ಯಾರಿಗೆ ಹೇಳನಾ ನಮ್ಮ ಪ್ರಾಬ್ಲಮ್….!!!

 

ಪಡಿತರ ಪಡೆಯಲು ಹರಸಾಹಸ ಒಂದಿನ ಬಿಟ್ರೆ ಅಕ್ಕಿ ಇಲ್ಲ.

 

 ಚಳ್ಳಕೆರೆ

     ಹೊತ್ತುಟ್ಟೋಕು ಮುಂಚೆ ಕೆಲಸ, ಊಟ, ನೀರು ಎಲ್ಲಾ ಬಿಟ್ಟು ಕಾದು ಕುಳಿತರೂ ಪಡಿತರ ದೊರೆಯುವುದು ಅನುಮಾನ. ಪಡಿತರ ತೆಗೆದುಕೊಳ್ಳಲು ನಾ ಮುಂದು, ತಾ ಮುಂದು ಎಂದು ತಳ್ಳಾಟ ನೂಕಾಟ ಪ್ರತಿ ತಿಂಗಳು ಸರ್ವೇ ಸಾಮಾನ್ಯವಾಗಿದೆ.

     ತಾಲ್ಲೂಕಿನ ನನ್ನಿವಾಳ ಗ್ರಾಮದ‌ ನ್ಯಾಯಬೆಲೆ ಅಂಗಡಿ 2ನೇ ಭಾಗದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಹುತೇಕ ಜನರು ಪಡೆಯುತ್ತಾರೆ. 

     ಈ ಪಡಿತರ ಪಡೆಯಬೇಕಾದರೆ ಫಲಾನುಭವಿಗಳು ಸುಮಾರು 5ರಿಂದ 6 ಕೀ ದೂರದ ಸುತ್ತಮುತ್ತಲ ಹಟ್ಟಿಗಳಿಂದ ದಿನದ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿಯ ಮುಂದೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಬಾರಿ ಅಧಿಕಾರಿಗಳಿ, ನ್ಯಾಯಬೆಲೆ ಅಂಗಡಿ ಮಾಲೀಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

     ಮುಂಜಾನೆ 5 ಗಂಟೆಗೆ ಮನೆಬಿಟ್ಟು ದಿನವೀಡಿ ಕಾದರೂ ಪಡಿತರ ಸಿಗುವುದು ಡೌಟು.

    ಅಷ್ಟೇ ಅಲ್ಲದೇ ಬಿರು ಬಿಸಿಲು ಲೆಕ್ಕಿಸದೇ ಬಿಸಿಲಲ್ಲಿ ನಿಂತು ಕಾದು ಪಡಿತರ ಪಡೆಯಬೇಕಿದೆ. ಸರ್ಕಾರ ಉಚಿತವಾಗಿ ಪಡಿತರ ವಿತರಣೆ ಮಾಡಬೇಕು ಎಂದು ಸೂಕ್ತ ನಿರ್ದೇಶನ ನೀಡಿದೆ. ಆದರೂ ಇಲ್ಲಿ ಇಂತಿಷ್ಟು ಹಣ ಪಡೆಯುತ್ತಾರೆ ಎಂದು ಫಲಾನುಭವಿಗಳು ಆರೋಪಿಸುತ್ತಾರೆ.

    ಪಡಿತರ ಪಡೆಯಲು ಈ ರೀತಿಯ ನೂಕು ನುಗ್ಗಲು ಆಗುತ್ತಿರುವುದಕ್ಕೆ ಕಾರಣವೇನೆಂದು ಕೇಳಿದಾಗ ಪಡಿತರದಾರರು ಪ್ರತಿಕ್ರಿಯಿಸಿ, ಈ ನ್ಯಾಯಬೆಲೆ ಅಂಗಡಿಯಲ್ಲಿ ಒಂದೆರಡು ದಿನ ಮಾತ್ರ ಪಡಿತರ ನೀಡುತ್ತಾರೆ, ನಂತರ ಬಂದರೆ ಪಡಿತರ ಖಾಲಿಯಾಗಿದೆ.

    ಮುಂದಿನ ತಿಂಗಳು ಕೊಡುತ್ತೇನೆ ಎಂದು ಹೇಳುತ್ತಾರೆ. ನ್ಯಾಯಬೆಲೆಅಂಗಡಿಯಲ್ಲಿ ಎಷ್ಟು ಪಡಿತರ ಚೀಟಿ ಇರುವುದೋ ಅಷ್ಟು ಕಾರ್ಡ್ ಗಳಿಗೂ ಅಕ್ಕಿ ಬಂದಿದ್ದರೂ ಪಡಿತರ ಮಾತ್ರ ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Recent Articles

spot_img

Related Stories

Share via
Copy link