ಕೊರಟಗೆರೆ :-
ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ಕನಸು ಒತ್ತ ಗ್ರಾಮ ಪಂಚಾಯಿತಿ ಮೂಲ ಉದ್ದೇಶವನ್ನೇ ನಿರ್ಲಕ್ಷ್ಯ ಮಾಡಿದ ಅಭಿವೃದ್ಧಿ ಕುಂಠಿತ ಗ್ರಾಮ ಪಂಚಾಯತಿಯ ಹಲವು ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡ ಹೊಳವನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ವಸಂತ್ ಕುಮಾರ್ ಎಸ್ ಎಂಬುವರನ್ನ ತುಮಕೂರು ಜಿಲ್ಲಾ ಪಂಚಾಯತಿ ಸಿ ಇ ಓ ಪ್ರಭು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ಪ್ರತಿಷ್ಠಿತ ಗ್ರಾಮ ಪಂಚಾಯತಿಗಳಲ್ಲಿ ಒಂದಾದ ಹೋಬಳಿ ಕೇಂದ್ರ ಸ್ಥಾನದಲ್ಲಿರುವ ಹೊಳವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇತ್ತೀಚಿಗೆ ಅಭಿವೃದ್ಧಿ ಹಿನ್ನಡೆ ಪಿಡಿಒ ನಿರ್ಲಕ್ಷ್ಯ ವರ್ತನೆ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಕುಂಠಿತ ಮನಗಂಡ ಕೊರಟಗೆರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಪೂರ್ವ ಅನಂತರಾಮು ಶಿಫಾರಸ್ಸುನ ಮೇರೆಗೆ ಜಿಲ್ಲಾ ಪಂಚಾಯತ್ ಸಿಇಓ ಪ್ರಭು ಹೊಳವನಹಳ್ಳಿ ಪಿ ಡಿ ಓ ವಸಂತ್ ಕುಮಾರ್ ಎಸ್ ವಿರುದ್ಧ ಶಿಸ್ತು ಕ್ರಮಕ್ಕೆ ಜರುಗಿಸಿ ಅಮಾನತುಗೊಳಿಸಿದ್ದಾರೆ.
ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಗ್ರೇಡ್ ಒನ್ ಗ್ರಾಮ ಪಂಚಾಯಿತಿಯಾಗಿದ್ದು , ವಾಣಿಜ್ಯ ಕೇಂದ್ರವಾಗಿ ಬಹಳ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಳ್ಳುವುದರ ಜೊತೆಗೆ ಇಡೀ ಕೊರಟಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೇಂದ್ರೀಯ ಸ್ಥಾನವಾಗಿರುವ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಬಹಳ ಕುಂಠಿತವಾಗಿದ್ದು ಹಲವು ಬಾರಿ ತಾಲೂಕು ಪಂಚಾಯಿತಿ ಇ ಓ ಅಪೂರ್ವ ನಂತರ ಅಭಿವೃದ್ಧಿ ಬಗ್ಗೆ ಚೇತರಿಸಿಕೊಳ್ಳುವಂತೆ ಹಲವು ನೋಟಿಸ್ ನೀಡಿದರೂ ಕ್ಯಾರೆ ಅನ್ನದ ಪಿಡಿಒ ವಸಂತ್ ಕುಮಾರ್ ವಿರುದ್ಧ ಅಂತಿಮವಾಗಿ ಜಿಲ್ಲಾ ಪಂಚಾಯತ್ ಸಿಇಒ ಅಮಾನತ್ತಿನ ಅಸ್ತ್ರ ಬಳಸಲಾಗಿದ್ದು ಈ ಅಮಾನತ್ತಿನ ಆದೇಶದಿಂದ ಇತರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಲಿ ಎಂದು ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.
ಕೊಳವನಹಳ್ಳಿ ಪಿಡಿಒ ವಸಂತ್ ಕುಮಾರ್ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯರುಗಳೇ ಬಹುತೇಕ ಸದಸ್ಯರುಗಳು ಈ ಪಿಡಿಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅಭಿವೃದ್ಧಿ ವಿಚಾರದಲ್ಲಿ ಕೆಲವು ಗ್ರಾಮ ಪಂಚಾಯತಿ ಸದಸ್ಯರನ್ನ ನಿರ್ಲಕ್ಷ್ಯ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಬಹುತೇಕ2022 -23 ಹಾಗೂ 23 -24 ಸೇರಿದಂತೆ 25 ನೇ ಸಾಲಿನ ನರೇಗಾ ಕಾಮಗಾರಿಯಲ್ಲಿ ಬಹಳಷ್ಟು ಲೋಪದೋಷಗಳಿದ್ದು ಅದು ಸಹ ಹೆಚ್ಚಿನ ತರಿಕೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರೈಹಿಸುತ್ತಿದ್ದು, ಈ ಸ್ವತ್ತು ನೀಡುವ ವಿಚಾರದಲ್ಲಿ ಬಹಳಷ್ಟು ಲೋಪ ದೋಷಗಳಾಗಿದೆ ಅಲ್ಲದೆ ಬಹಳಷ್ಟು ಲೇಔಟ್ಗಳಲ್ಲಿ ಸಿಎ ಸೈಟ್ ಹಾಗೂ ಪಾರ್ಕ್ ಗಳಿಗೆ ಜಗಳೆ ಗುರುತಿಸದೆ ಈ ಸತ್ತು ನೀಡಲಾಗಿದೆ , ಕಾನೂನು ಉಲ್ಲಂಘನೆಯಾಗಿ ಬಹಳಷ್ಟು ಉಲ್ಲಂಘನೆ ಆಗಿರುವುದು ಸಹ ಪಿಡಿಒ ವಿರುದ್ಧ ಆರೋಪಗಳ ಸುರಿಮಳೆ ಸುರಿಮಳೆ ಹರಿಯುತ್ತಿದೆ.
ಒಟ್ಟಾರೆ ಹೊಳವನಹಳ್ಳಿ ಪಿಡಿಒ ವಸಂತ್ ಕುಮಾರ್ ಸತತ ನಾಲ್ಕು ವರ್ಷಗಳ ಕಾಲ ಒಂದೇ ಗ್ರಾಮ ಪಂಚಾಯತಿಯಲ್ಲಿ ಟಿಕ್ಕಾಣಿ ಹೊಡಿ ಇಲ್ಲಿಯ ಬಹಳಷ್ಟು ನಾಡಿಮಿಡಿತಗಳನ್ನ ಹರಿತಿದ್ದರಿಂದ ಅಭಿವೃದ್ಧಿ ವಿಚಾರದಲ್ಲೂ ಬಹಳ ನಿರ್ಲಕ್ಷ್ಯ ತಾಳಿತಿರುವುದಲ್ಲದೆ ಬಹಳಷ್ಟು ಭ್ರಷ್ಟಾಚಾರ ನಡೆಸಲಾಗಿದ್ದು, ಹಲವು ಬಾರಿ ಕೊರಟಗೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತರಾಮ್ ಅವರ ಮಾರ್ಗದರ್ಶನವನ್ನು ನಿರ್ಲಕ್ಷಿಸಿದ ಕಾರಣ ಹಲವು ಬಾರಿ ನೋಟಿಸ್ ನೀಡಿದರು ಕ್ಯಾರೆ ಎನ್ನದ ಪಿಡಿಓ ವಿರುದ್ಧ ಅಂತಿಮವಾಗಿ ಸಿಇಒ ಪ್ರಭು ಅಮಾನತ್ತಿನ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.








