ನಾಯಕನಹಟ್ಟಿ
ವರದಿ ಹರೀಶ್ ನಾಯಕನಹಟ್ಟಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಘಟಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಿರೇಹಳ್ಳಿ ಹತ್ತಿರ ರಸ್ತೆ ತಡೆ ಚಳುವಳಿ ಮಾಡಲಾಗಿತ್ತು ರಸ್ತೆ ತಡೆ ಚಳುವಳಿಯ ನೇತೃತ್ವ ವಹಿಸಿದ್ದ ರಾಜ್ಯ ಮುಖಂಡರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ
ನಮ್ಮ ಕ್ಷೇತ್ರದ ಎಂಎಲ್ಎ ಅವರು ಆದೇಶ ಮಾಡಿದರು ಈವರೆಗೂ ಯಾವುದೇ ತರಹದ ಅಭಿವೃದ್ಧಿ ಅಧಿಕಾರಿಗಳಿಂದ ಆಗುತ್ತಿಲ್ಲ
ಸಾರ್ವಜನಿಕರು ಮತ್ತು ರೈತರು ದಿನಾ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಅಧಿಕಾರಿಗಳಿಂದ ಬಂದಿದೆ ಯಾರು ಸಹ ಕಚೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ ಎಲ್ಲರೂ ಕೇಂದ್ರ ಸ್ಥಾನದಲ್ಲಿ ಯಾವೊಬ್ಬ ಅಧಿಕಾರಿಯೂ ಇರುವುದಿಲ್ಲ ಎಲ್ಲರೂ ನೂರು ಕಿಲೋಮೀಟರ್ ಇನ್ನೂರು ಕಿಲೋಮೀಟರ್ ಇಂದ ಬರುತ್ತಿದ್ದಾರೆ.
ಇದರ ನೇರ ದುಷ್ಪರಿಣಾಮ ಸಾರ್ವಜನಿಕರು ಮತ್ತು ರೈತರಿಗೆ ಬೀಳುತ್ತಿದೆ ಎಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಬೇಕು .ಕೋಡಿಹಳ್ಳಿರಸ್ತೆಯಿಂದ ಬೇಡ ರೆಡ್ಡಿಹಳ್ಳಿ ಮೂಲಕ ಶ್ರೀ ಕ್ಷೇತ್ರ ಗೌರವ ಸಮುದ್ರ ಮಾರಮ್ಮನ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸುಮಾರು 25 ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣ ಮಾಡಿದ್ದು ಈವರೆಗೂ ಯಾವುದೇ ಡಾಂಬರೀಕರಣ ಮಾಡಿರುವುದಿಲ್ಲ
ಹಿರೇಹಳ್ಳಿಯಿಂದ ಚಿಕ್ಕಳ್ಳಿ ಮೂಲಕ ಬೇಡರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ಎರಡು-ಮೂರು ಅಡಿಗಳು ಗುಂಡಿಗಳು ಬಿದ್ದಿದ್ದು ಸೀಮೆ ಜಾಲಿ ಗಿಡಗಳು ರಸ್ತೆ ಕಾಣದಂತೆ ಅಬ್ಬಿದ್ದು ಈವರೆಗೂ ಯಾವುದೇ ತರಹದ ರಸ್ತೆ ಆಗಿರುವುದಿಲ್ಲ ಶಾಲಾ ಮಕ್ಕಳು ಮತ್ತು ರೈತರು ಸಾರ್ವಜನಿಕರಿಗೆ ಬಹಳ ತೊಂದರೆ ಆಗಿರುತ್ತದೆ. ಬೇಡ ರೆಡ್ಡಿಹಳ್ಳಿ ಮತ್ತು ತಳಕು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಂಬಿಬಿಎಸ್ ವೈದ್ಯರಿಲ್ಲದೆ ರೋಗಿಗಳು ಅಲೆದಾಡುವ ಪರಿಸ್ಥಿತಿ ಬಂದಿದೆ ಬೇಡ ರೆಡ್ಡಿ ಹಳ್ಳಿಯಲ್ಲಿ ಸೊಸಜ್ಜಿತ ನೂತನ ಆಸ್ಪತ್ರೆ ನಿರ್ಮಾಣವಾಗಿದ್ದು ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಬಿಕೋ ಅನ್ನುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಿರೇಹಳ್ಳಿ ರೀ ಸರ್ವೇ ನಂಬರ್ 161 ರಲ್ಲಿ ಬೋರ್ವೆಲ್ ಇದ್ದು ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಜಮೀನು ಸರ್ವಿಸ್ ರಸ್ತೆಗೆ ಸ್ವಾಧೀನ ಪಡಿಸಿಕೊಂಡು ಈವರೆಗೂ ಬೋರ್ವೆಲ್ ಗೆ ಪರಿಹಾರ ಹಣ ನೀಡದೆ ಹೆದ್ದಾರಿ ಪ್ರಾದಿಕಾರ ರೈತರಿಗೆ ಕಿರುಕುಳ ನೀಡುತ್ತಿದೆಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದು ಶಿಕ್ಷಣವನ್ನು ಹಣದ ಮಾಫಿಯಾ ವಾಗಿದ್ದು ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಅದೇ ರೀತಿ ಸರ್ಕಾರಿ ಶಾಲೆಗಳ
ಮೇಲ್ಚಾವಣಿಗಳು ಮಳೆಯಿಂದ ಸೋರುತ್ತಿದ್ದು ಕಟ್ಟಡಗಳನ್ನು ಸಿಕ್ಕಿಲ್ಲ ಗೊಂಡಿದ್ದರು ಅಧಿಕಾರಿಗಳು ಮತ್ತು ಶಾಸಕರು ರಿಪೇರಿ ಮಾಡಿಸುತ್ತಿಲ್ಲ ಶಾಲಾ ಮಕ್ಕಳನ್ನು ಪೋಷಕರು ಭಯಭೀತಿಯಲ್ಲಿ ಕಳಿಸಿದ್ದಾರೆ ಗ್ರಾಮೀಣ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುತ್ತಿದ್ದು.
ಈ ಹಿಂದೆ ಚಳುವಳಿ ಮುಖಾಂತರ ಜಿಲ್ಲಾ ಪಂಚಾಯತಿಗೆ ಮನವಿ ಕೊಟ್ಟರು ಯಾವುದೇ ರೀತಿಯ ಕ್ರಮ ವಹಿಸಿರುವುದಿಲ್ಲ ಇದರ ಜವಾಬ್ದಾರಿ ಪಿಡಿಒ ಗಳು ಆಗಿದ್ದು ಯಾವುದೇ ಕ್ರಮ ವಹಿಸಿರುವುದಿಲ್ಲ ರೈತರ ಜಮೀನುಗಳ ಅಳತೆಯಲ್ಲಿ ಯದ್ವ ತತ್ವ ದಾಖಲೆ ಬರೆದು ರೈತರಿಗೆ ಜಗಳ ಮಾಡಿಕೊಳ್ಳಲು ಸರ್ವೆ ಅಧಿಕಾರಿಗಳು ದಾರಿ ಮಾಡಿಕೊಡುತ್ತಿದ್ದಾರ ಆದ್ದರಿಂದ ರೈತರ ದಾಖಲೆಗಳನ್ನು ಸರಿಪಡಿಸಿಕೊಡಬೇಕು
ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಮಾರ್ಗಗಳ 11 ಕೆ ವಿ ಮತ್ತು ಖುಷಿ ಪಂಪ್ಸೆಟ್ಟುಗಳ ಸರಬರಾಜು ಆಗುತ್ತಿರುವ ವಿದ್ಯುತ್ ಮರ ಗಿಡಗಳು ಬಳ್ಳಿಗಳು ಬೆಳೆದಿದ್ದು ಇದರಿಂದ ವಿದ್ಯುತ್ ಭೂಮಿಯೊಳಗೆ ಸೋರಿಕೆಯಾಗಿ ವೋಲ್ಟೇಜ್ ಕಡಿಮೆಯಾಗಿ ದಿನಾಲು ಟಿಸಿ ಮತ್ತು ಪಂಪ್ಸೆಟ್ಟುಗಳು ಸುಟ್ಟು ಹೋಗುತ್ತಿವೆ.
ಅಧಿಕಾರಿಗಳ ನಿರ್ಲಕ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ನೂರಾರು ಕೋಟಿ ವಿದ್ಯುತ್ ನಷ್ಟವಾಗುತ್ತಿದೆ ಮತ್ತು ಈ ಹಿಂದಿನಂತೆ ಅಕ್ರಮ ಸಕ್ರಮ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಬೇಕು.
ಹಿರಿಯ ನಾಗರಿಕರು ಸೇರಿದಂತೆ ತಿಂಗಳ ಮಾಶಾಸನವನ್ನು ಬಡವರಿಗೆ ನಿಲ್ಲಿಸಿದ್ದು ತಕ್ಷಣವೇ ಯಥಾ ಸ್ಥಿತಿ ಜಾರಿ ಮಾಡಬೇಕು ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿದ್ದು ಬಡವರನ್ನು ಕೈಬಿಟ್ಟಿದ್ದು ಮರು ಸೇರ್ಪಡೆ ಮಾಡಿ ಆಹಾರ ಧಾನ್ಯ ವಿಸ್ತರಿಸಬೇಕು ತಳಕು ಮತ್ತು ಹಿರೇಹಳ್ಳಿ ಬಿಜಿಕೆರೆ ಮತ್ತು ಹಾನಗಲ್ ರಾಯಪುರ ಮಾರ್ಗದಲ್ಲಿ ಪ್ರಯಾಣಿಸುವ ಬಸ್ಸುಗಳು ಯಾವುದೇ ರೀತಿಯಲ್ಲಿ ಒಳಗಡೆ ಬರುವುದಿಲ್ಲ ಎಲ್ಲರೂ ಹೆದ್ದಾರಿಯಲ್ಲಿ ಹೋಗುತ್ತಿದ್ದಾರೆ ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಅನೇಕ ಬಾರಿ ಮನವಿ ಕೊಟ್ಟರು ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ವಿನಾಕಾರಣ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದಾರೆ
ಸಸಿ ಮರ ದಿಂದ ಬುಕ್ಕಂಬೂದಿಗೆ ಸಂಪರ್ಕಿಸುವ ರಸ್ತೆ ಮೊಣ್ಣೊ ಗುಂಡಿಗಳಿಂದ ಕೂಡಿದ್ದು ಇದಕ್ಕೆ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು ಚಳುವಳಿ ಸ್ಥಳಕ್ಕೆ ತಹಸಿಲ್ದಾರರಾದ ರೆಹಮಾನ್ ಪಾಷಾ ತಳಕು ಎಇಇ ಮಮತಾ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಸಿರೇಹಳ್ಳಿ ಡಿ ಓ ಎಸ್ ಪಿ ರಾಜಣ್ಣ ಶಿಕ್ಷಣಾಧಿಕಾರಿಗಳು ಸುರೇಶ್ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಶಶಿಧರ್ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಇಲಾಖೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಇದೇ ವೇಳೆ ಮಾತನಾಡಿದ ತಹಶೀಲ್ದಾರ್ರಾದ ರೆಮಾನ್ ಪಾಷಾ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಕರೆಸಿ ರೈತರೊಂದಿಗೆ ಚಳ್ಳಕೆರೆತಾಲೂಕ ಕಚೇರಿಯಲ್ಲಿ ಸಭೆಯನ್ನು ಮಾಡುತ್ತೇನೆಂದು ಬರವಸೆ ನೀಡಿದರು ಅಧಿಕಾರಿಗಳು ಭಾಗವಹಿಸಿದ್ದರು.
ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿದ್ದ ರೈತ ಮುಖಂಡರುಗಳು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಮಲ್ಲಹಳ್ಳಿ ರವಿಕುಮಾರ್ ಎಸ್ ಆರ್ ತಿಪ್ಪೇಸ್ವಾಮಿ ಜಿಲ್ಲಾಪ್ರಧಾನ ಕಾರ್ಯದರ್ಶಿ ನರಸಿಂಹ ರೆಡ್ಡಿ ಅಶೋಕ್ ಸತೀಶ್ ಮಲ್ಲಸಮುದ್ರ ಗಂಗಾಧರ್ ತಾಲೂಕ ಅಧ್ಯಕ್ಷರು ಚಿಕ್ಕ ಹಳ್ಳಿ ರಂಗಾರೆಡ್ಡಿ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ತಿಪ್ಪೇಸ್ವಾಮಿ ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ ತಾಲೂಕು ರೇಷ್ಮೆ ಸಂಘದ ಅಧ್ಯಕ್ಷರಾದ ಬಿವಿ ತಿಪ್ಪೇಸ್ವಾಮಿ ಹೊನ್ನೂರು ಶ್ರೀನಿವಾಸ್ ನಾಗಪ್ಪ ಬಿವಿ ತಿಪ್ಪೇಸ್ವಾಮಿ ಮಹೇಶ್ ಚಿಕ್ಕಳ್ಳಿ ವೆಂಕಟೇಶ್ ರೆಡ್ಡಿ ಸಣ್ಣ ತಿಪ್ಪೆ ಸ್ವಾಮಿ ಕಾಕಿ ಬೋರಿನ ಹಟ್ಟಿ ತಿಪ್ಪೇಸ್ವಾಮಿ ರುದ್ರಮನಹಳ್ಳಿ ಪೂಜಾರಿ ಸೂರಮ್ನಳ್ಳಿ ರಾಜಣ್ಣ ವೀರಣ್ಣ ಈರಣ್ಣ ಮಂಜುನಾಥ್ ಎನ್ ತಿಪ್ಪೇಸ್ವಾಮಿ ಡಿ ಚಂದ್ರಶೇಖರ್ ನಾಯಕ್ ಒಭ್ಯ ನಾಯಕ್ ಮೀಟ್ಟಿ ನಾಯಕ್ ಡಿಟಿ ರಾಜಣ್ಣ ಡಿಪಿ ನಟರಾಜ್ ಮುಂತಾದ ನೂರಾರು ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು
