹೊಸ ನೋಟಿಫಿಕೇಷನ್ ಹೊರಡಿಸಿತ್ತು. ಮರು ಪರೀಕ್ಷೆ ನಡೆಸುವುದಾಗಿ ಅಂದು ಸಂಜೆಯೇ ಸ್ಪಷ್ಟನೆ ನೀಡಿತ್ತು. ತಾಂತ್ರಿಕ ದೋಷದಿಂದಾಗಿ ಯುಜಿಸಿ-ಎನ್‍ಇಟಿ ಕನ್ನಡ ಪರೀಕ್ಷೆಯಲ್ಲಿ ತೊಂದರೆಯಾಗಿದ್ದು, ಶೀಘ್ರದಲ್ಲೇ ಮರುಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಎನ್‍ಟಿಎ ಹೇಳಿತ್ತು.

ತಾಂತ್ರಿಕ ದೋಷದ ನಡುವೆಯೆ ಪರೀಕ್ಷೆ ಬರೆದ ಆಕಾಂಕ್ಷಿಗಳ ಸಂಬಂಧ ಯಾವುದೇ ಸ್ಪಷ್ಟನೆ ಇರಲಿಲ್ಲ. ಎಲ್ಲರಿಗೂ ಮತ್ತೆ ಪರೀಕ್ಷೆ ನಡೆಸುವುದು ಅಗತ್ಯ ಎಂದು ಕನ್ನಡ ಪರೀಕ್ಷಾರ್ಥಿಗಳು ಆಗ್ರಹಿಸಿದ್ದರು. ಈ ನಡುವೆಯೇ ಕೀ ಉತ್ತರ ಬಿಡುಗಡೆಗೊಳಿಸಲಾಗಿದೆ. ಪರೀಕ್ಷಾ ಬರೆದ ವಿದ್ಯಾರ್ಥಿಗಳು ತಮ್ಮ ಕೀ ಉತ್ತರಗಳನ್ನು ನೋಡಿ ಆತಂಕಕ್ಕೊಳಗಾಗಿದ್ದಾರೆ.

ನೂರು ಪ್ರಶ್ನೆಗಳಲ್ಲಿ ಸುಮಾರು 30 ರಿಂದ 60 ಪ್ರಶ್ನೆಗಳನ್ನು ಅಟೆಂಪ್ಟ್ ಮಾಡಿಯೇ ಇಲ್ಲ ಎಂದು ಕೀ ಉತ್ತರ ತೋರಿಸುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಈ ಕುರಿತು ಅನೇಕ ಪರೀಕ್ಷಾರ್ಥಿಗಳು ಆತಂಕವನ್ನು ತೋಡಿಕೊಂಡು ತಮ್ಮ ಭವಿಷ್ಯದ ಅನಿಶ್ಚಿತತೆಯನ್ನು ವ್ಯಕ್ತಪಡಿಸಿದ್ದಾರೆ.

ಅರ್ಧಕ್ಕರ್ಧ ತಪ್ಪು ಉತ್ತರಗಳು :

ಪರೀಕ್ಷಾರ್ಥಿ ಹನುಮೇಗೌಡ ಮಾತನಾಡಿ, ನನ್ನ ಕೀ ಉತ್ತರದಲ್ಲಿ ಶೇ.60 ರಷ್ಟು ಪ್ರಶ್ನೆಗಳು ಟಿoಣ ಚಿಣಣemಠಿಣ ಎಂದು ಬಂದಿದೆ. ಪ್ರಶ್ನೆ ಪತ್ರಿಕೆಯೂ ಸುಲಭವಾಗಿತ್ತು. ಹೀಗಾಗಿ ಈ ಭಾರಿ ಎನ್‍ಇಟಿ ಪಾಸ್ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಕಾಯುತ್ತಿದ್ದೆವು. ಕೆಲವರಿಗೆ ಮೊದಲ ಪ್ರಶ್ನೆ ಪತ್ರಿಕೆ ಹೀಗೆ ಸಮಸ್ಯೆಯಾಗಿದೆ. ನನಗೆ ಎರಡನೆ ಪ್ರಶ್ನೆಪತ್ರಿಕೆ ಸಮಸ್ಯೆಯಾಗಿದೆ.

