ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಟ್ ಆ್ಯಂಡ್ ರನ್; ಪಾದಾಚಾರಿಗೆ ಗಂಭೀರ ಗಾಯ

ಹುಬ್ಬಳ್ಳಿ:

    ರಸ್ತೆ ದಾಟುತ್ತಿರುವಾಗ ವೇಗವಾಗಿ ಬಂದ ಕಾರು ಚಾಲಕ, ಪಾದಾಚಾರಿಗೆ ಗುದ್ದಿದ ಪರಿಣಾಮ, ಆ ವ್ಯಕ್ತಿಯ ಕಾಲು ಮುರಿದು ರಕ್ತಗತವಾಗಿ ಗಂಭೀರವಾದ ಗಾಯವಾದ ಘಟನೆ ಇಂದು ಬೆಳಿಗ್ಗೆ, ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

   ಅಪರಿಚಿತ ಪಾದಾಚಾರಿಯೊಬ್ಬರು ರಸ್ತೆ ದಾಟುತ್ತಿರುವಾಗ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೊರಟ ಕಾರು ಚಾಲಕ ಆ ಪಾದಾಚಾರಿಗೆ ಗುದ್ದಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಪಾದಾಚಾರಿಗೆ ಗಂಭೀರವಾದ ಗಾಯವಾಗಿದ್ದು, ಅಲ್ಲೆ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸರಿಗೆ ಮತ್ತು ಆ್ಯಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap