ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಬಸವರಾಜ್ ಕಲ್ಲಟ್ಟಿ ಉಪಾಧ್ಯಕ್ಷ ಅಶೋಕ್ ಪಟ್ಟಣಶೆಟ್ಟಿ ಅವಿರೋಧ ಆಯ್ಕೆ  

ಸಂಕೇಶ್ವರ :

    ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಬಸವರಾಜ ಕಲ್ಲಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಟ್ಟಣಶೆಟ್ಟಿ ಅವರು ಅವಿರೋಧ ಆಯ್ಕೆ ಮಾಡಿದ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಇವರು ಯಾವ್ ಪ್ರಕಾರ ಹಾಲಶಿದ್ದನಾಥ ಸಕ್ಕರೆ ಕಾರ್ಖಾನೆ ನಡೆಸಿಕೊಂಡು ಬಂದಿದ್ದಾರೆ ಅದೇ ಪ್ರಕಾರ ಹಿರಣ್ಯಕೆಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಹ ಅಭಿವೃದ್ಧಿ ಮಾಡಲಾಗುವುದು ಎಂದರು.

    ಕಾರ್ಖಾನೆ ಈಗಾಗಲೇ 210 ಎಕರೆ ಜಮೀನ್ 52 ಮೆಗಾ ವಾಟ ಕೋ. ಜನರೇಷನ್ 150 ಕೆ ಎಲ್ ಪಿ ಡಿ . ಇಥೆನೌಲ ಪ್ರಾರಂಭ ಹಂತ ದಲ್ಲಿ ಇದ್ದು 10 ಸಾವಿರ ಕ್ರೀಸಿಂಗ್ ಕೆಪ್ಯಾಸಿಟಿ ಇದೆ, ಒಳ್ಳೆಯ ರೀತಿ ನಡಿಸಿಕೊಂಡು, ರೈತರ ಬಿಲ್ಲು, ಕಾರ್ಮಿಕರ ವೇತನ ,ಸಾಲ ಬಡ್ಡಿ,ಕಟ್ಟಿ ಒಳ್ಳೆಯ ರೀತಿಯಾಗಿ ಕಾರ್ಖಾನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

     ಬರುವ ದಿನಮಾನಗಳಲ್ಲಿ ಪ್ರತಿ ಸದಸ್ಯರಿಗೂ 50 ಕೆಜಿ ಸಕ್ಕರೆ ಹಾಗೂ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಪ್ರತಿ ಟನಗೆ ಅರ್ಧ ಕೆಜಿ ಸಕ್ಕರೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

     ಸಕ್ಕರೆ ಕಾರ್ಖಾನೆಯ ಸಭಾಗೃಹದಲ್ಲಿ ಮಂಗಳವಾರ ಬೆಳಿಗ್ಗೆ ಸಭೆ ಸೇರಿದ ಸದಸ್ಯರು ಬಸವರಾಜ ಕಲ್ಲಟ್ಟಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಟ್ಟಣಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಘೋಷಣೆ ಮಾಡಲಾಯಿತು.. ಆದರೆ ಈ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಭೆಯಿಂದ ಮಾಜಿ ಅಧ್ಯಕ್ಷ ನಿಖಿಲ್ ಕತ್ತಿ ಅವರು ದೂರ ಉಳಿಯುವ ಮೂಲಕ ಎಲ್ಲರು ಪ್ರಶ್ನೆ ಮಾಡುವಂತಾಗಿದೆ.

Recent Articles

spot_img

Related Stories

Share via
Copy link