ಒಂದೋ ಎರಡೋ ಪ್ರಶ್ನೆಗಳು  ಎಂದರೆ ಪರವಾಗಿಲ್ಲ. ಆದರೆ ಶೇ.60 ಪ್ರಶ್ನೆಗಳು ಹೀಗೆಯೇ ಆದರೆ ನಾನು ಕೇವಲ ಶೇ. 40 ರಷ್ಟು ಪ್ರಶ್ನೆಗಳನ್ನಷ್ಟೆ ಪ್ರಯತ್ನಿಸಿದ್ದೇನೆ ಎಂದಾಗುತ್ತದೆ. ಸಾಮಾನ್ಯ ಪ್ರಶ್ನೆಪತ್ರಿಕೆಯ ಕೀ ಆನ್ಸರ್‍ನಲ್ಲಿ ಕೆಲವರಿಗೆ ಈ ಸಮಸ್ಯೆಯಾಗಿದ್ದರೆ, ಕನ್ನಡ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಿ ಮಾತ್ರ ಪ್ರತಿಯೊಬ್ಬರಿಗೂ ಈ ತೊಂದರೆಯಾಗಿದೆ. ಕನಿಷ್ಠ 30 ಪ್ರಶ್ನೆಗಳಾದರೂ ಟಿoಣ ಂಣಣemಠಿಣ ಎಂದು ಎಲ್ಲರಿಗೂ ತೋರಿಸುತ್ತಿದೆ ಎಂದು ಆರೋಪಿಸಿದರು.

ಮರು ಪರೀಕ್ಷೆ ಬರೆದೂ ಮತ್ತೆ ಮರು ಪರೀಕ್ಷೆ…? :

ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷದ ನಡುವೆಯೇ ಪರೀಕ್ಷೆ ನಡೆದಿತ್ತು. ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ನಡೆಸಿದರೂ ಮತ್ತೊಂದು ಸಮಸ್ಯೆಯಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳು ಪುನಾರಾವರ್ತನೆಯಾಗಿದ್ದವು. ಹೀಗಾಗಿ ಪರೀಕ್ಷೆ ಬರೆದವರಿಗೂ ಮರು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ.

ಅಲ್ಲದೆ ತುಮಕೂರಿನಲ್ಲಿ ಪರೀಕ್ಷೆ ಬರೆಯಲು ಬಯಸಿದ್ದ ಅನೇಕರನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಹಾಕಲಾಗಿತ್ತು. ಹೀಗಾಗಿ ನಮ್ಮ ಸಮಯ, ಹಣ ಎರಡೂ ವ್ಯರ್ಥವಾಗಿದೆ ಎಂದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಸಿದ್ದರಾಜು ಆತಂಕ ವ್ಯಕ್ತಪಡಿಸಿದರು.

ಆಕ್ಷೇಪಣೆಗೆ ದುಬಾರಿ ಶುಲ್ಕ :

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು, ಕೀ ಆನ್ಸರ್‍ಗಳನ್ನು ಜನವರಿ 21, 2022 ರಂದು ಬಿಡುಗಡೆ ಮಾಡಿದೆ. Uಉಅ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು  ಪರಿಶೀಲಿಸಬಹುದು. ಆಕ್ಷೇಪಣೆಗಳನ್ನು ಜನವರಿ 24, 2022 ರವರೆಗೆ ಸಲ್ಲಿಬಹುದು.

ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಆಕ್ಷೇಪಣೆ ಶುಲ್ಕವನ್ನು ಪಾವತಿಸಲು ಜನವರಿ 24 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಪ್ರತಿ ಸವಾಲಿನ ಉತ್ತರಕ್ಕೆ 1000 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಆಕ್ಷೇಪಣೆ ಸರಿಯಾಗಿದ್ದರೆ ಕೀ ಆನ್ಸರ್ ಪರಿಷ್ಕರಿಸಲಾಗುತ್ತದೆ. ಪಾವತಿಸಿದ ಸಂಸ್ಕರಣಾ ಶುಲ್ಕವನ್ನೂ ಮರುಪಾವತಿಸಲಾಗುತ್ತದೆ.

                     ನೀವು ಸಬ್ಮಿಟ್ ಮಾಡಿದ್ದೀರಿ. ಸಬ್ಮಿಟ್ ಆದವರಿಗೆ ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎನ್ನಲಾಗಿತ್ತು. ಸಬ್ಮಿಟ್ ಆದವರಿಗೆ ಸರಿಯಾಗಿ ಫಲಿತಾಂಶ ಕೊಡಬೇಕು ತಾನೇ? ಈಗ ನಾಟ್ ಅಟೆಂಪ್ಟ್ ಎಂದು ಬರುತ್ತಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೇ ನೀಡಿ ಬಂದಿದ್ದೇವೆ. ಮೂರ್ನಾಲ್ಕು ಪ್ರಶ್ನೆಗಳನ್ನು ಬಿಟ್ಟು ಬಂದಿದ್ದೇವೆ ಎಂದರೆ ಒಪ್ಪಬಹುದು. ಆದರೆ ಮೂವತ್ತರಿಂದ ಅರವತ್ತು ಪ್ರಶ್ನೆಗಳನ್ನು ಬಿಟ್ಟು ಬರಲು ಸಾಧ್ಯವೇ?

– ಮಲ್ಲಿಕಾರ್ಜುನ್, ತುಮಕೂರು ವಿವಿ ವಿದ್ಯಾರ್ಥಿ

             ಕೀ ಉತ್ತರಗಳ ಸಂಬಂಧ ನೋಟಿಫಿಕೇಷನ್ ಬಿಡುಗಡೆ ಮಾಡಿರುವ ಎನ್‍ಟಿಎ, ತೊಂದರೆಯಾಗಿರುವ ಕನ್ನಡ ಪರೀಕ್ಷಾರ್ಥಿಗಳ ಉತ್ತರ ಪತ್ರಿಕೆಯನ್ನೂ ಒಳಗೊಂಡಿರುವುದಾಗಿ ತಿಳಿಸಿದೆ.

ಆದರೆ ತಾಂತ್ರಿಕ ದೋಷದ ನಡುವೆಯೂ ಪರೀಕ್ಷೆ ಬರೆದವರ ಕೀ ಉತ್ತರಗಳಲ್ಲಿ ತೊಂದರೆ ಕಾಣಿಸಿರುವುದು ಗೊಂದಲ ಸೃಷ್ಟಿಸಿದೆ. ಕನ್ನಡದ ಎಲ್ಲ ಪರೀಕ್ಷಾರ್ಥಿಗಳಿಗೂ ಇದೇ ಸಮಸ್ಯೆಯಾಗಿರುವಾಗ ಕೀ ಉತ್ತರ ಬಿಟ್ಟು ಗೊಂದಲ ಸೃಷ್ಟಿಸಿರುವುದು ಏತಕ್ಕೆ?

-ದರ್ಶನ್, ತುಮಕೂರು ವಿವಿ ವಿದ್ಯಾರ್ಥಿ

     ಪರೀಕ್ಷೆ ದಿನ ಹಿಂದಿ ಪ್ರಶ್ನೆಗಳೆಲ್ಲ ಕಾಣಿಸಿಕೊಂಡು ಆತಂಕಕ್ಕೊಳಗಾದೆವು. ಮತ್ತೆ ಲಾಗಿನ್ ಆಗಿ ಅನೇಕರು ಪರೀಕ್ಷೆ ಬರೆದಿದ್ದೇವೆ. ಏನು ಮಾಡಬೇಕೆಂದೇ ಗೊತ್ತಾಗುತ್ತಿಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಮಾತ್ರ ಈ ಸಮಸ್ಯೆಯಾಗುತ್ತಿದೆ ಎಂದು ಆತಂಕ ತೋಡಿಕೊಂಡರು.

                                                                         -ಮಂಜುನಾಥ್, ಬೆಂಗಳೂರು ವಿವಿ ವಿದ್ಯಾರ್ಥಿ

 

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap